ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 152 ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಮಂಡಳಿಗೆ ಮಂಜೂರಾಗಿರುವ 253 ಹುದ್ದೆಗಳ ಪೈಕಿ 152 ಹುದ್ದೆಗಳು ತಾಂತ್ರಿಕ, ಪ್ರಯೋಗಶಾಲೆ ಮತ್ತು ಆಡಳಿತ ವಿಭಾಗಗಳಲ್ಲಿ ಖಾಲಿ ಇವೆ. ರಾಜ್ಯದಲ್ಲಿ 146 ವೃಂದ ಮತ್ತು ಸ್ಥಳೀಯ ವೃಂದದ 6 ಸೇರಿ 152 ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇರ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ಸರ್ಕಾರ ಈಗಾಗಲೇ ಅನುಮತಿಸಿದೆ ಎಂದರು.

153 ಖಾಲಿ ಹುದ್ದೆಗಳ ಭರ್ತಿಗೆ 2010ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಕಾರಣಾಂತರದಿಂದ ಹಲವು ಹುದ್ದೆಗಳು ಭರ್ತಿ ಆಗಿಲ್ಲ. ಈ ಹುದ್ದೆಗಳೂ ಸೇರಿದಂತೆ ಪ್ರಸ್ತುತ ಮಂಡಳಿಯಲ್ಲಿ ರಾಜ್ಯವ್ಯಾಪಿ ಖಾಲಿಯಿರುವ ಹುದ್ದೆಗಳ ಬಹುತೇಕ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

23 ಹುದ್ದೆಗಳನ್ನು ಬ್ಯಾಕ್‌ಲಾಗ್ ಎಂದು ಪರಿಗಣಿಸಿದಲ್ಲಿ, 152 ಹುದ್ದೆಗಳೊಂದಿಗೆ 23 ಹುದ್ದೆಗಳನ್ನೂ ಸೇರಿಸಿ ಒಟ್ಟು 175 ಹುದ್ದೆಗಳನ್ನು ಭರ್ತಿ ಮಾಡಿದರೆ ಶೇಕಡ 69ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿದಂತಾಗುತ್ತದೆ ಎಂದೂ ಸಚಿವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.