ವಿಜಯಪುರ: ಹಿಂದೂ ಧರ್ಮ ಹಾಗೂ ಲಿಂಗಾಯತ ಧರ್ಮ ಒಂದೇ ಎಂದು ಹರಿಹರದ ಪಂಚಮಸಾಲಿ ಪೀಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಪ್ರತಿಪಾದಿಸಿದರು.
.ಸಿಎಂ ಸಿದ್ದರಾಮಯ್ಯ–ಡಿಕೆಶಿ ನಡುವೆ ಉತ್ತಮ ಹೊಂದಾಣಿಕೆಯಿದೆ: ವಚನಾನಂದ ಸ್ವಾಮೀಜಿ.
ನಗರದ ಜ್ಞಾನಯೋಗಾಶ್ರಮದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲಿಂಗಾಯತರೆಲ್ಲರೂ ಹಿಂದೂಗಳೇ, ಹಿಂದೂ ಎಂಬ ಮಹಾಸಾಗರದಲ್ಲಿ ಬೌದ್ಧ, ಜೈನ್, ಸಿಖ್, ವೀರಶೈವ ಲಿಂಗಾಯತ, ವೈಷ್ಟವ ಎಂಬ ನದಿಗಳು ವಿಲೀನವಾಗಿವೆ ಎಂದರು.

ಶಂಕರಾಚಾರ್ಯ, ಮದ್ವಾಚಾರ್ಯ, ರಾಮಾನುಜಾಚಾರ್ಯ, ಗುರುನಾನಕ್, ಜ್ಞಾನೇಶ್ವರ, ಬಸವಣ್ಣನವರು ಆಯಾ ಕಾಲ ಘಟ್ಟದಲ್ಲಿ ತಮ್ಮ ತಮ್ಮ ವಿಚಾರಧಾರೆ ಹೇಳಿದ್ದಾರೆ. ಅವು ಧರ್ಮಗಳ ರೂಪ ಪಡೆದುಕೊಂಡಿವೆ ಎಂದು ಹೇಳಿದರು.
.ಪಂಚಮಸಾಲಿ ಎಂಬ ಕಾರಣಕ್ಕೆ ಯತ್ನಾಳ ಮೂಲೆಗುಂಪು: ವಚನಾನಂದ ಸ್ವಾಮೀಜಿ ಆರೋಪ.
ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಬಸವಣ್ಣ ಜಗತ್ತಿಗೆ ಹೊಸದನ್ನು ಕೊಟ್ಟರು. ಬಸವಣ್ಣನವರ ವಿಚಾರಗಳನ್ನು ಯಾವುದೇ ಧರ್ಮಕ್ಕೆ ಸೀಮಿತ ಮಾಡಬಾರದು, ಯಾವುದೇ ಮಹಾನ್ ವ್ಯಕ್ತಿಗಳ ವಿಚಾರಗಳನ್ನು ಅನುಕರಣೆ ಮಾಡುವವರನ್ನು ಟೀಕೆ ಮಾಡಬಾರದು, ನಾವೇ ಶ್ರೇಷ್ಠ, ಅವರು ಕನಿಷ್ಠ ಎಂದು ಟೀಕಿಸಬಾರದು ಎಂದು ಹೇಳಿದರು.

ಒಂದು ಧರ್ಮದ ಆಚರಣೆಗಳನ್ನು ಕೀಳಾಗಿ ಕಾಣುವುದು ಒಳಿತಲ್ಲ, ಮತ್ತೊಂದು ತತ್ವಗಳನ್ನು ತುಚ್ಛವಾಗಿ ಕಾಣಬಾರದು. ಎಲ್ಲವೂ ಒಂದೇ ಎಂದರು
.ರಾಜಕೀಯ ಶುದ್ಧೀಕರಣಕ್ಕೆ ಸನ್ಯಾಸಿಗಳ ಪ್ರವೇಶ ತಪ್ಪಲ್ಲ: ವಚನಾನಂದ ಸ್ವಾಮೀಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.