ಹರಪನಹಳ್ಳಿ (ವಿಜಯನಗರ ಜಿಲ್ಲೆ): ಕೆರೆ ಏರಿಯಿಂದ ಕೆಳಗೆ ಜಾರುತ್ತಿದ್ದ ಸಾರಿಗೆ ಬಸ್ಸನ್ನು ಚಾಲಕ ಸಮಯಪ್ರಜ್ಞೆಯಿಂದ ನಿಲ್ಲಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ ಪ್ರಸಂಗ ತಾಲ್ಲೂಕಿನ ಅಲಮರೆಸಿಕೇರೆಯಲ್ಲಿ ಮಂಗಳವಾರ ನಡೆದಿದೆ.

ಕಲ್ಯಾಣ ಕರ್ನಾಟಕ ಸಾರಿಗೆ ಹರಪನಹಳ್ಳಿ ಘಟಕದ ಕೆಎ 17, ಎಫ್.1612 ಸಂಖ್ಯೆ ಸಾರಿಗೆ ಬಸ್ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಹೊತ್ತು ಅಲಮರಸಿಕೇರೆ ಮಾರ್ಗದಲ್ಲಿ ಎಂದಿನಂತೆ ಸಂಚರಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಕೆರೆ ಏರಿಯ ತಿರುವಿನಲ್ಲಿ ಎದುರಿಗೆ ವಾಹನಗಳು ಬಂದಿದ್ದರಿಂದ ಚಾಲಕ ಬಲಭಾಗಕ್ಕೆ ಬಸ್ ಕೊಂಡೊಯ್ಯಬೇಕಾಯಿತು. ನಿಯಂತ್ರಣ ತಪ್ಪಿದ ಬಸ್ ಕೆರೆ ಏರಿಯಿಂದ ಕೆಳಗಿಳಿಯಲು ಆರಂಭಿಸಿತು. ತಕ್ಷಣ ಎಚ್ಚೆತ್ತುಕೊಂಡ ಚಾಲಕ ಮೌನೇಶ್ ಬಸ್ ನಿಲ್ಲಿಸಿ, ವಿದ್ಯಾರ್ಥಿಗಳ ಸಹಿತ 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಕೆಳಗಿಳಿಸಿ ದೊಡ್ಡ ಅನಾಹುತದಿಂದ ಪಾರು ಮಾಡಿದ್ದಾರೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

'ಕೆರೆ ಏರಿಯ ಮೇಲೆ ಡಾಂಬರು ರಸ್ತೆ ಮತ್ತು ತಡೆಗೋಡೆ ನಿರ್ಮಾಣಕ್ಕೆ ಈ ಹಿಂದೆ ಗುತ್ತಿಗೆ ನೀಡಲಾಗಿತ್ತು. ಆದರೆ ಗುತ್ತಿಗೆದಾರರು ಬರೀ ರಸ್ತೆ ನಿರ್ಮಿಸಿ ಕೈ ತೊಳೆದುಕೊಂಡಿದ್ದು ತಡೆಗೋಡೆ ನಿರ್ಮಿಸಿಲ್ಲ' ಎಂದು ಗ್ರಾಮದ ಮುಖಂಡ ಕೋಟೆಪ್ಪ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.