ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಗರಿಬೊಮ್ಮನಹಳ್ಳಿ: ಅಭಿವೃದ್ಧಿ ಹೆಸರಲ್ಲಿ 39 ಮರಗಳ ಹನನ

ಸ್ಥಳೀಯರು, ಪರಿಸರ ಪ್ರಿಯರಿಂದ ವಿರೋಧ
Published : 4 ಅಕ್ಟೋಬರ್ 2024, 13:18 IST
Last Updated : 4 ಅಕ್ಟೋಬರ್ 2024, 13:18 IST
ಫಾಲೋ ಮಾಡಿ
Comments

ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರದ ತೇರು ಬೀದಿಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ 39 ಮರಗಳನ್ನು ಕತ್ತರಿಸಲಾಗಿದೆ.

ಎರಡು ವರ್ಷಗಳ ಹಿಂದೆ ಚರಂಡಿ ನಿರ್ಮಿಸಲಾಗಿದ್ದು, ಉತ್ತಮವಾಗಿದೆ. ಅದನ್ನು ಕಿತ್ತು ಹೊಸ ಚರಂಡಿ ನಿರ್ಮಿಸುವ ಔಚಿತ್ಯ ಏನಿತ್ತು? ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ನಾಶ ಮಾಡುವುದು ಸರಿಯಲ್ಲ ಎಂದು ಪರಿಸರ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

‘ಈಗಿರುವ ರಸ್ತೆಯಲ್ಲಿಯೇ ಕಳೆದ 70 ವರ್ಷಗಳಿಂದ ಯಾವುದೇ ವಿಘ್ನ ಇಲ್ಲದೆ ವೆಂಕಟೇಶ್ವರ ರಥ ಎಳೆಯಲಾಗುತ್ತಿದ್ದರೂ, ಈಗ ರಸ್ತೆ ನಿರ್ಮಿಸುತ್ತಿರುವುದು ಸರಿ ಅಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಳೇ ಪುರಸಭೆ ಕಚೇರಿ ಎದುರಿಗೆ ತೇರು ಬೀದಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ಕ್ರಿಯಾಯೋಜನೆ, ಅನುದಾನದ ಮೂಲ ಮತ್ತು ಅನುಷ್ಠಾನಗೊಳಿಸಲು ಗುತ್ತಿಗೆ ಪಡೆದಿರುವ ಏಜೆನ್ಸಿ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಪುರಸಭೆಯ ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ ಪ್ರತಿಕ್ರಿಯಿಸಿದರು.

‘ಅರಣ್ಯ ಇಲಾಖೆಗೆ ₹1.93 ಲಕ್ಷ ಪಾವತಿಸಿ, ಅನುಮತಿ ಪಡೆದು ಮರಗಳನ್ನು ಕಡಿದಿದ್ದಾರೆ. ಆಕಾಶ ಮಲ್ಲಿಗೆ ಗಿಡಗಳಿಗೆ ತೊಂದರೆಯಾಗದಂತೆ ರಕ್ಷಿಸಲಾಗಿದೆ’ ಎಂದು ಉಪ ವಲಯ ಅರಣ್ಯಾಧಿಕಾರಿ ಕರಿಬಸಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT