ಬೆಂಗಳೂರು: ರೈಲ್ವೆ ಸಚಿವಾಲಯ ಮತ್ತೊಂದು ದೊಡ್ಡ ನೇಮಕಾತಿಗೆ ಚಾಲನೆ ನೀಡಿದೆ. ಜನವರಿಯಲ್ಲಿ ಪ್ರಾರಂಭಿಸಲಾಗಿದ್ದ 5,696 ಸಹಾಯಕ ಲೊಕೊ ಪೈಲಟ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸದ್ಯ ಚಾಲ್ತಿಯಲ್ಲಿದೆ.

ಇದೀಗ ಎಲ್ಲ ‘ರೈಲ್ವೆ ನೇಮಕಾತಿ ಮಂಡಳಿ‘ಗಳ (RRBs) ವ್ಯಾಪ್ತಿಯಲ್ಲಿ 7,386 ಜೂನಿಯರ್ ಎಂಜಿನಿಯರ್ ಹುದ್ದೆಗಳ ಭರ್ತಿಗೆ ಸಚಿವಾಲಯ ಹಸಿರು ನಿಶಾನೆ ತೋರಿಸಿದ್ದು, ಜುಲೈ 30ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಆಗಸ್ಟ್ 30 ಕಡೆಯ ದಿನ.

ಅರ್ಹ ಪುರುಷ, ಮಹಿಳೆ, ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ₹500, ಎಸ್.ಸಿ/ಎಸ್ಟಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹250 ಶುಲ್ಕವಿದೆ.

18 ರಿಂದ 36 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಲು ಅರ್ಹರು. ಎಸ್.ಸಿ, ಎಸ್ಟಿ, ಒಬಿಸಿ, ಇತರೆ ಅಭ್ಯರ್ಥಿಗಳಿಗೆ ವಯೋಮಾನದಲ್ಲಿ ಸಡಿಲಿಕೆ ಇದೆ.

ಮೂರು ವರ್ಷದ ತಾಂತ್ರಿಕ ಡಿಪ್ಲೋಮಾ ಅಥವಾ ಎಂಜಿನಿಯರಿಂಗ್ ಪದವಿಯನ್ನು ನಿಗದಿತ ವಿಷಯಗಳಲ್ಲಿ (ಅಧಿಸೂಚನೆ ಪರಿಶೀಲಿಸಿ) ಪಡೆದವರು ಅರ್ಜಿ ಸಲ್ಲಿಸಲು ಅರ್ಹ.

ದೇಶದಲ್ಲಿರುವ ಒಟ್ಟು 21 ರೈಲ್ವೆ ನೇಮಕಾತಿ ಮಂಡಳಿಗಳು ಒಟ್ಟಾರೆ ಹುದ್ದೆಗಳಲ್ಲಿನ ತಮ್ಮ ವ್ಯಾಪ್ತಿಯ ಹುದ್ದೆಗಳಿಗೆ ಸಂಬಂಧಿಸಿದಂತೆ ನೇಮಕಾತಿ ಪ್ರಕ್ರಿಯೆ ನಡೆಸುತ್ತವೆ. ಅಭ್ಯರ್ಥಿಗಳು ತಮ್ಮ ಇಷ್ಟದ ಮಂಡಳಿಯ ಅಧಿಕೃತ ವೆಬ್ಸೈಟ್ನಲ್ಲಿ, ಒಬ್ಬ ಅಭ್ಯರ್ಥಿ ಒಂದು ಕಡೆಗೆ ಮತ್ತು ಒಂದು ಅರ್ಜಿ ಮಾತ್ರ ಸಲ್ಲಿಸಬಹುದು. ಇದಕ್ಕಾಗಿ ಎಲ್ಲ ಮಂಡಳಿಗಳಿಗೂ ಅನ್ವಯವಾಗುವಂತೆ ಏಕೀಕೃತ ವಿವರಾಣಾತ್ಮಕ ಅಧಿಸೂಚನೆ ಹೊರಡಿಸಲಾಗಿದೆ.

ನೇಮಕಾತಿ ಪ್ರಕ್ರಿಯೆ ಹೇಗಿದೆ?

CBT–1: ಮೊದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ–1 ನಡೆಯಲಿದೆ. ಇದರಲ್ಲಿ 100 ಪ್ರಶ್ನೆಗಳಿಗೆ 100 ಅಂಕಗಳ 90 ನಿಮಿಷ ಅವಧಿಯ ಒಂದೇ ಪತ್ರಿಕೆ ಇರುತ್ತದೆ. ಇದು ಸಾಮಾನ್ಯ ಜ್ಞಾನದ ಪತ್ರಿಕೆಯಾಗಿರುತ್ತದೆ. ತಲಾ 4 ತಪ್ಪು ಉತ್ತರಗಳಿಗೆ ಒಂದು ಅಂಕ ಕಳೆಯಲಾಗುತ್ತದೆ. ಮುಂದಿನ ಹಂತಕ್ಕೆ ಹೋಗಬೇಕಾದರೆ ಇದರಲ್ಲಿ ಕನಿಷ್ಠ (ಶೇ. 40) ಅಂಕಗಳನ್ನು ಪಡೆಯಲೇಬೇಕು. 1:15 ಅನುಪಾತದಂತೆ ಮುಂದಿನ ಹಂತಕ್ಕೆ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆ ಹೊಂದಿರುತ್ತದೆ.

CBT–2: ಇದರಲ್ಲಿ 150 ಪ್ರಶ್ನೆಗಳಿಗೆ 150 ಅಂಕಗಳ 120 ನಿಮಿಷ ಅವಧಿಯ ಒಂದೇ ಪತ್ರಿಕೆ ಇರುತ್ತದೆ. ಇದು ವಿಷಯಾಧಾರಿತ ಪತ್ರಿಕೆಯಾಗಿರುತ್ತದೆ. ತಲಾ 4 ತಪ್ಪು ಉತ್ತರಗಳಿಗೆ ಒಂದು ಅಂಕ ಕಳೆಯಲಾಗುತ್ತದೆ. ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆ ಹೊಂದಿರುತ್ತದೆ.

3 ಮತ್ತು 4ನೇ ಹಂತ: ಸಿಬಿಟಿ ಎರಡರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮೂರನೇ ಹಂತದಲ್ಲಿ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ. ನಾಲ್ಕನೇ ಹಂತದಲ್ಲಿ ವಿವರವಾದ ವೈದ್ಯಕೀಯ ಪರೀಕ್ಷೆ ಇರಲಿದೆ. ನಂತರ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಲಿದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ರೈಲ್ವೆ ಮಂಡಳಿ ವೆಬ್ಸೈಟ್ಗೆ ಭೇಟಿ ನೀಡಿ ಹುದ್ದೆಗಳ ವರ್ಗೀಕರಣ, ಪರೀಕ್ಷಾ ಪಠ್ಯಕ್ರಮ ಹಾಗೂ ಇತರೆ ಹೆಚ್ಚಿನ ಮಾಹಿತಿಗೆ ವಿವರವಾದ ಅಧಿಸೂಚನೆ ನೋಡಿಕೊಂಡು ಅರ್ಜಿ ಸಲ್ಲಿಸಬೇಕು.

ಮತ್ತಷ್ಟು ಹುದ್ದೆಗಳು

ಜೂನಿಯರ್ ಎಂಜಿನಿಯರ್ ಹುದ್ದೆಗಳ ಜೊತೆಗೆ ಡಿಪೊ ಮಟಿರಿಯಲ್ ಸುಪರಿಟೆಂಡೆಂಟ್ (398) ಕೆಮಿಕಲ್ ಆ್ಯಂಡ್ ಮೆಟಲರ್ಜಿಕಲ್ ಅಸಿಸ್ಟಂಟ್ (150) ಮತ್ತು ಕೆಮಿಕಲ್ ಸೂಪರ್ವೈಸರ್ ಮೆಟಲರ್ಜಿಕಲ್ ಸೂಪರ್ವೈಸರ್ (17) ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಬಿ.ಎಸ್ಸಿ (ರಸಾಯನಶಾಸ್ತ್ರ ಭೌತಶಾಸ್ತ್ರ) ಮತ್ತು ಎಂಜಿನಿಯರಿಂಗ್ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೂ ಜೂನಿಯರ್ ಎಂಜಿನಿಯರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯೇ ಅನ್ವಯವಾಗುತ್ತದೆ.

21 ರೈಲ್ವೆ ನೇಮಕಾತಿ ಮಂಡಳಿಗಳು

ಭಾರತೀಯ ರೈಲ್ವೆಯ 17 ವಲಯಗಳಲ್ಲಿ ಒಟ್ಟು 21 ರೈಲ್ವೆ ನೇಮಕಾತಿ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ಅಜ್ಮೀರ್ ಅಹಮದಾಬಾದ್ ಭೋಪಾಲ್ ಭುವನೇಶ್ವರ ಬಿಲಾಸ್ಪುರ ಚಂಡೀಗಢ ಚೆನ್ನೈ ಗೋರಖಪುರ ಗುವಾಹಟಿ ಜಮ್ಮು ಶ್ರೀನಗರ ಕೋಲ್ಕತ್ತ ಮಾಲ್ಡಾ ಮುಂಬೈ ಮುಜಾಫರ್ಪುರ ಪಟ್ನಾ ಪ್ರಯಾಗರಾಜ್ ರಾಂಚಿ ಸಿಕಂದರಾಬಾದ್ ಸಿಲಿಗುರಿ ತಿರುವನಂತಪುರ.

ಬೆಂಗಳೂರು ಆರ್ಆರ್ಬಿಯಲ್ಲಿ 384 ಜೂನಿಯರ್ ಎಂಜಿನಿಯರ್ ಹುದ್ದೆಗಳಿವೆ.

– ಬೆಂಗಳೂರು ಆರ್ಆರ್ಬಿಯಲ್ಲಿ 384 ಜೂನಿಯರ್ ಎಂಜಿನಿಯರ್ ಹುದ್ದೆಗಳಿವೆ.

– ಬೆಂಗಳೂರು ಆರ್ಆರ್ಬಿ ವೆಬ್ಸೈಟ್ www.rrbbnc.gov.in

–ಒಟ್ಟು ನಾಲ್ಕು ಹಂತಗಳಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
.ITBPಯಲ್ಲಿ ಹೆಡ್ ಕಾನ್ಸ್ಟೆಬಲ್, ಕಾನ್ಸ್ಟೆಬಲ್ 128 ಹುದ್ದೆಗಳು: ವಿವರ ಇಲ್ಲಿದೆ.Jobs: 44,228 ಗ್ರಾಮೀಣ ಅಂಚೆ ಸೇವಕ ಹುದ್ದೆಗಳು– ನೇಮಕಾತಿ ವಿಧಾನ ಹೇಗಿದೆ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.