ಯಾದಗಿರಿ: ಕಳೆದ ಒಂದು ತಿಂಗಳಲ್ಲಿ ತರಕಾರಿ, ಸೊಪ್ಪುಗಳ ಬೆಲೆಯಲ್ಲಿ ಏರಿಳಿತ ಕಂಡು ಬಂದಿದೆ. ಹಸಿ ಶುಂಠಿ, ಬೆಳ್ಳುಳ್ಳಿ, ಬೀನ್ಸ್, ನುಗ್ಗೆಕಾಯಿ ಶತಕದ ಮೇಲೆ ದರವಿದ್ದು, ಉಳಿದ ತರಕಾರಿ 70 ರಿಂದ 80ರೊಳಗೆ ತರಕಾರಿ ಬೆಲೆ ಇದೆ.

ಹಸಿ ಶುಂಠಿ, ಬೆಳ್ಳುಳ್ಳಿ ದರ ಮಾತ್ರ ದ್ವಿಶತಕ ಬಾರಿಸಿದೆ. ಕಳೆದ ನಾಲ್ಕು ದಿನಗಳ ಹಿಂದೆ ಶತಕ ಬಾರಿಸಿದ ಟೊಮೆಟೊ ಮತ್ತೆ ಇಳಿಕೆ ಕಂಡಿದ್ದು, ₹ 80ಗೆ ಕೆ.ಜಿ ಮಾರಾಟವಾಗುತ್ತಿದೆ. ಬೀನ್ಸ್ ದರ ಕಳೆದ ಒಂದು ತಿಂಗಳಲ್ಲಿ ಕೆಜಿಗೆ ₹ 50 ದರ ಇಳಿಕೆಯಾಗಿದೆ.

ಬದನೆಕಾಯಿ, ಬೆಂಡೆಕಾಯಿ, ಮೂಲಂಗಿ, ತೊಂಡೆಕಾಯಿ ತರಕಾರಿ ದರಗಳು ₹ 5ರಿಂದ 10 ರೂಪಾಯಿ ಇಳಿಕೆಯಾಗಿದೆ. ಆದರೆ, ಟೊಮೆಟೊ, ನುಗ್ಗೆಕಾಯಿ, ಗಜ್ಜರಿ, ಸೋರೆಕಾಯಿ, ಬಿಟ್ರೂಟ್ ದರ ₹5 ರಿಂದ 10 ರೂಪಾಯಿ ಏರಿಕೆಯಾಗಿದೆ.

ಕಳೆದ ಒಂದು ತಿಂಗಳಿನಿಂದಲೂ ದೊಣ್ಣೆಮೆಣಸಿನಕಾಯಿ, ಎಲೆಕೋಸು, ಹೂಕೋಸು, ಚವಳೆಕಾಯಿ, ಆಲೂಗಡ್ಡೆ, ಈರುಳ್ಳಿ, ಹಾಗಲಕಾಯಿ, ಅವರೆಕಾಯಿ ದರ ಯಥಾಸ್ಥಿತಿಯಲ್ಲಿವೆ.

ಸೊಪ್ಪುಗಳ ದರ:

ಕಳೆದ ಒಂದು ತಿಂಗಳಲ್ಲಿ ಸೊಪ್ಪುಗಳ ದರದಲ್ಲಿ ಏರಿಕೆಯಾಗಿತ್ತು. ಆದರೆ, ಈ ಬಾರಿ ಸೊಪ್ಪುಗಳ ಬೆಲೆ ಕಡಿಮೆಯಾಗಿದೆ. ಮೆಂತ್ಯೆ, ಸಬ್ಬಸಗಿ, ಪುದೀನಾ, ಕೊತ್ತಂಬರಿ ₹15 ರಿಂದ 20ಗೆ ದೊಡ್ಡ ಕಟ್ಟು ಮಾರಾಟ ಮಾಡಲಾಗುತ್ತಿದೆ. ಪಾಲಕ್, ಪುಂಡಿಪಲ್ಯೆ, ರಾಜಗಿರಿ ಸೊಪ್ಪು ₹5ಗೆ ಒಂದು ₹20ಗೆ ಐದು ಕಟ್ಟು ದರ ನಿಗದಿ ಪಡಿಸಲಾಗಿದೆ.

ಮಳೆಗಾಲವಾಗಿದ್ದರಿಂದ ತರಕಾರಿ ಸೊಪ್ಪುಗಳ ದರದಲ್ಲಿ ಏರಿಳಿಕೆಯಾಗಿದ್ದು ಕೆಲ ತರಕಾರಿಗಳು ಯಥಾಸ್ಥಿತಿಯನ್ನು ಕಾಪಾಡಿಕೊಂಡಿದೆ
- ಸುರೇಶ್ ಪಗಲಾಪುರ, ತರಕಾರಿ ವ್ಯಾಪಾರಿ

ಹಲವಾರು ದಿನಗಳ ಬಳಿಕ ಸೊಪ್ಪುಗಳ ದರ ಇಳಿಕೆಯಾಗಿದೆ. ಮಳೆಗಾಲ ಇರುವುದರಿಂದ ಕೆಲ ಸೊಪ್ಪುಗಳು ಮಾರುಕಟ್ಟೆಯಲ್ಲಿ ಯಥೇಚ್ಛವಾಗಿ ಸಿಗುತ್ತಿವೆ
ರೇಣುಕಾ ಕುರ್ಮಯ್ಯ, ಗೃಹಿಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.