ಹರಪನಹಳ್ಳಿ: ಬರಗಾಲದ ನಡುವೆಯೂ ಪಟ್ಟಣ ಒಳಗೊಂಡು ತಾಲ್ಲೂಕಿನಲ್ಲಿ ಗಣೇಶ ಹಬ್ಬದ ಆಚರಣೆ ಸಡಗರ, ಸಂಭ್ರಮದಿಂದ ನಡೆಯುತ್ತಿದ್ದು, ಪ್ರಮುಖ ಬೀದಿಗಳು ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿವೆ.

ಶ್ರೀ ಈಶ್ವರ ವಿನಾಯಕ ಸಮಿತಿಯ 13 ಅಡಿ ಎತ್ತರದ ಶಿವಮಂದಿರದ ಮಹಾರಾಜ ಗಣಪತಿ ಹಾಗೂ ಶ್ರೀ ರೇಣುಕ ಯಲ್ಲಮ್ಮ ಕಥೆಯ ಯಂತ್ರಚಾಲಿತ ಕಲಾ ಪ್ರದರ್ಶನ ಹಬ್ಬದ ಸಂಭ್ರಮ ಹೆಚ್ಚಿಸಿದೆ. 15 ಅಡಿ ಎತ್ತರದ ಹಿಂದೂ ಮಹಾಗಣಪತಿ, ಮಟ್ಟೇರ ಓಣಿ ವಿನಾಯಕ ಸಮಿತಿಯಿಂದ ಎರಡು ನವಿಲುಗಳ ಮೇಲಿನ ವಿರಾಜಮಾನ ಗಣಪ ಮತ್ತು ಇಸ್ರೊ ಚಂದ್ರಯಾನ–3 ಬಿಂಬಿಸುವ ಮಾದರಿ ಗಮನ ಸೆಳೆಯುತ್ತಿವೆ.

ಅನುಮತಿ ಪಡೆಯದೆ ಪ್ರತಿಷ್ಠಾಪನೆ: ‘ಹರಪನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ 128 ಗಣೇಶ ಮೂರ್ತಿಗಳು, ಅರಸೀಕೆರೆ 172, ಹಲವಾಗಲು 91, ಚಿಗಟೇರಿ 62 ಸೇರಿ ಒಟ್ಟು 453 ವಿಗ್ರಹಗಳ ಪ್ರತಿಷ್ಠಾಪನೆ ಆಗಲಿವೆ. ಈ ಪೈಕಿ 186 ಕಡೆ ಪ್ರತಿಷ್ಟಾಪನೆಗೆ ಅನುಮತಿ ಪಡೆದಿದ್ದು, 267 ಕಡೆ ಸ್ಥಾಪನೆಗೆ ಅನುಮತಿ ಪಡೆದುಕೊಂಡಿಲ್ಲ’ ಎಂದು ಸಿಪಿಐ ನಾಗರಾಜ್ ಎಂ.ಕಮ್ಮಾರ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.