ನಗರಸಭೆಯ ಅಧೀನದಲ್ಲಿ ಕೆರೆ ಬರುತ್ತದೆ. ಒತ್ತುವರಿಯಾಗಿದ್ದರೆ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ
ಉಮಾಕಾಂತ ಹಳ್ಳೆ ತಹಶೀಲ್ದಾರ್
ಮಾವಿನ ಕೆರೆ ಸಣ್ಣ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ. ಕೆರೆ ಒತ್ತುವರಿ ಮಾಡಿಕೊಳ್ಳುತ್ತಿದ್ದರೆ ತಕ್ಷಣ ಕ್ರಮ ತೆಗೆದುಕೊಳ್ಳುತ್ತೇವೆ
ರಮೇಶ ಬಡಿಗೇರ ಪೌರಾಯುಕ್ತ
ಕೆರೆಯ ಅಕ್ಕಪಕ್ಕದ ಜಮೀನುಗಳ ರೈತರು ಕೆರೆಯನ್ನು ಒತ್ತವರಿ ಮಾಡಿಕೊಂಡು ಅಕ್ರಮವಾಗಿ ಇಟ್ಟಿಗೆ ಭಟ್ಟಿ ಸಿದ್ಧಪಡಿಸುತ್ತಿದ್ದಾರೆ
ಬಸವರಾಜ ಅರುಣಿ ಸಾಮಾಜಿಕ ಕಾರ್ಯಕರ್ತ
ಕುಂಟುತ್ತಾ ಸಾಗಿದ ಕಾಮಗಾರಿ
ಶಹಾಪುರ: ಶಹಾಪುರ ಶಾಖಾ ಕಾಲುವೆ (ಎಸ್.ಬಿಸಿ) ಕಾಲುವೆ ಮೂಲಕ ಮಾವಿನ ಕೆರೆ ಹಾಗೂ ನಾಗರ ಕೆರೆಗೆ ₹4.84 ಕೋಟಿ ವೆಚ್ಚದಲ್ಲಿ ಕೆರೆಗೆ ನೀರು ತುಂಬಿಸುವ ಯೋಜನ ವರ್ಷ ಹಿಂದೆ ಚಾಲನೆ ಸಿಕ್ಕಿದ್ದರೂ ಕಾಮಗಾರಿ ಕುಂಟುತ್ತ ಸಾಗಿದೆ. ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಂಡಿದ್ದರೆ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿತ್ತು. ಇನ್ನೂ ಪೈಪ್‌ಲೈನ್ ಅಳವಡಿಸುವ ಕಾರ್ಯ ಸಾಗಿದೆ ಎನ್ನುತ್ತಾರೆ ಕೆಬಿಜೆಎನ್‌ಎಲ್ ನಿಗಮದ ಎಂಜಿನಿಯರ್ ಒಬ್ಬರು.
ಅತ್ಯುತ್ತಮ ಪ್ರವಾಸಿ ತಾಣ ಇದಾಗಲಿದೆ
ಶಹಾಪುರ: ನಗರಕ್ಕೆ ಹೊಂದಿಕೊಂಡಿರುವ ಮಾವಿನ ಕೆರೆಯ ಸುಮಾರು ಆರು ಎಕರೆಯಷ್ಟಿದೆ. ಅಂದಿನ ನಿಜಾಮನರ ಆಳ್ವಿಕೆಯಲ್ಲಿ ಬೆಟ್ಟದ ಇಳಿಜಾರು ಪ್ರದೇಶಕ್ಕೆ ಹೊಂದಿಕೊಂಡು ಕೆರೆ ನಿರ್ಮಿಸಿದ್ದಾರೆ. ಅಲ್ಲದೆ ವಿಶಾಲವಾದ ಬುದ್ದವಿಹಾರವು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಕೆರೆಯಲ್ಲಿ ಸದಾ ನೀರು ಸಂಗ್ರಹಿಸಿ ಬೊಟಿಂಗ್ ವ್ಯವಸ್ಥೆ ಮಾಡಿದರೆ ಅತ್ಯುತ್ತಮ ಪ್ರವಾಸಿ ತಾಣವಾಗಿ ಕೆರೆಯ ಅಂಗಳ ರೂಪಗೊಳ್ಳುತ್ತದೆ ಎನ್ನುತ್ತಾರೆ ನಗರದ ನಿವಾಸಿಗರು.