ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಗರದ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ (ಪಿ.ಡಿ.ಐ.ಟಿ.) ಶುಕ್ರವಾರ ಜರುಗಿತು.

ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಮಾತನಾಡಿ, ‘ಸರ್ಕಾರ ಟಾಟಾ ಟೆಕ್ನಾಲಜಿ ಸಹಯೋಗದಲ್ಲಿ ರಾಜ್ಯದ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಆಧುನೀಕರಣ ಮಾಡುತ್ತಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿ ಅವರ ಗೌರವ ಧನವನ್ನೂ ಹೆಚ್ಚಿಸಿದೆ. ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಖನಿಜ ನಿಧಿಯ ಸದ್ಬಳಕೆಯಾಗುತ್ತಿದೆ. ಸರ್ಕಾರದ ಅಭಿವೃದ್ಧಿಯ ಯೋಜನೆಗಳಿಂದ ಇಡೀ ಕಲ್ಯಾಣ ಕರ್ನಾಟಕ ಪ್ರಗತಿ ಸಾಧಿಸಲಿದೆ’ ಎಂದು ಹೇಳಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಸುಗೇಂದ್ರ, ಪಿ.ಡಿ.ಐ.ಟಿ ಅಧ್ಯಕ್ಷ ಪಲ್ಲೇದ ದೊಡ್ದಪ್ಪ, ಪ್ರಾಚಾರ್ಯ ಎಸ್.ಎಂ.ಶಶಿಧರ, ಬಳ್ಳಾರಿ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಮೋಹನ್ ರೆಡ್ಡಿ, ಖಜಾನೆ ಉಪನಿರ್ದೇಶಕ ವೆಂಕಟೇಶ ಮೂರ್ತಿ, ಯುವ ಮುಖಂಡ ಸಿದ್ದಾರ್ಥ ಸಿಂಗ್, ವಿಜಯನಗರ ಜಿಲ್ಲಾ ಸಂಘದ ಅಧ್ಯಕ್ಷ ಎನ್.ಸಿ.ಹವಾಲ್ದಾರ್, ಪ್ರಾಚಾರ್ಯರ ಸಂಘದ ಕಾರ್ಯದರ್ಶಿಗಳಾದ ಶಿವರಾಮ, ಜೆ. ಸಿದ್ರಾಮ, ಖಜಾಂಚಿ ಎನ್.ಎನ್. ಧರ್ಮಾಯತ್, ಪ್ರಾಚಾರ್ಯ ನಾಗಲಿಂಗಸ್ವಾಮಿ, ಪ್ರಾಧ್ಯಾಪಕ ಕರ್ಣಂ ವಾಸುದೇವ ಭಟ್, ಕೆ.ವೆಂಕಟರೆಡ್ಡಿ, ಬಸವರಾಜ ಗೌಡ್ರು, ಡಾ.ರಾಜಣ್ಣ, ಗೋವಿಂದ ಕುಲಕರ್ಣಿ, ಜೆ.ಮರೇಗೌಡ್ರು ಇದ್ದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ನಾಗರಾಜಪ್ಪ, ವೀರೇಶಪ್ಪ ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೊಟ್ಟೂರಿನ ‘ಇಂದು’ ಕಾಲೇಜಿನ ಶ್ವೇತಾ ಹಾಗೂ ಹೆಚ್ಚಿನ ಅಂಕ ಗಳಿಸಿದ ವಿಜಯನಗರ ಜಿಲ್ಲೆಯ 22 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವರ್ಗಾವಣೆಗೊಂಡ ಉಪನಿರ್ದೇಶಕ ರಾಜು ಎನ್. ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ನೂತನ ಉಪನಿರ್ದೇಶಕ ಎಚ್. ಸುಗೇಂದ್ರ ಅವರನ್ನು ಸ್ವಾಗತಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.