ಹೊಸಪೇಟೆ: ನಗರಸಭೆ ವ್ಯಾಪ್ತಿಯ ಅನಂತಶಯನಗುಡಿಯಲ್ಲಿ ಗುಂಡಿಗೆ ಬಿದ್ದು ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೌರಾಯುಕ್ತರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ನಗರಸಭಾ ಸದಸ್ಯರು ಧರಣಿ ಮುಂದುವರಿಸಿದ್ದು, ಜಿಲ್ಲಾಧಿಕಾರಿ ಇನ್ನೂ ಸ್ಥಳಕ್ಕೆ ಬಂದಿಲ್ಲ.

ಮೃತ ಬಾಲಕನ ಪೋಷಕರು, ಸ್ಥಳೀಯ ನಿವಾಸಿಗಳು ಸಹ ಬೆಳಿಗ್ಗೆ 10 ಗಂಟೆಯಿಂದಲೇ ಧರಣಿಯಲ್ಲಿ ಪಾಲ್ಗೊಂಡಿದ್ದು, ನಗರದಲ್ಲೇ ಇರುವ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಸ್ಥಳಕ್ಕೆ ಬಾರದೆ ಇರುವುದಕ್ಕೆ ಹಲವು ನದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

‘ನಗರಸಭೆಯ ಆಡಳಿತಾಧಿಕಾರಿ ಸದ್ಯ ಜಿಲ್ಲಾಧಿಕಾರಿ ಅವರೇ ಇದ್ದಾರೆ. ನಮಗೆ ನ್ಯಾಯ ಕೊಡಿಸಬೇಕು, ಪರಿಹಾರ ಕೊಡಿಸಬೇಕು. ಅಯುಕ್ತರನ್ನು ಅಮಾನತುಗೊಳಿಸಬೇಕು, ಅಲ್ಲಿಯವರೆಗೆ ಸ್ಥಳದಿಂದ ಕದಲುವುದಿಲ್ಲ’ ಎಂದು ನಗರಸಭೆ ಸದಸ್ಯರು ಮತ್ತು ಬಾಲಕನ ಪೋಷಕರು ಪಟ್ಟು ಹಿಡಿದಿದ್ದಾರೆ.

‘ಜಿಲ್ಲಾಧಿಕಾರಿ ಅವರು ಮುಖ್ಯ ಕಾರ್ಯದರ್ಶಿಯವರ ಜತೆಗೆ ಮೀಟಿಂಗ್ ನಡೆಸುತ್ತಿದ್ದಾರೆ. ಬರುವುದಕ್ಕೆ ವಿಳಂಬವಾಗುತ್ತದೆ’ ಎಂಬ ಸಂದೇಶವನ್ನು ಪೊಲೀಸರು ಧರಣಿ ನಿರತರಿಗೆ ತಿಳಿಸಿದ್ದರು. ಆದರೆ ಡಿ.ಸಿ ಬರುವ ತನಕ ಧರಣಿ ಕೊನೆಗೊಳಿಸುವುದಿಲ್ಲ ಎಂದು ಧರಣಿ ನಿರತರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.