ಹೊಸಪೇಟೆ (ವಿಜಯನಗರ): ತಾಲ್ಲೂಕಿನ ನಾಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಅರ್ಥಪೂರ್ಣವಾಗಿ ಮಕ್ಕಳ ದಿನ ಆಚರಿಸಲಾಗಿದ್ದು, ಈ ಶಾಲೆಯನ್ನು ಮುಂದಿನ ವರ್ಷ ತಮ್ಮ ಮಗಳ ಹೆಸರಲ್ಲಿ ದತ್ತು ಪಡೆಯುವುದಾಗಿ ನಿವೃತ್ತ ಡಿವೈಎಸ್ಪಿ ಹಾಗೂ ಶಿಕ್ಷಣ ಪ್ರೇಮಿ ಸುಧಾಕರ ರೆಡ್ಡಿ ಭರವಸೆ ನೀಡಿದ್ದಾರೆ.

ಈ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಹಣದಿಂದ ಮುಂದಿನ ವರ್ಷದಿಂದ ನಗದು ಬಹುಮಾನ ನೀಡುವುದಾಗಿಯೂ ಅವರು ಪ್ರಕಟಿಸಿದರು.

ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರವಿಶಂಕರ್ ದೇವರಮನೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪಕೀರಮ್ಮ ರಮೇಶ್. ಗ್ರಾಮದ ಮುಖಂಡರಾದ ಎಸ್. ಪಿ. ಮೌಲಸಾಬ್, ಡಿ.ಶ್ರೀನಿವಾಸ್, ಅಬೂಬಕರ್. ನಾಗಭೂಷಣ್, ಅನ್ವರ್ ಭಾಷಾ, ಪಂಪಾಪತಿ, ಎಂ.ಅಲ್ಲಾಬಕ್ಷಿ, ಶಾಲೆಯ ಮುಖ್ಯಗುರು ಸರೋಜಮ್ಮ, ಶಿಕ್ಷಕಿಯರಾದ ಅನಿತಾ, ಶಬೀನ, ಆಯಿಷಾ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.