ಹೊಸಪೇಟೆ (ವಿಜಯನಗರ): ‘ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆಯ ಬಳಕೆಯು ಕಡಿಮೆಯಾಗಿ, ಕಂಗ್ಲೀಷ್ ಬಳಕೆ ಹೆಚ್ಚಾಗುತ್ತಿದೆ. ಕನ್ನಡ ಶಾಲೆಗಳು ಮುಚ್ಚಿ, ಕಾನ್ವೆಂಟ್‌ಗಳು ತಲೆ ಎತ್ತುತ್ತಿವೆ. ಇದು ಕನ್ನಡ ಭಾಷೆ ಅಪಾಯದ ಅಂಚಿನಲ್ಲಿರುವುದು ಸೂಚಿಸುತ್ತದೆ’ ಎಂದು 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ. ದೊಡ್ಡರಂಗೇಗೌಡ ಹೇಳಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಹಲ್ಮಿಡಿ ಶಾಸನಕ್ಕಿಂತ ಪೂರ್ವದಿಂದಲೂ ಕನ್ನಡ ಭಾಷೆ ಬಳಕೆಯಲ್ಲಿರುವುದು ತಿಳಿದು ಬಂದಿದೆ. ಪ್ರಾಚೀನ ಕಾಲದಿಂದಲೂ ಲಿಪಿಯನ್ನು ಹೊಂದಿರುವ ಕನ್ನಡ ಭಾಷಾ ಬಳಕೆಯು ಪ್ರಸ್ತುತ ದಿನಗಳಲ್ಲಿ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ’ ಎಂದರು.

‘ಸೂರ್ಯ-ಚಂದ್ರರಿರುವವರೆಗೆ ಕನ್ನಡ ಬಾಳುತ್ತೆ. ಭೂಮಿ-ಬಾನು ಇರುವರೆಗೆ ಕನ್ನಡ ಬದುಕುತ್ತೆ. ನದಿ-ನದಗಳಿರುವವರೆಗೆ ಕನ್ನಡ ಹೊಳೆಯುತ್ತೆ. ಕನ್ನಡ ಭಾಷೆಗೆ ಊಹೆಗೂ ಮೀರಿದ ಪ್ರಾಚೀನತೆಯಿದೆ. ಕನ್ನಡಕ್ಕೆ ಭದ್ರವಾದ ಬೇರುಗಳಿವೆ. ಆದರೆ, ಹೊಸ ಸವಾಲುಗಳೊಂದಿಗೆ ಅದನ್ನು ಉಳಿಸಿ, ಬೆಳೆಸಬೇಕಿದೆ’ ಎಂದು ತಿಳಿಸಿದರು.

ಕುಲಪತಿ ಪ್ರೊ. ಸ.ಚಿ. ರಮೇಶ ಮಾತನಾಡಿ, ‘ಯುವಜನತೆ ಮನಸ್ಸು ಮಾಡಿದರೆ ಕನ್ನಡ ಅನ್ನದ ಭಾಷೆಯಾಗಬಲ್ಲದು. ಕನ್ನಡದ ಜೊತೆಗೆ ಇತರೆ ಭಾಷೆಗಳನ್ನು ಕಲಿತು ಭಾಷಾಂತರದ ಪ್ರಕಿಯೆಯಲ್ಲಿ ತೊಡಗಿದರೆ ಸಾಕಷ್ಟು ಅವಕಾಶಗಳಿವೆ’ ಎಂದು ಹೇಳಿದರು.

ಕುಲಸಚಿವ ಪ್ರೊ. ಎ.ಸುಬ್ಬಣ್ಣ ರೈ, ಉಪಕುಲಸಚಿವರಾದ ಎಸ್.ವೈ. ಸೋಮಶೇಖರ, ಎ. ವೆಂಕಟೇಶ, ಪ್ರಾಧ್ಯಾಪಕ ವಿಠಲರಾವ್ ಟಿ.ಗಾಯಕವಾಡ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.