ಯಾದಗಿರಿ: ಸೇವೆಯಿಂದ ಅಮಾನತಗೊಂಡಿರುವ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಶರಣಬಸಪ್ಪ ಭೋಗಿಯನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಶಹಾಪುರ ತಾಲ್ಲೂಕಿನ ಪ್ರಗತಿಪರ ರೈತ ರಾಘವೇಂದ್ರ ಬೋವಿಕಾಡಂಗೇರಾ ಆಗ್ರಹಿಸಿದರು.

ಕಳೆದ ಏಳೆಂಟು ತಿಂಗಳಿಂದ ಈ ಅಧಿಕಾರಿ ಮಾಡಿರುವ ಭ್ರಷ್ಟಾಚಾರದ ಬಗ್ಗೆ ದಾಖಲೆ ಸಮೇತವಾಗಿ ಇಲಾಖೆ ಆಯುಕ್ತರಿಗೆ ದೂರು ನೀಡಿದ್ದೆ. ಆ ಕಾರಣದಿಂದ ಅವರನ್ನು ಸೇವೆಯಿಂದ ವಜಾ ಮಾಡುವ ಬದಲಿಗೆ ಅಮಾನತಗೊಳಿಸಿ ಕೈತೊಳೆದುಕೊಂಡಿದೆ. ಇದು ನಮಗೆ ತೃಪ್ತಿ ತಂದಿಲ್ಲ. ಈಗ ಮತ್ತೊಮ್ಮೆ ಎಲ್ಲ ದಾಖಲೆಗಳೊಂದಿಗೆ ರಾಜ್ಯಪಾಲರಿಗೆ ದೂರು ಕೊಡುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ನನಗೆ ಇಲಾಖೆಯಿಂದ ಸಿಗಬೇಕಾದ ಸೌಲಭ್ಯಗಳನ್ನು ನೀಡದೆ ವಿನಾಃ ಕಾರಣ ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಕೃಷಿ ಕಾಯಕ ಮಾಡದಂತೆಯೇ ಅಡೆತಡೆ ಮಾಡುವ ಮೂಲಕ ವ್ಯವಸಾಯದಿಂದ ಬರುತ್ತಿದ್ದ ₹1 ಕೋಟಿ ನಷ್ಟಕ್ಕೆ ಕಾರಣರಾದ ಇಲಾಖೆ ಜೆಡಿ ಮತ್ತು ಡಿಡಿ ವಿರುದ್ಧ ₹2 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು’ ಎಂದು ತಿಳಿಸಿದರು.

‘ನಾಲ್ಕು ಎಕರೆ ಭೂಮಿಯಲ್ಲಿ ವಿವಿಧ ವಾಣಿಜ್ಯ ತೋಟಗಾರಿಕೆ ಬೆಳೆ ಬೆಳೆಯುತ್ತಿದೆ. ಇದೇ ಕಾರಣಕ್ಕೆ ಇಲ್ಲಿನ ತೋಟಗಾರಿಕೆ ಕಚೇರಿಗೆ ಹೋಗಿ ಇಲಾಖೆ ಸೌಲಭ್ಯ ನೀಡುವಂತೆ ಕೇಳಿದ್ದೆ. ಆದರೆ, ಕೊಡಲು ಬರುವುದಿಲ್ಲ ಎಂದು ಹೇಳುವ ಮೂಲಕ ನನಗೆ ಅನ್ಯಾಯ ಮಾಡಿದರು. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಪ್ರಕರಣ ದಾಖಲಿಸಿದ ಡಿಡಿ ಭೋಗಿ ಮಾಡಿರುವ ಭ್ರಷ್ಟಾಚಾರದ ಇಂಚಿಂಚು ಮಾಹಿತಿ ಕಲೆ ಹಾಕಿ ದೂರು ನೀಡಿದಾಗ ಜಂಟಿ ನಿರ್ದೇಶಕರು ಸರಿಯಾಗಿ ತನಿಖೆ ಮಾಡದೇ ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಎಂದು ನನ್ನ ಮೇಲೆ ಇಲ್ಲದ ಆರೋಪ ಮಾಡುವ ಮೂಲಕ ವಜಾ ಆಗಬೇಕಾಗಿದ್ದ ಡಿಡಿ ಭೋಗಿಯನ್ನು ಕೇವಲ ಅಮಾನತುಗೊಳಿಸಿದ್ದಾರೆ. ನಿಖರ ನ್ಯಾಯ ಪಡೆಯಲು ರಾಜ್ಯಪಾಲರಿಗೆ ದೂರು ಕೊಡಲಾಗುವುದು’ ಎಂದು ಹೇಳಿದ್ದಾರೆ.

ಇದೇ ವೇಳೆ ಲಿಖಿತ ದೂರಿನ ಮೇಲೆಯೇ ಇಲಾಖೆ ತನಿಖೆ ನಡೆಸಿ ಸೇವೆಯಿಂದ ಅಮಾನತಗೊಳಿಸಿದ್ದರ ಬಗ್ಗೆ ದಾಖಲೆ ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.