ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಮ ಪಂಚಾಯಿತಿ ಕರ ವಸೂಲಿಗಾರ ಹೃದಯಾಘಾತದಿಂದ ಸಾವು

ತಾಲ್ಲೂಕು ಪಂಚಾಯ್ತಿಯ ಶೌಚಾಲಯಕ್ಕೆ ಹೋದವರು ಅಲ್ಲೇ ಕುಸಿದು ಬಿದ್ದು ಕೊನೆಯುಸಿರು
Published : 10 ಸೆಪ್ಟೆಂಬರ್ 2024, 14:43 IST
Last Updated : 10 ಸೆಪ್ಟೆಂಬರ್ 2024, 14:43 IST
ಫಾಲೋ ಮಾಡಿ
Comments

ಕೂಡ್ಲಿಗಿ (ವಿಜಯನಗರ ಜಿಲ್ಲೆ): ಸ್ಥಳೀಯ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಶೌಚಾಲಯಕ್ಕೆ ಹೋಗಿದ್ದ ಗ್ರಾಮ ಪಂಚಾಯ್ತಿ ಕರ ವಸೂಲಿಗಾರ ಕೆ.ಪಿ. ಮಂಜಣ್ಣ (51) ಹೃದಯಾಘಾತದಿಂದ ಶೌಚಾಲಯದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ತಾಲ್ಲೂಕಿನ ಹುಡೇಂ ಗ್ರಾಮ ಪಂಚಾಯ್ತಿಯಲ್ಲಿ ಕರ ವಸೂಲಿಗಾರರಾಗಿದ್ದ ಮಂಜಣ್ಣ ಸೋಮವಾರ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಭಾಗಿಯಾಗಿದ್ದರು. ನಂತರ ಸಂಜೆ ಸುಸ್ತಾದಂತೆ ಕಂಡುಬಂದ ಅವರು ಶೌಚಾಲಯಕ್ಕೆ ಹೋಗಿದ್ದು, ಅಲ್ಲಿಯೇ ಹೃದಯಾಘಾತದಿಂದ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.

ಮಂಜಣ್ಣ ಮನೆಗೆ ಬಾರದೇ ಇದ್ದುದರಿಂದ ಮನೆಯವರು ಪೋನ್ ಮಾಡಿದ್ದರು. ಆದರೆ ಪೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಎಲ್ಲಿ ಹೋಗಿದ್ದಾರೆ ಎಂಬ ಚಿಂತೆ ಆವರಿಸಿತ್ತು. ಮಂಗಳವಾರ ಬೆಳಿಗ್ಗೆ ತಾಲ್ಲೂಕು ಪಂಚಾಯ್ತಿಯಲ್ಲಿನ ಸಿ.ಸಿ.ಟಿ.ವಿ. ಕ್ಯಾಮೆರಾ ಪರೀಶೀಲಿಸಿದಾಗ ಮಂಜಣ್ಣ ಶೌಚಾಲಯಕ್ಕೆ ಹೋಗಿರುವುದು ಗೊತ್ತಾಗಿತ್ತು. ಶೌಚಾಲಯವನ್ನು ವೀಕ್ಷಿಸಿದಾಗ ಅದರಲ್ಲಿ ಮಂಜುನಾಥ ಅವರ ಮೃತ ದೇಹವಿರುವುದು ಕಂಡುಬಂತು. 

ಬಳಿಕ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಖಾರಿ ನರಸಪ್ಪ ಹಾಗೂ ಪಿಎಸ್‌ಐ ಸಿ. ಪ್ರಕಾಶ್ ಅವರ ಸಮ್ಮುಖದಲ್ಲಿ ಮೃತದೇಹವನ್ನು ಹೊರ ತೆಗೆಯಲಾಯಿತು. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT