ವಿಜಯಪುರ: ನಗರದ ದರ್ಬಾರ್ ಮೈದಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ತುಳಸಿಗಿರೀಶ ಫೌಂಡೇಶನ್, ದೇಶ ರಕ್ಷಕ ಪಡೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಹಾಗೂ ಶ್ರೀಕೃಷ್ಣ ವೇಷಭೂಷಣ ಸ್ಪರ್ಧೆ ನೋಡುಗರ ಗಮನಸೆಳೆಯಿತು.

ಪುಟಾಣಿ ಮಕ್ಕಳು ಕೃಷ್ಣ, ರಾಧೆ, ರುಕ್ಮಿಣಿಯ ವೇಷಭೂಷಣ ತೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕ್ರೇನ್ ಮೂಲಕ ಎತ್ತರದಲ್ಲಿ ಕಟ್ಟಲಾಗಿದ್ದ ಮೊಸರಿನ ಮಡಿಕೆಯನ್ನು ಸಾಹಸಿ ಯುವಕರ ತಂಡ ಒಡೆಯುವ ದೃಶ್ಯ ಮನಮೋಹಕವಾಗಿತ್ತು. ಮೊಸರು ಕುಡಿಕೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ₹25,551 ನಗದು ಬಹುಮಾನ ವಿತರಿಸಲಾಯಿತು.

ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಹಾಗೂ ಬಸವರಾಜ ಮಾಮನಿ ತಮ್ಮ ಪಂಚಿಂಗ್ ಡೈಲಾಗ್ ಹಾಗೂ ಹಾಸ್ಯ ಚಟಾಕಿಗಳ ಮೂಲಕ ನೆರೆದಿದ್ದ ಸಾವಿರಾರೂ ಜನರನ್ನು ನಗೆಗಡಲಲ್ಲಿ ತೇಲಿಸಿದರು.

ಕನ್ನೂರಿನ ಶಾಂತಿಕುಟೀರ ಆಶ್ರಮದ ಶ್ರೀಕೃಷ್ಣ ಗುರೂಜಿ ಮಾತನಾಡಿ, ‘ಶ್ರೀಕೃಷ್ಣನ ನಡಿಗೆ ಮುಕ್ತವಾಗಿತ್ತು. ಶಾಸ್ತ್ರಗಳು ರಾಮ ನಡೆದಂಗ ನಡಿ, ಕೃಷ್ಣ ನುಡಿದಂತೆ ನಡಿಯಬೇಕು ಎಂದು ಹೇಳಿವೆ. ಇಂದಿನ ಯುವಪಡೆ ಆ ಮಾತಿನಂತೆ ನಡೆದುಕೊಳ್ಳಬೇಕು’ ಎಂದರು.

ಡಾ.ಬಾಬುರಾಜೇಂದ್ರ ನಾಯಿಕ ಮಾತನಾಡಿದರು.

ಲಿಂಗಸೂರಿನ ವಿಜಯಮಹಾಂತೇಶ ಶಾಖಾ ಮಠದ ಸಿದ್ದಲಿಂಗ ಸ್ವಾಮಿಜಿ, ಪ್ರಸನ್ನಾಚಾರ್ಯ ಕಟ್ಟಿ, ಪ್ರೇಮಾನಂದ ಬಿರಾದಾರ, ವಿಠ್ಠಲ ಹೊಸಪೇಟ, ರಾಜು ಕುರಿ ಸೇರಿದಂತೆ ಅನೇಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.