ಹುಣಸಗಿ: ತಾಲ್ಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿಯಲ್ಲಿ ಎಪಿಡಿ ಸಂಸ್ಥೆಯ ವತಿಯಿಂದ ಅಂಗವಿಕಲರಿಗೆ ಸಾಧನಾ ಸಲಕರಣೆಗಳನ್ನು ವಿತರಣಾ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಮುನಾ ಜುಮ್ಮಪ್ಪ ಮಾತನಾಡಿ, ಅಂಗವಿಕಲರಿಗೆ ದೇವರು ವಿಶೇಷವಾದ ಶಕ್ತಿ ಹಾಗೂ ಜ್ಞಾನವನ್ನು ನೀಡಿರುತ್ತಾನೆ. ಆದರೆ ಯಾವುದಕ್ಕೂ ಧೃತಿಗೆಡದೇ ಆತ್ಮವಿಶ್ವಾಸದಿಂದ ಮುನ್ನಡೆಯುವುದು ಮುಖ್ಯ ಎಂದು ಹೇಳಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಕೋರಿ ಮಾತನಾಡಿ, ಅಂಗವಿಕಲರ ಕಲ್ಯಾಣಕ್ಕಾಗಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿವೆ. ಎಲ್ಲರೂ ಒಗ್ಗಟ್ಟು ಹಾಗೂ ಸಮನ್ವಯತೆಯಿಂದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ತಾಲ್ಲೂಕು ಸಂಯೋಜಕ ಶಿವಾನಂದ ಕುಂಬಾರ ಮಾತನಾಡಿ, ನಮ್ಮ ಸಂಸ್ಥೆಯಿಂದ ಹುಣಸಗಿ ಹಾಗೂ ಸುರಪುರ ತಾಲ್ಲೂಕಿನಲ್ಲಿ ಅಂಗವಿಕಲರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಜತೆಯಲ್ಲಿ ಎಲ್ಲರೂ ಸ್ವಯಂ ಪ್ರೇರಿತರಾಗಿ ಸ್ವಾವಲಂಬಿ ಜೀವನ ನಡೆಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ತಾಲ್ಲೂಕಿನಲ್ಲಿ ಗುರುತಿಸಲಾಗಿರುವ ಒಟ್ಟು 35 ಜನಕ್ಕೆ ತ್ರಿಚಕ್ರ ವಾಹನ, ಊರುಗೋಲು, ಕಂಕಳು ದೊಣ್ಣೆ, ಗಾಲಿ ಕುರ್ಚಿ, ನಿಲ್ಲುವ ಸ್ಟಾಂಡ್ ಸೇರಿ ಇತರ ಪರಿಕರಗಳನ್ನು ವಿತರಿಸಲಾಯಿತು.

ಗ್ರಾ.ಪಂ. ಕಾರ್ಯದರ್ಶಿ ವೆಂಕೋಬ ಬಾಕಲಿ, ಸಮುದಾಯ ಸಮನ್ವಯ ಅಧಿಕಾರಿ, ಲಾಳೇಮಶಾಕ್, ರಮೇಶ, ಸುನಿತಾ, ಯೋಗಿಶ್ರೀ, ಮಹಾಂತೇಶ, ಹಣಮಂತ್ರಾಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.