ಯಾದಗಿರಿ: ವಸತಿ ರಹಿತರ ಕೇಂದ್ರದಲ್ಲಿರುವವರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಈ ಕೇಂದ್ರಕ್ಕೆ ಸಕಲ ಸೌಕರ್ಯ ಕಲ್ಪಿಸಲು ಸದಾ ಸಿದ್ದ ಎಂದು ಶಹಾಪುರ ನಗರಸಭೆ ಪೌರಾಯುಕ್ತ ರಮೇಶ ಬಡಿಗೇರ ಅವರು ಅಭಿಪ್ರಾಯಪಟ್ಟರು.

ಶಹಾಪುರ ನಗರದಲ್ಲಿನ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ನಗರ ವಸತಿ ರಹಿತರ ಮೇಲ್ವಿಚಾರಣಾ ಸಮಿತಿ ಸಭೆ ಹಾಗೂ ಆರೋಗ್ಯ ತಪಾಸಣೆ ಶಿಬಿರವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಯಾರೇ ವಸತಿ ರಹಿತರು ಹೊಸದಾಗಿ ದಾಖಲಾದಲ್ಲಿ ಅವರ ಮಾಹಿತಿ ಪೊಲೀಸ್ ಠಾಣೆಗೆ ವರದಿ ಮಾಡಲು ತಿಳಿಸಿದರು.

ಸಮುದಾಯ ಸಂಘಟನಾಧಿಕಾರಿಗಳಾದ ಅಶೋಕ ಬಿಲಗುಂದ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಡೇ-ನಲ್ಮ್ ಅಡಿಯಲ್ಲಿ ಸ್ಥಾಪಿತವಾದ ಈ ಕೇಂದ್ರ ವಸತಿ ರಹಿತರು ಸದ್ಬಳಕೆ ಮಾಡಿಕೊಳ್ಳಲು ಸೂಚಿಸಿದರು.

ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆಯ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಭೀಮಾಶಂಕರ ಬೆನಕನಹಳ್ಳಿ ಸಂಸ್ಥೆ ನಡೆದು ಬಂದ ದಾರಿ ವಿವರಿಸುತ್ತಾ ಇಲ್ಲಿಯವರೆಗೆ ಜಿಲ್ಲೆಯಲ್ಲಿ 5,000ಕ್ಕೂ ಹೆಚ್ಚು ನಿರಾಶ್ರಿತರಿಗೆ ಆಶ್ರಯ ನೀಡಿದ ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಎಲೆಮರೆಕಾಯಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರ ಅಭಿಯಾನ ವ್ಯವಸ್ಥಾಪಕ ಗುರು ತಳವಾರ, ಭೀಮಾಶಂಕರ ಕಟ್ಟಿಮನಿ, ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಕವಿತಾ, ಸಂಗೀತಾ, ಯುವ ನಾಯಕರಾದ ರಾಮು, ಪ್ರದೀಪ ಅಣಬಿ, ಸುನಿಲ್ ಹಳಿಸಗರ, ಭೀಮರಾಯ ಬಡಿಗೇರ, ಕಾಶಿರಾಜ ಹಳಿಸಗರ, ಭೀಮು ಕನ್ಯೆಕೋಳೂರು, ಭೀಮರಾಯ ಕಟ್ಟಿಮನಿ ಕೇಂದ್ರದ ಕೇರಟೇಕರ್‌ಗಳಾದ ಮಲ್ಲಪ್ಪ ರೋಜಾ, ಮಲ್ಲಿಕಾರ್ಜುನ, ಮರೆಮ್ಮ ಕಟ್ಟಿಮನಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.