ಹೊಸಪೇಟೆ (ವಿಜಯನಗರ): ಬಣ್ಣದ ಹಬ್ಬ ಹೋಳಿಯನ್ನು ಹಂಪಿಯಲ್ಲಿ ಮಂಗಳವಾರ ವಿದೇಶಿಯರ ಜತೆಗೆ ಸ್ಥಳೀಯರು ಸಂಭ್ರಮದಿಂದ ಆಚರಿಸಿದರು.

ವಿದೇಶಗಳಿಂದ ಆಗಮಿಸಿದ್ದ ಸಾವಿರಾರು ಪ್ರವಾಸಿಗರು ಬಣ್ಣ ಬಣ್ಣದ ಓಕಳಿಯಲ್ಲಿ ಮಿಂದೆದ್ದು ಸಂಭ್ರಮಿಸಿದರು. ಹಂಪಿಯ ಬಿರು ಬಿಸಿಲು ಇಂದಿನ ಮಟ್ಟಿಗೆ ಯಾರಿಗೂ ಜಾವು ಏರಿಸಿದಂತೆ ಕಾಣಲಿಲ್ಲ

ಹಂಪಿಯ ರಥ ಲಬೀದಿಯಲ್ಲಿ ಸೋಮವಾರ ಮಧ್ಯರಾತ್ರಿ ಕಾಮ ದಹನ ಮಾಡಲಾಯಿತು. ಮಂಗಳವಾರ ಬೆಳಿಗ್ಗೆ ಸ್ಥಳೀಯರೊಂದಿಗೆ ವಿದೇಶಿಗರು ಹೋಲಿ ಆಚರಿಸಿದರು. ಒಬ್ಬರಿಗೊಬ್ಬರು ಬಣ್ಣ ಎರಚಿಕೊಂಡು, ಹ್ಯಾಪಿ ಹೋಲಿ ಎಂದು ಹರ್ಷೋದ್ಘಾರ ಮೊಳಗಿಸಿದರು. ಡ್ರಮ್ಸ್, ಹಲಗೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ನೆದರ್‌ಲ್ಯಾಂಡ್, ಇಂಗ್ಲೆಂಡ್, ಇಸ್ರೇಲ್, ಫ್ರಾನ್ಸ್, ಸೇರಿದಂತೆ ವಿಶ್ವದ ನಾನಾ ದೇಶಗಳಿಂದ ಆಗಮಿಸಿದ್ದ ಪ್ರವಾಸಿಗರು, ಬಣ್ಣದ ಓಕಳಿಯಲ್ಲಿ ಮಿಂದೆದ್ದರು.

ಇದಕ್ಕೂ ಮುನ್ನ ಸೋಮವಾರ ರಾತ್ರಿ ದೇವಸ್ಥಾನದ ರಥ ಬೀದಿಯಲ್ಲಿ ಹಮ್ಮಿಕೊಂಡಿದ್ದ ಕಾಮ ದಹನವನ್ನು ಸ್ಥಳೀಯರೊಂದಿಗೆ ಪ್ರವಾಸಿಗರೂ ಕಣ್ತುಂಬಿಕೊಂಡರು. ಮನಷ್ಯನಲ್ಲಿರುವ ಕಾಮ, ಕ್ರೋಧ, ಮದ, ಮಾತ್ಸರ್ಯವನ್ನು ದಹಿಸುವುದೇ ಕಾಮ ದಹನದ ಮೂಲ ತಿರುಳು ಎಂಬುದನ್ನು ಅರಿತು ವಿದೇಶಿಗರು, ಹಿಂದೂ ಧರ್ಮದ ಮಹೋನ್ನತ ತತ್ವಕ್ಕೆ ತಲೆದೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.