ಬಂದಳ್ಳಿ (ಯರಗೋಳ): ಬಂದಳ್ಳಿ ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ಕರಣಮ್ಮ ಸುಮಂತ ಗೆಲುವು ಸಾಧಿಸಿದ್ದಾರೆ.

ಅನುರಾಧ ವೀರಭದ್ರಪ್ಪ ಯಡ್ಡಳ್ಳಿ ಅವರ ಸದಸ್ಯತ್ವ ರದ್ದಾದ ಹಿನ್ನಲೆ ನ.23 ರಂದು ಚುನಾವಣೆ ನಡೆದು, ಮಂಗಳವಾರ ನಗರದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಮತ ಎಣಿಕೆ ನಡೆಯಿತು. ಕರಣಮ್ಮ 382 ಮತ ಪಡೆದರೆ, ಪ್ರತಿಸ್ಪರ್ಧಿ ಶೋಭಾ ಭೀಮರಾಯ 334 ಮತ ಪಡೆದರು. 19 ಮತಗಳು ತಿರಸ್ಕೃತಗೊಂಡು, 48 ಮತಗಳಿಂದ ಕರಣಮ್ಮ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ವಾಗೀಶ್ ಘೋಷಿಸಿದರು.

ಸಂಭ್ರಮಾಚರಣೆಯಲ್ಲಿ ಮಾತನಾಡಿದ ಯುವ ಮುಖಂಡ ಅರ್ಜುನ ಚೌವ್ಹಾಣ್, ಅಭಿವೃದ್ಧಿಗೆ ಶ್ರಮಿಸುವ ಅಭ್ಯರ್ಥಿಯನ್ನು ಮತದಾರ ಗೆಲ್ಲಿಸಿದ್ದು, ನೂತನ ಸದಸ್ಯರು ಗ್ರಾಮೀಣ ಭಾಗದಲ್ಲಿ ಉತ್ತಮ ಕೆಲಸ ಮಾಡುವಂತೆ ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಸತ್ಯಪ್ಪ, ಜ್ಞಾನಮಿತ್ರ, ಗಿರೀಶ ಕುಮಾರ, ಯೇಸುರಾಜ, ಮಂಜುನಾಥ, ಆನಂದ, ರವಿ, ಗೋವಿಂದಪ್ಪ, ಸಲ್ಮಾನ್, ಶರಣು ಹೊಸಮನಿ, ಶರಣಪ್ಪ ನಿಂಗಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.