ಭಾರತದಲ್ಲಿನ ಸಾರ್ವಜನಿಕ ಕಲಾ ಸ್ಥಳಗಳು ಜನಪದ ಕಲೆ ಮತ್ತು ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ.

ಇವು ಸಾಂಪ್ರದಾಯಿಕ ಮತ್ತು ಸಮಕಾಲೀನ ಕಲಾ ಪ್ರಕಾರಗಳನ್ನು ಪ್ರದರ್ಶಿಸುತ್ತಾ ಜನರನ್ನು ಸೆಳೆಯುತ್ತವೆ. ಹೀಗೆ ಸಾರ್ವಜನಿಕ ಸ್ಥಳಗಳನ್ನು ಕಲಾತ್ಮಕವಾಗಿ ರೂಪಿಸುವುದು ಪ್ರಾಜೆಕ್ಟ್ ಪರಿಯ ಉದ್ದೇಶ. ದೆಹಲಿಯಲ್ಲಿ ಈ ಯೋಜನೆಯ ಪ್ರಥಮ ಚಟುವಟಿಕೆಗಳು ಗರಿಗೆದರಿವೆ.

ಉದ್ದೇಶಗಳೇನು?

ನಗರಗಳ ವಿಶಿಷ್ಟತೆ ಮತ್ತು ಸೌಂದರ್ಯದ ಮೌಲ್ಯವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸಾರ್ವಜನಿಕ ಸ್ಥಳಗಳ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೇ ಈ ಸುಂದರ ಪರಿಸರಕ್ಕೆ ಸೇರಿದವರು ಎಂಬ ಹೆಮ್ಮೆಯ ಭಾವನೆಯನ್ನು ಜನರಲ್ಲಿ ಮೂಡಿಸುತ್ತದೆ.

ಸಾರ್ವಜನಿಕ ಕಲೆಯು ಪ್ರವಾಸದ ಅನುಭವವನ್ನು ಉತ್ಕೃಷ್ಟಗೊಳಿಸುವುದಲ್ಲದೇ ಸಂದರ್ಶಕರು ಮತ್ತು ದಾರಿಹೋಕರಲ್ಲಿ ಶಾಶ್ವತ ನೆನಪುಗಳನ್ನು ಮೂಡಿಸುತ್ತದೆ. ಜತೆಗೆ ಚಿಂತನೆಗೆ ಹಚ್ಚುವ ಈ ಸ್ಥಳಗಳು ಸಂಸ್ಕೃತಿ ಮತ್ತು ಸಮಾಜದ ಅವಿಭಾಜ್ಯ ಅಂಗವಾಗಿವೆ.

ಪ್ರಾಜೆಕ್ಟ್ ಪರಿ

ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ವಿಶ್ವ ಪರಂಪರೆ ಸಮಿತಿ ಸಭೆಯ 46ನೇ ಅಧಿವೇಶನದ ಸಂದರ್ಭದಲ್ಲಿ, ದೆಹಲಿಯನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು ಪ್ರಾಜೆಕ್ಟ್
PARI (ಭಾರತದ ಸಾರ್ವಜನಿಕ ಕಲೆ) ಉಪಕ್ರಮ
ಅನ್ನು ಪ್ರಾರಂಭಿಸಿತು.

ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಇರುವ ಸ್ವಾಯತ್ತ ಸಂಸ್ಥೆ ಲಲಿತ ಕಲಾ ಅಕಾಡೆಮಿಯು ದೇಶದಾದ್ಯಂತ 150ಕ್ಕೂ ಹೆಚ್ಚು ದೃಶ್ಯ ಕಲಾವಿದರನ್ನು ಆಹ್ವಾನಿಸಿದೆ.

ಪ್ರಾಜೆಕ್ಟ್ PARI ದೆಹಲಿ ನಗರದ ಸೌಂದರ್ಯ ಮತ್ತು ಸಾಂಸ್ಕೃತಿಕ ದೃಷ್ಟಿಕೋನವನ್ನು ಉನ್ನತೀಕರಿಸುವ ಗುರಿಯನ್ನು ಹೊಂದಿದೆ.

ಅನುಷ್ಠಾನಗೊಳಿಸುವ ಏಜೆನ್ಸಿಗಳು

ಲಲಿತ್ ಕಲಾ ಅಕಾಡೆಮಿ ಮತ್ತು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಆಧುನಿಕ ವಿಷಯಗಳು ಮತ್ತು ತಂತ್ರಗಳನ್ನು ಅಳವಡಿಸಿಕೊಂಡು ಭಾರತದ ಕಲಾತ್ಮಕ ಪರಂಪರೆಯಿಂದ (ಲೋಕ ಕಲೆ/ಜನಪದ ಕಲೆ–ಲೋಕ ಸಂಸ್ಕೃತಿ/ಜನಪದ ಸಂಸ್ಕೃತಿ) ಪ್ರೇರಣೆಗೊಂಡ ಕಲೆಯನ್ನು ಪ್ರಸ್ತುತಪಡಿಸುವ ಗುರಿಯನ್ನು ಹೊಂದಿದೆ.

ಈ ಉಪಕ್ರಮವು ಭಾರತೀಯ ಸಮಾಜದಲ್ಲಿ ಕಲೆಯ ಸ್ವಾಭಾವಿಕ ಮೌಲ್ಯವನ್ನು ಎತ್ತಿ ತೋರಿಸುತ್ತದೆ. ಸೃಜನಶೀಲತೆ ಮತ್ತು ಕಲಾತ್ಮಕ ಅಭಿವ್ಯಕ್ತಿಗೆ ರಾಷ್ಟ್ರದ ನಿರಂತರ ಬದ್ಧತೆಯನ್ನು ಪ್ರದರ್ಶಿಸುತ್ತದೆ.

ಈ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳನ್ನು ಸುಂದರಗೊಳಿಸಲು ಕಲಾವಿದರು ರಾಷ್ಟ್ರದ ರಾಜಧಾನಿಯಲ್ಲಿ ವಿವಿಧ ಕಲಾತ್ಮಕ ಪ್ರಾಮುಖ್ಯವನ್ನು ಹೊಂದಿರುವ ತಾಣಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ನಗರ ಪ್ರದೇಶಗಳಲ್ಲಿನ ಸಾರ್ವಜನಿಕ ಕಲೆಯು ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಕಲೆಯನ್ನು ಮತ್ತಷ್ಟು ಪ್ರಜಾಪ್ರಭುತ್ವಗೊಳಿಸುವ ಮೂಲಕ, ನಗರದ ಗೋಡೆಗಳು ಸರ್ವರೂ ಪ್ರವೇಶಿಸಬಹುದಾದ ಕಲಾಗ್ಯಾಲರಿಗಳಾಗಿ ರೂಪಾಂತರಗೊಳ್ಳುತ್ತವೆ.

ಈ ವಿಧಾನವು ಕಲಾತ್ಮಕ ಅನುಭವಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡುತ್ತದೆ. ಈ ಮೂಲಕ ಸಾಂಸ್ಕೃತಿಕ ಬಿಂದುಗಳನ್ನು ಒಗ್ಗೂಡಿಸಿ, ಸಾಮಾಜಿಕ ಒಗ್ಗಟ್ಟನ್ನು ಹೆಚ್ಚಿಸುತ್ತದೆ.

ಈ ಯೋಜನೆಯು ರಾಷ್ಟ್ರದ ಕ್ರಿಯಾತ್ಮಕ ಸಾಂಸ್ಕೃತಿಕ ರಚನೆಗೆ ತನ್ನದೇ ಆದ ಕೊಡುಗೆ ನೀಡುತ್ತದೆ.

ವೈವಿಧ್ಯಮಯ ಕಲಾ ಪ್ರಕಾರಗಳು

ಈ ಸುಂದರೀಕರಣ ಯೋಜನೆಯಡಿ ಸಾಂಪ್ರದಾಯಿಕ ಕಲಾ ಪ್ರಕಾರಗಳು, ಶಿಲ್ಪಗಳು, ಭಿತ್ತಿಚಿತ್ರಗಳನ್ನು ರಚಿಸಲಾಗುತ್ತದೆ. ದೇಶದಾದ್ಯಂತ 150ಕ್ಕೂ ಹೆಚ್ಚು ದೃಶ್ಯ ಕಲಾವಿದರು ಗೋಡೆ ವರ್ಣಚಿತ್ರಗಳು, ಭಿತ್ತಿಚಿತ್ರಗಳು, ಶಿಲ್ಪಗಳು ಮತ್ತು ಮೂರ್ತಿಗಳು ಹಾಗೂ ಇನ್ನಿತರ ರಚನೆಗಳನ್ನು ನಿರ್ಮಿಸಲು ಒಗ್ಗೂಡಿದ್ದಾರೆ.

ಸೃಜನಶೀಲ ಕ್ಯಾನ್ವಾಸ್‌ನಲ್ಲಿ ಫಡ್ ಪೇಂಟಿಂಗ್‌ಗಳು (ರಾಜಸ್ಥಾನ), ತಂಗ್ಕಾ ಪೇಂಟಿಂಗ್ (ಸಿಕ್ಕಿಂ/ಲಡಾಖ್), ಮಿನಿಯೇಚರ್ ಪೇಂಟಿಂಗ್ (ಹಿಮಾಚಲ ಪ್ರದೇಶ), ಗೋಂಡಾ ಆರ್ಟ್ (ಮಧ್ಯಪ್ರದೇಶ), ತಂಜಾವೂರ್ ಪೇಂಟಿಂಗ್‌ಗಳು (ತಮಿಳುನಾಡು), ಕಲಂಕರಿ (ಆಂಧ್ರ ಪ್ರದೇಶ), ಅಲ್ಪೋನಾ ಕಲೆ( ಪಶ್ಚಿಮ ಬಂಗಾಳ)ಗಳಿಂದ ಸ್ಫೂರ್ತಿ ಪಡೆದ ಕಲಾಕೃತಿಗಳು ಸೇರಿವೆ. ಜತೆಗೆ ಚೆರಿಯಾಲ್ ಚಿತ್ರಕಲೆ (ತೆಲಂಗಾಣ), ಪಿಚ್ವಾಯಿ ಚಿತ್ರಕಲೆ (ರಾಜಸ್ಥಾನ), ಲಾಂಜಿಯಾ ಸೌರಾ (ಒಡಿಶಾ), ಪಟ್ಟಚಿತ್ರ (ಪಶ್ಚಿಮ ಬಂಗಾಳ), ಬನಿ ಥಾನಿ ಚಿತ್ರಕಲೆ (ರಾಜಸ್ಥಾನ), ವಾರ್ಲಿ (ಮಹಾರಾಷ್ಟ್ರ), ಪಿಥೋರಾ ಕಲೆ (ಗುಜರಾತ್), ಐಪಾನ್ (ಉತ್ತರಾಖಂಡ), ಕೇರಳದ ಭಿತ್ತಿಚಿತ್ರಗಳು (ಕೇರಳ), ಮತ್ತು ಅಲ್ಪನಾ (ತ್ರಿಪುರ) ಕಲಾಪ್ರಕಾರಗಳು ಇದರ ಭಾಗವಾಗಲಿವೆ.

ಶಿಲ್ಪಗಳು ಮತ್ತು ಥೀಮ್ ಗಳು

ಪ್ರಾಜೆಕ್ಟ್ PARIಗಾಗಿ ಪ್ರಸ್ತಾಪಿಸಲಾದ ಶಿಲ್ಪಗಳು ನಿಸರ್ಗದ ಅಪೂರ್ವ ಸೃಷ್ಟಿಗಳು, ನಾಟ್ಯಶಾಸ್ತ್ರದಿಂದ ಪ್ರೇರಿತವಾದ ವಿಚಾರಗಳು, ಭಾರತದ ಆಟಿಕೆಗಳು, ಭಾರತದ ಆತಿಥ್ಯ ಸಂಸ್ಕೃತಿ, ಪುರಾತನ ಜ್ಞಾನ, ನಾಡ್ (ಪ್ರಾಚೀನ ಧ್ವನಿ), ಜೀವನದ ಸಾಮರಸ್ಯ ಮತ್ತು ಕಲ್ಪತರು (ದೈವಿಕ ವೃಕ್ಷ) ಹೀಗೆ ವ್ಯಾಪಕ ವಿಷಯವನ್ನು ಒಳಗೊಂಡಿದೆ.

ಕೆಲವು ಕಲಾಕೃತಿಗಳು ಮತ್ತು ಶಿಲ್ಪಗಳು ವಿಶ್ವ ಪರಂಪರೆಯ ತಾಣಗಳಾದ ಭೀಮೇಟ್ಕಾ ಮತ್ತು ಭಾರತದ ಏಳು ನೈಸರ್ಗಿಕ ವಿಶ್ವ ಪರಂಪರೆಯ ತಾಣಗಳಿಂದ ಸ್ಫೂರ್ತಿ ಪಡೆದಿವೆ. ಇದು 46 ನೇ ವಿಶ್ವ ಪರಂಪರೆಯ ಸಮಿತಿ ಸಭೆಯ ಉದ್ದೇಶಗಳಿಗೆ ಸೂಕ್ತ ಹೊಂದಿಕೆಯಾಗುತ್ತವೆ.

ನಾರಿಶಕ್ತಿಯ ಒಳಗೊಳ್ಳುವಿಕೆ

ಮಹಿಳಾ ಕಲಾವಿದರು ಪ್ರಾಜೆಕ್ಟ್ PARIಯ ಅವಿಭಾಜ್ಯ ಅಂಗವಾಗಿದ್ದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಇದು ಕಲಾಭಿವ್ಯಕ್ತಿಯಲ್ಲಿ ಸ್ತ್ರೀ ಪ್ರಾತಿನಿಧ್ಯದ ಪ್ರಾಮುಖ್ಯವನ್ನು ಸೂಚಿಸುತ್ತದೆ.

ಲಲಿತ ಕಲಾ ಅಕಾಡೆಮಿ

ಲಲಿತ್ ಕಲಾ ಅಕಾಡೆಮಿ (ನ್ಯಾಷನಲ್ ಅಕಾಡೆಮಿ ಆಫ್ ಆರ್ಟ್), 5ನೇ ಆಗಸ್ಟ್ 1954ರಂದು ಶಿಕ್ಷಣ ಸಚಿವರಾಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರಿಂದ ಉದ್ಘಾಟನೆಗೊಂಡಿತು.

ಸಾಂವಿಧಾನಿಕ ಉದ್ದೇಶಗಳು : ಸಂಸ್ಥೆಯು ಅದರ ಜನರಲ್ ಕೌನ್ಸಿಲ್, ಕಾರ್ಯಕಾರಿ ಮಂಡಳಿ ಮತ್ತು ವಿವಿಧ ಸಮಿತಿಗಳ ಮೂಲಕ ಕಾರ್ಯನಿರ್ವಹಿಸುತ್ತದೆ.

ಭಾರತ ಸರ್ಕಾರವು ಸ್ಥಾಪಿಸಿದ ಮೂರು ಅಕಾಡೆಮಿಗಳಲ್ಲಿ ಕೊನೆಯದಾಗಿರುವ ಲಲಿತ ಕಲಾ ಅಕಾಡೆಮಿಯು ದೃಶ್ಯ ಕಲೆಗಳ ಕ್ಷೇತ್ರದಲ್ಲಿನ ಚಟುವಟಿಕೆಗಳ ಮೇಲೆ ಪ್ರತ್ಯೇಕವಾಗಿ ಗಮನಹರಿಸುತ್ತದೆ. ತಮ್ಮ ಉದ್ಘಾಟನಾ ಭಾಷಣದಲ್ಲಿ, ಕಲಾಂ ಆಜಾದ್ ಅವರು ಸಮಕಾಲೀನ ಕಲಾವಿದರ ಸೃಜನಶೀಲತೆಯನ್ನು ಪೋಷಿಸುತ್ತಲೇ ಭಾರತದ ಶ್ರೀಮಂತ ಕಲಾತ್ಮಕ ಸಂಪ್ರದಾಯಗಳನ್ನು ಸಂರಕ್ಷಿಸುವಲ್ಲಿ ಅಕಾಡೆಮಿಯ ಪಾತ್ರವನ್ನು ಒತ್ತಿ ಹೇಳಿದ್ದರು.

ಅಕಾಡೆಮಿಯು ಭಾರತದಾದ್ಯಂತ ಸಮಕಾಲೀನ, ಆಧುನಿಕ, ಜಾನಪದ ಮತ್ತು ಬುಡಕಟ್ಟು ಕಲೆಗಳ ವೈವಿಧ್ಯ ಮತ್ತು ವಿಕಸನದ ಬಗ್ಗೆಗಿನ ಹಲವು ಹೆಜ್ಜೆಗಳ ದಾಖಲೆಗಳನ್ನು ಸಂಗ್ರಹಿಸಿದೆ. ನವದೆಹಲಿಯಲ್ಲಿರುವ (ಗರ್ಹಿ) ತನ್ನ ಪ್ರಧಾನ ಕಚೇರಿಯ ಜತೆಗೆ, ಅಕಾಡೆಮಿಯು ಚೆನ್ನೈ, ಲಖನೌ, ಕೋಲ್ಕತ್ತಾ, ಭುವನೇಶ್ವರದಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಮತ್ತು ಶಿಮ್ಲಾ, ಅಹಮದಾಬಾದ್, ಅಗರ್ತಲಾ ಮತ್ತು ಪಾಟ್ನಾದಲ್ಲಿ ಉಪ-ಕೇಂದ್ರಗಳನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.