ಹೊಸಪೇಟೆ (ವಿಜಯನಗರ ಜಿಲ್ಲೆ): ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ.

‘ವಿಶ್ವವಿದ್ಯಾಲಯಕ್ಕೆ ಕನಿಷ್ಠ ₹5 ಕೋಟಿಯ ವಾರ್ಷಿಕ ಅನುದಾನ ಬೇಕು, ಸದ್ಯ ₹1.5 ಕೋಟಿ ಅನುದಾನ ಮಾತ್ರ ಸಿಗುತ್ತಿದೆ. ಎರಡು ವರ್ಷದ ಹಿಂದೆ ₹ 50 ಲಕ್ಷ ಮಾತ್ರ ಅನುದಾನ ಸಿಕ್ಕಿತ್ತು. ಹಾಗಾಗಿ, ಅಗತ್ಯದ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ₹ 85 ಲಕ್ಷ ವಿದ್ಯುತ್ ಬಿಲ್ ಪಾವತಿಸದೆ, ಬಾಕಿ ಉಳಿದಿದೆ. ಹಳೆಯ ವಿದ್ಯುತ್ ಬಿಲ್ ಪಾವತಿ ಸಾಧ್ಯವಾಗಿಲ್ಲ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ವಿದ್ಯುತ್ ಸಂಪರ್ಕ ಕಡಿತ ಮಾಡಬಾರದು ಎಂಬ ಕಾರಣಕ್ಕೆ ಮೂರು ತಿಂಗಳಿನಿಂದ ಆಯಾ ತಿಂಗಳಿನ ಬಿಲ್ (ತಿಂಗಳಿಗೆ ಸುಮಾರು ₹ 10 ಲಕ್ಷ ಬರುತ್ತದೆ) ಹೊಂದಿಸಿಕೊಂಡು ಪಾವತಿಸಲಾಗುತ್ತಿದೆ’ ಎಂದರು.

‘ವಿದ್ಯುತ್ ಬಿಲ್ ಬಾಕಿ ಮನ್ನಾ ಮಾಡುವಂತೆ ಇಲ್ಲವೇ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕೆ.ವಿ. ಸ್ಟೇಷನ್ ನಿರ್ಮಾಣಕ್ಕಾಗಿ ವಿಶ್ವವಿದ್ಯಾಲಯವು ಜೆಸ್ಕಾಂಗೆ ಅರ್ಧ ಎಕರೆ ಜಮೀನನ್ನು ಯಾವುದೇ ಷರತ್ತು ಇಲ್ಲದೆ ನೀಡಿದೆ. ಈ ಕಾರಣಕ್ಕಾದರೂ ಜೆಸ್ಕಾಂ ಬಾಕಿ ಬಿಲ್ ಮನ್ನಾ ಮಾಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.