ಹೊಸಪೇಟೆ (ವಿಜಯನಗರ): ರಾಜ್ಯದ ರಮಣೀಯ, ಐತಿಹಾಸಿಕ ಹಾಗೂ ಪ್ರಾಚೀನ ಪ್ರವಾಸಿ ತಾಣಗಳನ್ನು ಸಂದರ್ಶಿಸುವ ಜತೆಯಲ್ಲಿ, ಶತಮಾನಗಳಷ್ಟು ಹಳೆಯದಾದ ‘ವಿಂಟೇಜ್’ ವಾಹನಗಳ ಶ್ರೀಮಂತ ಪರಂಪರೆಯನ್ನು ನಾಡಿನ ಉದ್ದಗಲಕ್ಕೆ ಪರಿಚಯಿಸುವ ಸಲುವಾಗಿ ಬೆಂಗಳೂರಿನಿಂದ ಹೊರಟ ಕಾರುಗಳು ಹೊಸಪೇಟೆ ನಗರ ಮತ್ತು ಹಂಪಿಯಲ್ಲಿ ಶನಿವಾರ ಜನರ ಮನಸೂರೆಗೊಂಡವು.

ಫೆಡರೇಷನ್ ಆಫ್ ಹಿಸ್ಟಾರಿಕ್ ವೆಹಿಕಲ್ಸ್ ಆಫ್ ಇಂಡಿಯಾ (ಎಫ್ಎಚ್ವಿಐ) ಸಂಘಟನೆಯು ಬೆಲ್ಜಿಯಂ ಮೂಲದ ಡೆಸ್ಟಿನೇಷನ್ ರ್ಯಾಲಿ ಸಂಸ್ಥೆಯ ಜತೆಗೂಡಿ ಈ ವಿಂಟೇಜ್ ಕಾರುಗಳ ಪ್ರವಾಸ ಹಮ್ಮಿಕೊಂಡಿದ್ದು, ಇದಕ್ಕೆ ‘ಎಕ್ಸ್ಪ್ಲೋರ್ ಕರ್ನಾಟಕ ಹಿಸ್ಟೋರಿಕ್ ಡ್ರೈವ್ 2024’ ಎಂಬ ಹೆಸರು ಇಡಲಾಗಿದೆ.

ದೇಶದಾದ್ಯಂತ ಓಡಾಡುತ್ತಿರುವ 20 ಕಾರುಗಳು ಹಾಗೂ ಜಗತ್ತಿನಾದ್ಯಂತ ಓಡಾಡುತ್ತಿರುವ ಇನ್ನೂ 20 ಕಾರುಗಳು ಸೇರಿ ಒಟ್ಟು 40 ಕಾರುಗಳ ಪ್ರವಾಸ ಹಂಪಿಯಲ್ಲಿ ಸಮಾಗಮಗೊಳ್ಳುತ್ತಿದೆ. ಮುಂದೆ ಇವುಗಳು ಚಿಕ್ಕಮಗಳೂರು, ಕೊಡಗು, ಮೈಸೂರು ಮೂಲಕ ಬೆಂಗಳೂರಿಗೆ ಇದೇ 21ರಂದು ವಾಪಸಾಗಲಿವೆ.

‘ಇಟಲಿ, ದಕ್ಷಿಣ ಆಫ್ರಿಕಾ, ಲಿಥುವಾನಿಯಾ, ಪೋರ್ಚುಗಲ್, ಐರ್ಲೆಂಡ್, ಜರ್ಮನಿ, ಬೆಲ್ಜಿಯಂ, ಫಿನ್ಲೆಂಡ್, ಅಮೆರಿಕ, ನೆದರ್ಲೆಂಡ್, ಬ್ರಿಟನ್, ಆಸ್ಟ್ರೇಲಿಯಾಗಳ 20 ಕಾರುಗಳು ಗೋವಾಕ್ಕೆ ಹಡಗಿನಲ್ಲಿ ಬಂದಿದ್ದು, ಹುಬ್ಬಳ್ಳಿ ಮೂಲಕ ಹಂಪಿಯ ಇವಾಲ್ವ್ ಬ್ಯಾಕ್ ರೆಸಾರ್ಟ್ ಅನ್ನು ಶನಿವಾರ ಸಂಜೆ ತಲುಪಲಿವೆ. ಅಲ್ಲಿ ಎರಡೂ ತಂಡಗಳು ಸಮಾಗಮಗೊಂಡು ಭಾನುವಾರ ಬೆಳಿಗ್ಗೆ ಚಿಕ್ಕಮಗಳೂರಿನತ್ತ ತೆರಳಲಿದ್ದೇವೆ. ವಿಶ್ವ ಪಾರಂಪರಿಕ ತಾಣಗಳಿಗೆ ವಿಂಟೇಜ್ ಕಾರುಗಳನ್ನು ತಂದು ಎರಡೂ ಪರಂಪರೆಗಳನ್ನು ಉಳಿಸುವ ಸಂದೇಶ ಸಾರುವುದೇ ನಮ್ಮ ಪ್ರವಾಸದ ಉದ್ದೇಶ’ ಎಂದು ಎಫ್ಎಚ್ವಿಐ ಅಧ್ಯಕ್ಷ ಡಾ.ರವಿಪ್ರಕಾಶ್ ತಿಳಿಸಿದರು.

‘ರಾಜ್ಯದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ, ಅವುಗಳೆಲ್ಲ ಬಹಳ ಅತ್ಯಾಕರ್ಷವೂ ಆಗಿವೆ. ಆದರೆ ಕೇರಳ, ಗೋವಾ ಸಹಿತ ಇತರ ಕೆಲವು ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪ್ರವಾಸಿ ತಾಣಗಳತ್ತ ನಾವು ಹೆಚ್ಚು ಗಮನ ಹರಿಸಿಲ್ಲ ಅಥವಾ ಅವುಗಳ ಸೌಂದರ್ಯವನ್ನು ಜಗತ್ತಿಗೆ ತೆರೆದಿಡುವ ಪ್ರಯತ್ನವನ್ನು ಅಷ್ಟಾಗಿ ಮಾಡಿಲ್ಲ ಎಂದೇ ತೋರುತ್ತದೆ. ಈ ವಿಂಟೇಜ್ ಕಾರುಗಳ ಪ್ರವಾಸದಂತಹ ಕಾರ್ಯಗಳಿಂದ ಪ್ರವಾಸೋದ್ಯಮಕ್ಕೆ ಒಂದಿಷ್ಟು ಉತ್ತೇಜನ ಸಿಗುವ ವಿಶ್ವಾಸ ಇದೆ, ಜತೆಗೆ ಇಂತಹ ಇನ್ನಷ್ಟು ಕಾರ್ಯಗಳನ್ನು ಮಾಡುವುದಕ್ಕೆ ಸರ್ಕಾರಕ್ಕೆ ಅವಕಾಶ ಇದೆ. ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರಲ್ಲಿ ಈ ಬಗ್ಗೆ ನಾವು ಚರ್ಚಿಸಿದ್ದೇವೆ, ಅವರೂ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ’ ಎಂದು ರವಿಪ್ರಕಾಶ್ ಹೇಳಿದರು.

20 ಕಾರುಗಳಲ್ಲಿ 20 ಬಗೆ: ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ವಿಧಾನಸೌಧದ ಮುಂಭಾಗ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರು ಭಾರತದ 20 ವಿಂಟೇಜ್ ಕಾರುಗಳ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಈ ಕಾರುಗಳು ಸಂಜೆ ಹೊಸಪೇಟೆ ತಲುಪಿದ್ದವು. ಇಲ್ಲಿನ ರಾಯಲ್ ಆರ್ಕಿಡ್ ಹೋಟೆಲ್ ಅವರಣದಲ್ಲಿ ಈ ‘ಶತಮಾನದ ಸುಂದರಿ‘ಯರು ಬೆರಗು ಬಿನ್ನಾಣದಿಂದ ನಿಂತಿದ್ದವು.

ಶನಿವಾರ ಬೆಳಿಗ್ಗೆ ಮತ್ತೆ ಅವುಗಳ ಎಂಜಿನ್ ಪರೀಕ್ಷಿಸುವ ಕೆಲಸವನ್ನು ತಂತ್ರಜ್ಞರು ಮಾಡುತ್ತಿದ್ದಂತೆಯೇ ಅಲ್ಲಿ ಉತ್ಸಾಹ ಗರಿಗೆದರಿತು. ಏಕೆಂದರೆ ಅಲ್ಲಿ 1926ರ ಬೆಂಟ್ಲಿ ಟೂರರ್, 1933ರ ಆಲ್ವಿಸ್ ಸ್ಪೀಡ್, 1939ರ ಷೆವರ್ಲೆ ಮಾಸ್ಟರ್ ಡಿಲಕ್ಸ್ ಲಿಮೊಸಿನ್, 1947ರ ಸಿಟ್ರೊಯಿನ್ ಟ್ರ್ಯಾಕ್ಷನ್, ಷೆವರ್ಲೆ ಫ್ಲೀಟ್ ಮಾಸ್ಟರ್, 1950ರ ಎಂಜಿ ವೈಟಿ, 1952ರ ಬೆಂಟ್ಲಿ ಎಂಕೆ VI, 1955ರ ಲ್ಯಾಂಡ್ ರೋವರ್ ಸೀರೀಸ್ 1, 1956ರ ಡಾಡ್ಜ್ ಸಬ್ಅರ್ಬನ್ ಕಸ್ಟಮ್, 1962ರ ಜಾಗ್ವಾರ್ ಎಂಕೆ II, 1967ರ ಟ್ರಯಂಫ್ ಜಿಟಿ6, 1968ರ ಮರ್ಸಿಡಿಸ್ ಪಗೋಡೆ 280 ಎಸ್ಎಲ್, 1969ರ ಅಲ್ಫಾ ರೋಮಿಯೊ ಸ್ಪೈಡರ್, 1970ರ ಮರ್ಸಿಡೆಸ್ 280 ಎಸ್ಎಲ್, 1971ರ ವೋಕ್ಸ್ವ್ಯಾಗನ್ ಮೈಕ್ರೊಬಸ್, 1972ರ ಪೋರ್ಷೆ 911, 1974ರ ಜಾಗ್ವಾರ್ ಇ–ಟೈಪ್ V12, 1975ರ ಲ್ಯಾನ್ಸಿಯಾ, 1980ರ ಕಾರ್ವೆಟ್ಟೆ ಸ್ಟಿಂಗ್ರೇ ಕಾರುಗಳ ಭವ್ಯ ನೋಟ ವಿಶಿಷ್ಟ ಅನುಭವ ತಂದುಕೊಟ್ಟಿತು.

ಅಹ್ಮದಾಬಾದ್ನಿಂದ ಬಂದ ಎಂಜಿ ವೈಟಿ ‘ಲಾಲ್ ಪಾರಿ’ ಕಾರಿನ ಮಾಲೀಕರು ದಮನ್ ಠಾಕೋರೆ. ಇದೇ ಕಾರಿನಲ್ಲಿ ಅವರು ಕಳೆದ ವರ್ಷ ಭಾರತದಿಂದ ಲಂಡನ್ಗೆ 73 ದಿನಗಳ ಪ್ರವಾಸ ಕೈಗೊಂಡಿದ್ದರು. 12 ಸಾವಿರ ಕಿ.ಮೀ.ದೂರದ ಅವರ ಈ ಪಯಣದ ವೇಳೆ 12 ದೇಶಗಳಿಗೆ ಭೇಟಿ ನೀಡಿದ್ದರು. ಹೊಸಪೇಟೆ, ಹಂಪಿಗೆ ಭೇಟಿ ನೀಡುವ ಅವಕಾಶ ಸಿಕ್ಕಿದ್ದಕ್ಕೆ ಅವರು ಖುಷಿಪಟ್ಟರು.

ಹಂಪಿ, ಅಂಜನಾದ್ರಿಗೆ ಭೇಟಿ: ಎಫ್ಎಚ್ವಿಐ ಸಂಘಟನೆಯ 20 ಕಾರುಗಳು ಹೊಸಪೇಟೆಯಿಂದ ತುಂಗಭದ್ರಾ ಅಣೆಕಟ್ಟೆಗೆ ತೆರಳಿ, ಬಳಿಕ ಹಂಪಿ ವಿರೂಪಾಕ್ಷ, ಕಮಲಮಹಲ್, ವಿಜಯ ವಿಠ್ಠಲ ದೇವಸ್ಥಾನಕ್ಕೆ ತೆರಳುತ್ತವೆ. ಬಳಿಕ ಅಂಜನಾದ್ರಿಗೆ ತೆರಳಿ ಸಂಜೆ ಕಮಲಾಪುರದ ಇವಾಲ್ವ್ ಬ್ಯಾಕ್ ರೆಸಾರ್ಟ್ಗೆ ಬರಲಿವೆ. ಇದೇ ವೇಳೆ ಹುಬ್ಬಳ್ಳಿಯಿಂದ ವಿದೇಶಿ ಕಾರುಗಳು ಬರಲಿದ್ದು, ಸಂಜೆ ಒಟ್ಟುಸೇರಲಿವೆ. ಹಂಪಿಯ ಪಾರಂಪರಿಕ ತಾಣ ಕಣ್ತುಂಬಿಕೊಳ್ಳುವ ಎರಡೂ ತಂಡಗಳು ಭಾನುವಾರ ಬೆಳಿಗ್ಗೆ ಚಿಕ್ಮಮಗಳೂರಿನತ್ತ ತೆರಳಲಿವೆ. ಜಂಟಿ ಪ್ರವಾಸ ಹೊರಡುವ ಕಾರುಗಳಿಗೆ ಶಾಸಕ ಎಚ್.ಆರ್.ಗವಿಯಪ್ಪ ಹಸಿರು ನಿಶಾನೆ ತೋರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.