ಹರಪನಹಳ್ಳಿ (ವಿಜಯನಗರ ಜಿಲ್ಲೆ): ಛಾಪಾ ಕಾಗದದ ಮೇಲೆ ಮುದ್ರಿತ ವಂಶ ವೃಕ್ಷ, ವಿವಿಧ ಸರ್ವೆ ನಂಬರ್‌ಗಳ ಹಕ್ಕು ಬದಲಾವಣೆ ಮಾಡಿದ ಆರೋಪ ಎದುರಿಸುತ್ತಿದ್ದ ಕಂದಾಯ ಇಲಾಖೆ ಚಿಗಟೇರಿ ಹೋಬಳಿ ಉಪ ತಹಶೀಲ್ದಾರ್ ಎಸ್.ಚಂದ್ರಶೇಖರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕಲಬುರಗಿ ವಿಭಾಗೀಯ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ.

ಹರಪನಹಳ್ಳಿ ಕಂದಾಯ ಗ್ರಾಮಕ್ಕೆ ಸೇರಿದ ಮೂರು ಸರ್ವೆ ನಂಬರ್ ಗಳು ಮತ್ತು ಅಡವಿಹಳ್ಳಿಯ ಎಂಟು ಬೇರೆ ಬೇರೆ ಸರ್ವೆ ನಂಬರ್‌ನಲ್ಲಿದ್ದ ಜಮೀನುಗಳ ಹಕ್ಕು ಬದಲಾವಣೆಗೆ ನೈಜ ವಂಶವೃಕ್ಷ ಪ್ರಮಾಣಪತ್ರವನ್ನು ಕಾನೂನುಬಾಹಿರವಾಗಿ ಮಾಡಿದ್ದಾರೆಂದು ದೂರುಗಳು ದಾಖಲಾಗಿದ್ದರಿಂದ ತನಿಖೆ ನಡೆಸಿದ ಅಧಿಕಾರಿಗಳು ವಿಚಾರಣೆ ಕಾಯ್ದಿರಿಸಿ, ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಜೀವನಾಧಾರಕ್ಕೆ ಭತ್ಯೆ ಪಡೆಯಲು ಅರ್ಹತೆ ಹೊಂದಿದ್ದು, ಕೇಂದ್ರ ಸ್ಥಾನ ತೊರೆಯಲು, ಪ್ರಾಧಿಕಾರಿ ಅನುಮತಿ ಪಡೆಯುವ ನಿರ್ಬಂಧವನ್ನು ಆದೇಶದಲ್ಲಿ ಹೇರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.