ಯಾದಗಿರಿ: ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಭತ್ತ, ಹತ್ತಿ ಹಾಗೂ ಮೆಣಸಿನಕಾಯಿ ಬೆಳೆಗಳು ಹಾನಿಯಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ.

ಸಾಲ ಸೂಲಮಾಡಿ ದುಬಾರಿ ಬೆಲೆಯ ಬಿತ್ತನೆ ಬೀಜಗಳನ್ನು ತಂದು ಜಮೀನುಗಳಲ್ಲಿ ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಸಕಾಲಕ್ಕೆ ಮಳೆ ಬಂದ ಕಾರಣ ಫಸಲಿನಲ್ಲಿ ಚೇತರಿಕೆ ಕಂಡು ಬಂದಿತ್ತು. ಇದರಿಂದ ರೈತರು ಉತ್ತಮವಾದ ಇಳುವರಿ ಆಶಾಭಾವನೆ ಹೊಂದಿದ್ದರು. ಆದರೆ, ಅಕಾಲಿಕವಾಗಿ ಬಂದ ಮಳೆಯಿಂದಾಗಿ ಬೆಳೆಗಳು ಹಾನಿಯಾಗಿವೆ.

ಅಕ್ಟೋಬರ್ ತಿಂಗಳಲ್ಲಿ ಅಕಾಲಿಕ ಮಳೆಗೆ 337 ಹೆಕ್ಟೇರ್ ಬೆಳೆಗಳು ನೆಲಕಚ್ಚಿವೆ. ಶಹಾಪುರ ತಾಲ್ಲೂಕಿನಲ್ಲಿ ಭತ್ತ 12 ಹೆಕ್ಟೇರ್, ಹತ್ತಿ 38 ಹೆಕ್ಟೇರ್ ಸೇರಿದಂತೆ 50 ಹೆಕ್ಟೇರ್, ಸುರಪುರ ತಾಲ್ಲೂಕಿನಲ್ಲಿ ತೊಗರಿ 59, ಹತ್ತಿ 143 ಹೆಕ್ಟೇರ್, ಗುರುಮಠಕಲ್ ತಾಲ್ಲೂಕಿನಲ್ಲಿ ತೊಗರಿ 85 ಹೆಕ್ಟೇರ್ ಬೆಳೆನಾಶವಾಗಿದೆ.

ಇನ್ನೂ ಏಪ್ರಿಲ್ 1ರಿಂದ ಅಕ್ಟೋಬರ್ 29ರ ವರೆಗೆ ಜಿಲ್ಲೆಯಲ್ಲಿ 669 ಹೆಕ್ಟೇರ್ ಕೃಷಿ ಇಲಾಖೆಯ ಬೆಳೆ ನಾಶವಾಗಿದೆ. ಶಹಾಪುರ ತಾಲ್ಲೂಕಿನಲ್ಲಿ 67.39 ಹೆಕ್ಟೇರ್, ಸುರಪುರ 266.21, ವಡಗೇರಾ 333.11 ಹೆಕ್ಟೇರ್ ಸೇರಿದಂತೆ 669.71 ಹೆಕ್ಟೇರ್ ಬೆಳೆ ನಾಶವಾಗಿದೆ.

ತೋಟಗಾರಿಕೆ ಬೆಳೆ ಯಾದಗಿರಿ ತಾಲ್ಲೂಕಿನಲ್ಲಿ 2.20 ಹೆಕ್ಟೇರ್, ಶಹಾಪುರ ತಾಲ್ಲೂಕಿನಲ್ಲಿ 5.68 ಹೆಕ್ಟೇರ್, ಸುರಪುರ ತಾಲ್ಲೂಕಿನಲ್ಲಿ 0.97 ಹೆಕ್ಟೇರ್, ವಡಗೇರಾ ತಾಲ್ಲೂಕಿನಲ್ಲಿ 11.64 ಹೆಕ್ಟೇರ್, ಗುರುಮಠಕಲ್ ತಾಲ್ಲೂಕಿನಲ್ಲಿ 0.4 ಹೆಕ್ಟೇರ್ ಸೇರಿದಂತೆ ಒಟ್ಟಾರೆ 20.89 ಹೆಕ್ಟೇರ್ ಬೆಳೆ ನಾಶವಾಗಿದೆ.

‘ಅಕಾಲಿಕ ಮಳೆಯಿಂದ ಬೆಳೆಗಳು ಹಾಳಾಗಿದ್ದು, ನಮಗೆ ತುಂಬಾ ನಷ್ಟವಾಗಿದೆ. ಇದರಿಂದ ಸರ್ಕಾರದ ನಮ್ಮ ನೆರವಿಗೆ ಧಾವಿಸಬೇಕು’ ಎನ್ನುತ್ತಾರೆ ರೈತ ಬಸವರಾಜ ಪಾಟೀಲ.

ಆರ್ಎನ್ಆರ್ ತಳಿಯ ಭತ್ತ ಹಾನಿ: ಹುಣಸಗಿ ತಾಲ್ಲೂಕಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ಹೇಳಿಕೊಳ್ಳುವಂತಹ ಮಳೆಯಾಗದೇ ಇರುವುದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಯಾವುದೇ ಬೆಳೆ ಹಾನಿ ಆಗಿಲ್ಲ. ಆದರೆ, ಕಳೆದ ಎರಡು ದಿನಗಳ ಹಿಂದೆ ಬೀಸಿದ ಗಾಳಿ ಮತ್ತು ಮಳೆಯಿಂದಾಗಿ ಅಲ್ಲಲ್ಲಿ ಭತ್ತ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

‘ಕಚಕನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರ್ಎನ್ಆರ್ ತಳಿಯ ಭತ್ತ ಹಾನಿಯಾಗಿದ್ದು, ಸದ್ಯ ಕಂದಾಯ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಂದ ಜಂಟಿ ಸರ್ವೆ ಕಾರ್ಯ ನಡೆದಿದೆ’ ಎಂದು ಕೃಷಿ ಅಧಿಕಾರಿ ಸಿದ್ದಾರ್ಥ್ ಪಾಟೀಲ ಮಾಹಿತಿ ನೀಡಿದರು.

‘ನೂರಾರು ಎಕರೆ ಪ್ರದೇಶದಲ್ಲಿ ಆರ್ಎನ್ಆರ್ ತಳಿಯ ಭತ್ತ ಗಾಳಿಗೆ ನೆಲಕ್ಕುರುಳಿವೆ. ಸದ್ಯ ಕಾಳು ಕಟ್ಟುವ ಹಂತದಲ್ಲಿದೆ ತಿಳಿದುಬಂದಿದೆ. ಈ ತಳಿಯ ಭತ್ತದ ಕಾಂಡದಲ್ಲಿ ಹೆಚ್ಚು ಶಕ್ತಿ ಇರುವುದಿಲ್ಲ. ಎತ್ತರವಾಗಿ ಬೆಳೆಯುವುದರಿಂದಾಗಿ ಗಾಳಿಗೆ ಬೇಗನೆ ಬೀಳುತ್ತದೆ’ ಎಂದು ಮಾಹಿತಿ ನೀಡಿದರು.

‘ಈ ಭತ್ತಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇರುವುದರಿಂದಾಗಿ ರೈತರು ಇದನ್ನು ಬೆಳೆಯಲು ಮುಂದಾಗುತ್ತಾರೆ’ ಎಂದು ರೈತ ನಿಂಗನಗೌಡ ಬಸನಗೌಡ್ರ ಹೇಳಿದರು.

ಬೆಳೆ ಹಾನಿ ವಿವರ (ಅಕ್ಟೋಬರ್ ತಿಂಗಳು) (ಹೆಕ್ಟೇರ್)

ಶಹಾಪುರ;50

ಸುರಪುರ;202

ಗುರುಮಠಕಲ್;85

ಒಟ್ಟು; 337

ಸುರಪುರ: 873 ಹೆಕ್ಟೇರ್ ಭತ್ತ ಹಾನಿ

ಸುರಪುರ: ತಾಲ್ಲೂಕು ವ್ಯಾಪ್ತಿಯಲ್ಲಿ ಅಕಾಲಿಕವಾಗಿ ಸುರಿದ ಮಳೆಗೆ ತಾಲ್ಲೂಕಿನ ದೇವಪುರ, ಹಾವಿನಾಳ, ಕಾಗರಾಳ, ಕವಡಿಮಟ್ಟಿ, ವಾಗಣಗೇರಿ, ತಳವಾರಗೇರಿ, ಮಂಗಳೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಂದಾಜು 873 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ನೆಲಕಚ್ಚಿದೆ.

ನಷ್ಟವಾದ ಎಲ್ಲ ತಳಿ ಆರ್ಎನ್ಆರ್, ಈ ತಳಿ ಇತರ ಬೆಳೆಗಿಂತ ಎತ್ತರದಲ್ಲಿ ಬೆಳೆಯುವುದರಿಂದ ಜೋರಾಗಿ ಬಿದ್ದ ಮಳೆಗೆ ನೆಲಕ್ಕೆ ಬಾಗಿದೆ. ಬೆಳೆ ಕಾಳು ಕಟ್ಟುವ ಹಂತದಲ್ಲಿದ್ದರಿಂದ ನಷ್ಟ ಅಧಿಕವಾಗಿದೆ. ಹೀಗಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಕೃಷಿ ಇಲಾಖೆ, ಕಂದಾಯ ಇಲಾಖೆಯೊಂದಿಗೆ ಜಂಟಿಯಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿದೆ. ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಸಮೀಕ್ಷೆ ಕಾರ್ಯದಲ್ಲಿ ನಿಧಾನ ಗತಿ ಇದೆ.

85 ಹೆಕ್ಟೇರ್ ತೊಗರಿ ಬೆಳೆ ನಾಶ

ಗುರುಮಠಕಲ್: ತಾಲ್ಲೂಕಿನ ಕೊಂಕಲ್ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿನ ರೇಗಡಿ (ಕಪ್ಪು ಮಣ್ಣು) ಮಣ್ಣಿರುವ ಜಮೀನಿನಲ್ಲಿರುವ 85 ಹೆಕ್ಟೇರ್ ತೊಗರಿ ಬೆಳೆ ನಾಶವಾಗಿದೆ.

ಕೊಂಕಲ್ ರೈತ ಸಂಪರ್ಕ ಕೇಂದ್ರ ಅನಪುರ, ಕೊಂಕಲ್ ಮತ್ತು ಯಲಸತ್ತಿ ಗ್ರಾಮಗಳಲ್ಲಿನ ರೇಗಡಿ ಮಣ್ಣಿರುವ ಜಮೀನುಗಳಲ್ಲಿ ಬಿತ್ತನೆ ಮಾಡಲಾದ ತೊಗರಿ ಬೆಳೆಯು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಸತತ ಮಳೆಯಿಂದ 85 ಹೆಕ್ಟೇರ್ ಬೆಳೆ ನಾಶವಾಗಿದೆ.

ಬೆಳೆ ನಾಶದ ಕುರಿತು ಕಂದಾಯ ಮತ್ತು ಕೃಷಿ ಇಲಾಖೆಯ ಜಂಟಿ ಸಮೀಕ್ಷೆ ನಡೆಸಲಾಗಿದ್ದು, ತಾಲ್ಲೂಕಿನ ಕೊಂಕಲ್ ವ್ಯಾಪ್ತಿಯಲ್ಲಿ ತೊಗರಿ ಬೆಳೆ ನಾಶವಾಗಿರುವ ಕುರಿತು ಸಮೀಕ್ಷಾ ವರದಿಯನ್ನು ಸಂಬಂಧಿತ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಕೃಷಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದರು.

ಈಚೆಗೆ ಕವಡಿಮಟ್ಟಿಯ ಕೃಷಿ ವಿಸ್ತೀರ್ಣಾ ಕೇಂದ್ರದ ಮುಖ್ಯಸ್ಥ ಡಾ.ಜಯಪ್ರಕಾಶ ಮತ್ತು ಬೇಸಾಯ ವಿಜ್ಞಾನಿ ಡಾ.ಮಲ್ಲರೆಡ್ಡಿ ಜಮೀನುಗಳಿಗೆ ಭೇಟಿ ನೀಡಿ, ಮಳೆಯ ನಂತರದ ಬೆಳೆಯ ಸ್ಥಿತಿಗತಿ ಕುರಿತು ಪರಿಶೀಲಿಸಿದ್ದಾರೆ.

ಬೆಳೆ ನಷ್ಟವಾಗಿರುವ ಬಗ್ಗೆ ಸಮೀಕ್ಷೆ ನಡೆಯುತ್ತಿದ್ದು, ಸದ್ಯ 337 ಹೆಕ್ಟೇರ್ ಪತ್ತೆಯಾಗಿದೆ. ಜಿಪಿಎಸ್ ಫೋಟೊ ಸರ್ವೆ ನಡೆಸಲಾಗುತ್ತಿದ್ದು, ವಾರದಲ್ಲಿ ಪೂರ್ಣಗೊಳ್ಳಲಿದೆ
ರತೇಂದ್ರನಾಥ ಸೂಗೂರುಜಂಟಿ ಕೃಷಿ ನಿರ್ದೇಶಕ

111.36 ಹೆಕ್ಟೇರ್ ಭತ್ತ, 8.54 ಹೆಕ್ಟೇರ್ ಹೆಸರು, 217 ಹೆಕ್ಟೇರ್ ಹತ್ತಿ, 11.64 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ 349.76 ಹೆಕ್ಟೇರ್ ಬೆಳೆಗಳು ಹಾನಿಯಾಗಿವೆ
ಶ್ರೀನಿವಾಸ ಚಾಪೇಲ್, ತಹಶೀಲ್ದಾರ್ ವಡಗೇರಾ

ಅಕಾಲಿಕವಾಗಿ ಬಂದ ಮಳೆ ನಮ್ಮ ಕನಸನ್ನೆಲ್ಲಾ ನುಚ್ಚು ನೂರು ಮಾಡಿದೆ. ಮಾಡಿದ ಸಾಲ ಹೇಗೆ ತೀರಿಸಬೇಕು ಎಂಬ ಚಿಂತೆ ಕಾಡುತ್ತಿದೆ
ಚಂದಾಸಾಬ್ ಹುಲಿ, ರೈತ ವಡಗೇರಾ

ನಮ್ಮ ಸಿಬ್ಬಂದಿ ಮತ್ತು ಕೃಷಿ ಇಲಾಖೆಯ ಜಂಟಿ ಸಮೀಕ್ಷೆ ನಂತರ ಕೊಂಕಲ್ ಹೋಬಳಿ ವ್ಯಾಪ್ತಿಯ ಬೆಳೆ ನಾಶದ ಕುರಿತು ವರದಿ ಕಳುಹಿಸಲಾಗಿದೆ
ನೀಲಪ್ರಭಾ ಬಬಲಾದ, ತಹಶೀಲ್ದಾರ್, ಗುರುಮಠಕಲ್

ಬೆಳೆ ಹಾನಿ ಸಮೀಕ್ಷೆ ಪ್ರಗತಿಯಲ್ಲಿದ್ದು ಕೃಷಿ ಇಲಾಖೆ ವರದಿಯನ್ನು ಜಂಟಿ ನಿರ್ದೇಶಕರಿಗೆ, ಕಂದಾಯ ಇಲಾಖೆ ಜಿಲ್ಲಾಧಿಕಾರಿಗೆ ಸಲ್ಲಿಸುತ್ತಾರೆ
ಭೀಮರಾಯ ಹವಾಲ್ದಾರ್, ಎಡಿಎ ಸುರಪುರ

ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ನಾಮದೇವ ವಾಟ್ಕರ್, ಎಂ.ಪಿ.ಚಪೆಟ್ಲಾ, ಭೀಮಶೇನರಾವ ಕುಲಕರ್ಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.