ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಬಿಒಐ) ಪ್ರೊಬೇಷನರಿ ಆಫೀಸರ‍್ಸ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕುರಿತು ಕಳೆದ ಮೂರು ವಾರಗಳಿಂದ ವಿವರವಾದ ಮಾಹಿತಿ ನೀಡಲಾಗುತ್ತಿದೆ.

ಈಗ ಬ್ಯಾಂಕ್ ನೇಮಕಾತಿಗಾಗಿ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆ ಮಾ. 19ಕ್ಕೆ ನಿಗದಿಯಾಗಿದೆ. ಈ ಸಂಚಿಕೆಯಲ್ಲಿ ಪರೀಕ್ಷೆ ಪಠ್ಯಕ್ರಮಗಳ ಕುರಿತು ಮಾಹಿತಿ ನೀಡಲಾಗಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಿರುವವರು, ಪರೀಕ್ಷಾ ‘ಕರೆ ಪತ್ರ’ (Call Letter)ವನ್ನು ಬ್ಯಾಂಕ್ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪರೀಕ್ಷೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಸೂಚಿಸಲಾಗಿದೆ.

ಪರೀಕ್ಷೆ ತಯಾರಿ ಹೀಗಿರಲಿ

ಬಿಒಐ ಪ್ರೊಬೇಷನರಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿ ಗಳು ತಿಳಿದಿರಬೇಕಾದ ಪ್ರಮುಖ ಅಂಶಗಳಲ್ಲಿ ಪಠ್ಯಕ್ರಮವೂ ಒಂದು. ಇದು ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ಕೇಳಲಾಗುವ ವಿಷಯಗಳ ಬಗ್ಗೆ ಒಂದು ಸ್ಪಷ್ಟ ಕಲ್ಪನೆಯನ್ನು ನೀಡುತ್ತದೆ.

ಈ ಹಿಂದಿನ ಮುಖ್ಯ ಪರೀಕ್ಷೆಗಳನ್ನು ಗಮನಿಸಿ ಈ ಬ್ಯಾಂಕ್ ಪರೀಕ್ಷೆ ಹೇಗಿರಬಹುದು ಎನ್ನುವುದರ ಸ್ಥೂಲ ಪರಿಚಯವನ್ನು ಇಲ್ಲಿ ನೀಡಲಾಗಿದೆ. ಈ ಪರೀಕ್ಷೆಯಲ್ಲಿ ಪ್ರಾಥಮಿಕ ಹಂತದ (ಪ್ರಿಲಿಮ್ಸ್) ಪರೀಕ್ಷೆ ಇಲ್ಲದೇ ನೇರವಾಗಿ ಮುಖ್ಯ ಪರೀಕ್ಷೆ ಎದುರಿಸಬೇಕು. ಹಾಗಾಗಿ, ಎರಡು ಪರೀಕ್ಷೆಗಳಿಗೆ ಮಾಡಬೇಕಾದ ತಯಾರಿಯನ್ನು ಇಲ್ಲಿ ಒಂದೇ ಪರೀಕ್ಷೆಗೆ ಮಾಡಿಕೊಳ್ಳಬೇಕು. ಹೀಗಾಗಿ ವಿಷಯವಾರು ಏನೇನು ಅಧ್ಯಾಯಗಳಿರಬಹುದು ಅನ್ನುವ ಕುರಿತಾದ ಕಣ್ಣೋಟ ಇಲ್ಲಿದೆ.

ಸಾಮಾನ್ಯವಾದ ಪಠ್ಯಕ್ರಮಗಳು:

1. ಇಂಗ್ಲಿಷ್ ಭಾಷೆ (Egnlish Language paper): ಈ ಪತ್ರಿಕೆಗೆ ಸಂಬಂಧಿಸಿದಂತೆ ರೀಡಿಂಗ್ ಕಾಂಪ್ರಹೆನ್ಷನ್, ಪದ ವಿನಿಮಯ, ಪದಗಳ ಮರುಜೋಡಣೆ, ಇಡಿಯಮ್ಸ್ ಮತ್ತು ಫ್ರೇಸಸ್, ಮತ್ತು ದೋಷ ಪತ್ತೆ, ಪ್ಯಾರಾ ಜಂಬಲ್, ಪಾರಿಭಾಷಿಕ ಪದಗಳನ್ನು ಆಧರಿಸಿದ ಪ್ರಶ್ನೆಗಳು.. ಇರುತ್ತವೆ.

2. ರೀಸನಿಂಗ್(Reasoning): ಈ ಪತ್ರಿಕೆಯ ಪರೀಕ್ಷೆಗೆ ಸಿದ್ಧತೆ ನಡೆಸುವವರು ಕೋಡಿಂಗ್, ಡೀಕೋಡಿಂಗ್, ಇನ್‌ಈಕ್ವಾಲಿಟಿಸ್, ಆಲ್ಫಾ–ನ್ಯೂಮರಿಕ್–ಸಿಂಬಲ್ ಸೀರಿಸ್, ಡೇಟಾ ಸಮರ್ಪಕತೆ, ಪ್ಯಾಸೇಜ್ ಇನ್‌ಶೂರೆನ್ಸ್‌ನಂತಹ ವಿಷಯಗಳ ಮೇಲೆ ಗಮನ ಹರಿಸಬೇಕು.

3. ಕಂಪ್ಯೂಟರ್ ಆಪ್ಟಿಟ್ಯೂಡ್: ಈ ಪತ್ರಿಕೆಯಲ್ಲಿ ಕಂಪ್ಯೂಟರ್ ಇತಿಹಾಸ, ನೆಟ್‌ವರ್ಕಿಂಗ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್, ಕಂಪ್ಯೂಟರ್ ಪ್ರಾಥಮಿಕ ಜ್ಞಾನ, ಕಂಪ್ಯೂಟರ್‌ಗಳ ಭವಿಷ್ಯ (Features of Computers), ಭದ್ರತಾ ಪರಿಕರಗಳು, ಅಂತರ್ಜಾಲದ ಬಗ್ಗೆ ಪ್ರಾಥಮಿಕ ಜ್ಞಾನ, ಕಂಪ್ಯೂಟರ್ ಲಾಂಗ್ವೇಜಸ್, ಡೇಟಾಬೇಸ್, ಇನ್‌ಪುಟ್/ಔಟ್‌ಪುಟ್ ಡಿವೈಸ್, ಎಂಎಸ್ ಆಫೀಸ್ ಪ್ಯಾಕೇಜ್ ಕುರಿತು ಪಠ್ಯಗಳಿರುತ್ತವೆ. ಇವುಗಳ ಬಗ್ಗೆ ಗಮನಹರಿಸಬೇಕು.

4. ಜನರಲ್ ಎಕಾನಮಿ/ ಬ್ಯಾಂಕಿಂಗ್ ಅವೇರ್‌ನೆಸ್: ಇದು ಪ್ರಮುಖವಾದ ವಿಷಯವಾಗಿದೆ. ಇದರಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವ್ಯಹಾರಗಳು, ಪ್ರಮಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆ ಮತ್ತು ಅವರ ಪ್ರಧಾನ ಕಚೇರಿ, ಥೀಮ್ ಆಧಾರಿತ ಪ್ರಮುಖ ದಿನಗಳು, ಬ್ಯಾಂಕಿಂಗ್ ಸುಧಾರಣೆಗಳು, ಬ್ಯಾಂಕಿಂಗ್‌ಗೆ ಸಂಬಂಧಿಸಿದ ಇತ್ತೀಚೆಗಿನ ಕಾಯ್ದೆಗಳು, ಆರ್‌ಬಿಐ ಸುತ್ತೋಲೆಗಳು, ಆದ್ಯತಾ ವಲಯ(ಪಿಎಸ್‌ಎಲ್), ಸೆಬಿ, ನಬಾರ್ಡ್, ಆರ್‌ಬಿಐನಂತಹ ನಿಯಂತ್ರಕ ಸಂಸ್ಥೆಗಳ ಕುರಿತು, ಬಾಸೆಲ್ ನಿಯಮಗಳೂ, ಇತ್ತೀಚೆಗೆ ನಡೆದಿರುವ ಬ್ಯಾಂಕ್‌ಗಳ ವಿಲೀನ ಮತ್ತು ಒಡಂಬಡಿಕೆಗಳು, ಪ್ರಮುಖ ಸಂಸ್ಥೆಗಳು, ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು, ಸರ್ಫೆಸಿ ಕಾಯ್ದೆ(SARFAESI Act.)– ಗಳ ಬಗ್ಗೆ ಪಠ್ಯಗಳಿರುತ್ತವೆ. ಈ ಕುರಿತು ಅಧ್ಯಯನ ಮಾಡಬಹುದು.

5. ದತ್ತಾಂಶ ವಿಶ್ಲೇಷಣೆ ಮತ್ತು ವ್ಯಾಖ್ಯಾನ(ಡೇಟಾ ಅನಾಲಿಸಿಸ್ ಮತ್ತುಇಂಟರ್‌ಪ್ರಿಟೇಷನ್): ಈ ಪತ್ರಿಕೆಯಲ್ಲಿ ಪ್ರಮುಖವಾಗಿ ಲೈನ್ ಗ್ರಾಫ್, ಪೈ ಗ್ರಾಫ್, ಬಾರ್ ಗ್ರಾಫ್, ಕ್ರಮ ಪಲ್ಲಟನೆ ಮತ್ತು ಸಂಯೋಜನೆ(Permutation and Combination) ಡೇಟಾ ಸಫಿಷಿಯನ್ಸಿ, ಪ್ರಾಬಬಲಿಟಿ(ಸಂಭವನೀಯತೆ) - ಇಂಥ ವಿಷಯಗಳಿರುತ್ತವೆ. ಇವುಗಳ ಬಗ್ಗೆ ಗಮನಿಸಬಹುದು.

ಇನ್ನೊಂದಿಷ್ಟು ಸಲಹೆಗಳು

ಪರೀಕ್ಷೆಯ ಸ್ಪಷ್ಟ ತಿಳಿವಳಿಕೆಗಾಗಿ, ಇತ್ತೀಚಿನ ಬ್ಯಾಂಕ್ ಆಫ್ ಇಂಡಿಯಾದ ಪ್ರೊಬೇಷನರಿ ಆಫೀಸರ‍್ಸ್ ನೇಮಕಾತಿ ಪರೀಕ್ಷೆಗಾಗಿ ನಿಗದಿಪಡಿಸಿರುವ ಸಿಲಬಸ್ ಗಮನಿಸಬೇಕು. ಪರೀಕ್ಷಾ ಮಾದರಿಯೊಂದಿಗೆ ಲಭ್ಯ ವಿರುವ ಆನ್‌ಲೈನ್ ಮಾಕ್ ಟೆಸ್ಟ್(ಅಣಕು ಪರೀಕ್ಷೆ) ಎದುರಿಸಿ ಹಾಗೂ ವೇಗವಾಗಿ ಹೆಚ್ಚೆಚ್ಚು ಪ್ರಶ್ನೆಗಳನ್ನು ಕಡಿಮೆ ಸಮಯದಲ್ಲಿ ಉತ್ತರಿಸಲು ಅಭ್ಯಾಸ ಮಾಡಿ.

ಹಿಂದಿನ ಬ್ಯಾಂಕಿಂಗ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಮತ್ತು ಅಭ್ಯಾಸ ಪರೀಕ್ಷೆಗಳು ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ತಿಳಿಯಲು ಮತ್ತು ನಿಮ್ಮ ಒಟ್ಟಾರೆ ಕಾರ್ಯಕ್ಷಮತೆ ಸುಧಾರಿಸಲು ಸಹಾಯ ಮಾಡುತ್ತದೆ.
ಅಭ್ಯರ್ಥಿಗಳು ಪ್ರಚಲಿತ ವಿದ್ಯಮಾನಗಳು ಮತ್ತು ಹಣಕಾಸಿನ ವಿಷಯದಲ್ಲಿ ಸಾಮಾನ್ಯ ಜ್ಞಾನದ ಬಗ್ಗೆ ನಿತ್ಯ ಅಪ್‌ಡೇಟ್ ಆಗುತ್ತಿರಬೇಕು.

(ಮುಗಿಯಿತು)

(ಲೇಖಕರು: ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಮಡಿಕೇರಿ.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.