ನಾರಾಯಣಪುರ: ಇಲ್ಲಿನ ಎಎನ್ಸಿಸಿ ಮೈದಾನದಲ್ಲಿ ಆರ್ಟಿಜೆ ಚಾಲೇಂಜರ್ಸ್ ಟ್ರೋಫಿ ಹಾರ್ಡ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ನ.16ರಂದು ಶನಿವಾರ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ನರಸಿಂಹನಾಯಕ(ರಾಜುಗೌಡ) ಚಾಲನೆ ನೀಡಲಿದ್ದಾರೆ.

ಮಾಜಿ ಸಚಿವ ರಾಜುಗೌಡ ಹಾಗೂ ಅವರ ಸಹೋದರ ಬಬಲುಗೌಡ ಅವರ ಜನ್ಮದಿನದ ಅಂಗವಾಗಿ ರಾಜುಗೌಡ ಅಭಿಮಾನಿ ಬಳಗದ ವತಿಯಿಂದ 22 ವರ್ಷಗಳಿಂದ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ.

ಈಗಾಗಲೇ 90ಕ್ಕೂ ಹೆಚ್ಚು ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ವಿಜೇತ ತಂಡಕ್ಕೆ ಡಿಎಸ್ ಮ್ಯಾಕ್ಸ್ನ ಎಸ್.ಪಿ ದಯಾನಂದ ಅವರು ಪ್ರಥಮ ಬಹುಮಾನ ₹2.8 ಲಕ್ಷ ನಗದು, ದ್ವಿತೀಯ ₹1.40 ಲಕ್ಷ ನಗದು ನೀಡಲಿದ್ದಾರೆ. ರನ್ನರ್ಸ್ ಟ್ರೋಫಿಯನ್ನು ಗುತ್ತಿಗೆದಾರ ಬಿ.ಎಂ ಅಳ್ಳಿಕೋಟಿ ಹಾಗೂ ತೃತೀಯ ಬಹುಮಾನ ₹50 ಸಾವಿರ ಹಾಗೂ ಟ್ರೋಫಿಯನ್ನು ಗುತ್ತಿಗೆದಾರ ಬಿ.ಎನ್ ಪೊಲೀಸ್ ಪಾಟೀಲ್, ನಾಲ್ಕನೇ ಬಹುಮಾನ ₹50ಸಾವಿರ ಹಾಗೂ ಟ್ರೋಫಿಯನ್ನು ಗುತ್ತಿಗೆದಾರ ಮಲ್ಲು ನವಲಗುಡ್ಡ ನೀಡಲಿದ್ದಾರೆ.

ಪಂದ್ಯವು ಯೂಟೂಬ್ನಲ್ಲಿ ಲೈವ್ ಆಗಲಿದ್ದು, ಮೈದಾನ ನಿರ್ಮಾಣ, ಆಟಗಾರಿಗೆ ಸಮವಸ್ತ್ರ, ಕ್ರೀಡಾ ಸಾಮಗ್ರಿ ಹಾಗೂ ಉತ್ತಮ ತಂಡ, ವಿಶೇಷ ಸಾಧನೆ ಮಾಡುವ ಆಟಗಾರರಿಗೆ ರಾಜಕೀಯ ಮುಖಂಡರು, ಇತರರು ವೈಯಕ್ತಿಕ ಬಹುಮಾನ ನೀಡಲಿದ್ದಾರೆ ಎಂದು ಟೂರ್ನಿಯ ಆಯೋಜಕ ಶಿವಪ್ಪ ಬಿರಾದಾರ ತಿಳಿಸಿದ್ದಾರೆ.

ಆಂಜನೇಯ ದೊರೆ, ನರಸಪ್ಪ ದೇಗಲಮಡ್ಡಿ, ಜೆಟ್ಟಪ್ಪ ಗೊಳಸಂಗಿ, ಅಮರಸಿಂಗ್, ಅರುಣ ಸೇರಿದಂತೆ ರಾಜುಗೌಡ ಅಭಿಮಾನಿ ಬಳಗದವರು ಇನ್ನಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.