ವಿಜಯಪುರ: ಕ್ರಿಪ್ಟೋ ಟ್ರೇಡಿಂಗ್, ಪಾರ್ಟ್ ಟೈಮ್ ಜಾಬ್, ಷೇರ್ ಮಾರ್ಕೆಟ್ ಟ್ರೇಡಿಂಗ್, ಕ್ರೆಡಿಟ್–ಡೆಬಿಟ್ ಕಾರ್ಡ್ ಒಟಿಪಿ, ಕಂಪನಿ ಫ್ರಾಂಚೈಸಿ ಮತ್ತು ಡೀಲರ್ಶಿಪ್, ವರ್ಟಿಕಲ್ ಫಾರ್ಮಿಂಗ್, ಡಿಜಿಟಲ್ ಅರೆಸ್ಟ್ ಸೇರಿದಂತೆ ವಿವಿಧ ರೀತಿಯಲ್ಲಿ ಸಾರ್ವಜನಿಕರನ್ನು ಆನ್ಲೈನ್ ಮೂಲಕ ವಂಚಿಸಿದ್ದ 12 ಪ್ರಕರಣಗಳನ್ನು ವಿಜಯಪುರ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯಗಳ ಅಪರಾಧ ಠಾಣೆಯ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಡಿಜಿಟಲ್ ಅರೆಸ್ಟ್ ಮಾದರಿಯಲ್ಲಿ ವಿಜಯಪುರದ ಡಾ.ಅನಿರುದ್ಧ ಉಮರ್ಜಿ ಅವರಿಗೆ ₹ 54 ಲಕ್ಷ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನ ಮತ್ತು ಹರಿಯಾಣದ ನಾಲ್ಕು ಆರೋಪಿಗಳನ್ನು ವಶಕ್ಕೆ ಪಡೆದು, ಅವರಿಂದ ₹ 25 ಲಕ್ಷವನ್ನು ವೈದ್ಯರಿಗೆ ಮರಳಿ ಕೊಡಿಸಲಾಗಿದೆ. ಇನ್ನುಳಿದ ಹಣದ ಬಗ್ಗೆ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆದಿದೆ ಎಂದರು.

ಬಬನ್ ನಾಮದೇವ ಚವ್ಹಾಣ ಎಂಬುವವರಿಗೆ ಎಎಂಸಿ ಥೇಟರ್ಸ್ ಎಂಬ ವೆಬ್ಸೈಟ್ನಲ್ಲಿ ಹಣ ಹಾಕಿ ಸಿನಿಮಾಗಳನ್ನು ಬುಕ್ ಮಾಡಿದರೆ ಬುಕ್ ಮಾಡಿದ ಹಣದ ಜೊತೆಗೆ ಭಾರಿ ಲಾಭಾಂಶ ನೀಡುತ್ತೇವೆ ಎಂದು ಸುಳ್ಳು ಹೇಳಿ ನಂಬಿಸಿ ₹ 14.77 ಲಕ್ಷ ಹಾಕಿಸಿಕೊಂಡು ಮೋಸ ಮಾಡಿದ್ದರು. ಈ ಕೃತ್ಯ ಎಸಗಿದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು, ಅವರಿಂದ ₹11.84 ಲಕ್ಷವನ್ನು ಬ್ಯಾಂಕ್ ಖಾತೆಯ ಮೂಲಕ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಡಾ. ದಾದಾಪೀರ ಪಿರಜಾದೆ ಎಂಬುವವರಿಗೆ ಐಪಿಒ ಟ್ರೇಡಿಂಗ್ ಹೆಸರಿನಲ್ಲಿ ₹ 20,03,390 ವಂಚನೆ ಮಾಡಿದ್ದು, ಈ ಪ್ರಕರಣದಲ್ಲಿ ಆರೋಪಿಗಳ ಖಾತೆಗಳನ್ನು ಫ್ರೀಜ್ ಮಾಡಿ ಅಷ್ಟೂ ಹಣವನ್ನು ದೂರುದಾರರಿಗೆ ಮರಳಿ ಕೊಡಿಸಲಾಗಿದೆ ಎಂದರು.

ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ದಾಖಲಾದ 30 ಪ್ರಕರಣಗಳಲ್ಲಿ ಒಟ್ಟು ₹ 9,84,03,949 ವಂಚನೆಯಾಗಿದ್ದು, ತನಿಖೆ ಕೈಗೊಂಡು ವಶಪಡಿಸಿಕೊಂಡಿರುವ ₹ 7,48,39,434 ಅನ್ನು ನೊಂದ ದೂರುದಾರರಿಗೆ ಕೋರ್ಟ್ ಆದೇಶದಂತೆ ಅವರವರ ಬ್ಯಾಂಕ್ ಖಾತೆಗಳಿಗೆ ಮರಳಿ ಜಮಾ ಮಾಡಲಾಗಿದೆ ಎಂದು ತಿಳಿಸಿದರು.

ಎಎಸ್ಪಿ ಶಂಕರ ಮಾರಿಹಾಳ, ಡಿಎಸ್ಪಿ ಸುನೀಲ ಕಾಂಬಳೆ, ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರಮೇಶ ಅವಜಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಸೈಬರ್ ಅಪರಾಧಗಳಿಗೆ ಸಂಬಂಧಿಸಿ ಉಚಿತ ಸಹಾಯವಾಣಿ ಸಂಖ್ಯೆ 1930 ಕರೆ ಮಾಡಿ ದೂರನ್ನು ನೋಂದಾಯಿಸಿ
ಪ್ರಸನ್ನ ದೇಸಾಯಿ ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.