ಭಾಗ 5

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಶೇಷ ಮೀಸಲು ಸಬ್-ಇನ್‌ಸ್ಪೆಕ್ಟರ್ (ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ) ಹುದ್ದೆಗಳು ಹಾಗೂ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು ಶೀಘ್ರದಲ್ಲೇ ನಡೆಯಲಿವೆ. ಈ ಎರಡೂ ಪರೀಕ್ಷೆಗಳಲ್ಲಿರುವ ‘ಸಾಮಾನ್ಯ ಜ್ಞಾನ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

1) ಇತ್ತೀಚಿಗೆ ರಾಷ್ಟ್ರೀಯ ‘ವೀರ್ ಬಾಲ ದಿವಸ್’ ಎಂದು ಯಾವ ದಿನವನ್ನು ಆಚರಿಸಲು ನಿರ್ಧರಿಸಿದ್ದಾಗಿ ಪ್ರಧಾನಮಂತ್ರಿ ಘೋಷಿಸಿದರು?

ಎ) ಡಿಸೆಂಬರ್ 31

ಬಿ) ಜನವರಿ 1

ಸಿ) ಡಿಸೆಂಬರ್ 26

ಡಿ) ಮಾರ್ಚ್ 6

ಉತ್ತರ: ಸಿ

2) ₹1.5 ಕೋಟಿ ವೆಚ್ಚದಲ್ಲಿ 5 ಎಕರೆ ಪ್ರದೇಶದಲ್ಲಿ ಬೆಳೆ ತಳಿ ಶುದ್ಧತಾ ಪರೀಕ್ಷಾ ಕೇಂದ್ರ ಸ್ಥಾಪಿಸಲು ನಿಶ್ಚಯಿಸಲಾಗಿದೆ. ಹಾಗಾದರೆ ಅದು ಎಲ್ಲಿದೆ?

ಎ) ವಿಜಯಪುರದ ಸಿಂದಗಿ ತಾಲೂಕಿನ ಆಲಮೇಲ

ಬಿ) ಹಾಸನದ ಚನ್ನರಾಯಪಟ್ಟಣದ ದೊಡ್ಡಹಳ್ಳಿ

ಸಿ) ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಿದರಗೆರೆ

ಡಿ) ಧಾರವಾಡ ಜಿಲ್ಲೆಯಲ್ಲಿರುವ ಧಾರವಾಡ

ಉತ್ತರ: ಎ

3) ಮಗಾವ್ ಎಂಬ ಹೆಸರಿನ ಇಲಿಗೆ ತರಬೇತಿ ನೀಡಿ ನೆಲಬಾಂಬ್ ಪತ್ತೆ ಹಚ್ಚಲು ಬಳಸಲಾಗಿತ್ತು. ಹಾಗಾದರೆ ಈ ಪ್ರಾಣಿಯು(ಇಲಿಯು) ಯಾವ ದೇಶಲ್ಲಿ ಅತಿ ಹೆಚ್ಚು ಸೇವೆ ಒದಗಿಸಿತ್ತು?

ಎ) ಕಾಂಬೋಡಿಯಾ

ಬಿ) ತಾಂಜಿನಿಯಾ

ಸಿ) ಇಂಗ್ಲೆಂಡ್

ಡಿ) ನೇಪಾಳ

ಉತ್ತರ: ಎ

4) ಇಸ್ರೊದ ಮುಖ್ಯಸ್ಥರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ?

ಎ) ಎಸ್ ಸೋಮನಾಥ್

ಬಿ) ಟೆಸ್ಸಿ ಥಾಮಸ್

ಸಿ) ಜೈಯ ಶಂಕರ್ ಸ್ವಾಮಿ

ಡಿ) ಜೋಜೋ ಮೆಥ್ಯೋ

ಉತ್ತರ: ಎ

5) ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕವಿಜೇತ ಬಾಕ್ಸರ್ ಲವ್ಲಿನಾ ಬರ‍್ಗೊಹೈನ್ ಅವರನ್ನು ಯಾವ ರಾಜ್ಯದಲ್ಲಿ ಡಿಎಸ್‌ಪಿಯಾಗಿ ನೇಮಕ ಮಾಡಲಾಗಿದೆ?

ಎ) ಅಸ್ಸಾಂ

ಬಿ) ಮಣಿಪುರ

ಸಿ) ಉತ್ತರ ಪ್ರದೇಶ

ಡಿ) ಮಹಾರಾಷ್ಟ್ರ

ಉತ್ತರ:ಎ

6) ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಲಾಗಿದೆ?

ಎ) ಜಿ. ಆರ್. ಹೆಗಡೆ ಮಶಿಗದ್ದೆ

ಬಿ) ಎಂ. ಆರ್. ಹೆಗಡೆ ಇಟಗಿ

ಸಿ) ಡಾ. ಜಿ.ಎಲ್. ಹೆಗಡೆ ಮಣಕಿ

ಡಿ) ಸಂಧ್ಯಾರಾವ್ ಸಿದ್ದಾಪುರ

ಉತ್ತರ:ಸಿ

7) ಇತ್ತೀಚಿಗೆ ಬಿಳಿ ಮೊಸಳೆ ಮರಿಯೊಂದು ಪತ್ತೆಯಾಯಿತು. ಅಪರೂಪದ ಈ ಪ್ರಾಣಿಗೆ ಶ್ವೇತ ಎಂದು ಹೆಸರಿಸಲಾಗಿದೆ. ಹಾಗಾದರೆ ಅದು ಎಲ್ಲಿ ಪತ್ತೆಯಾಯಿತು?

ಎ) ನಂದನ ಕಾನನ ರಾಷ್ಟ್ರೀಯ ಉದ್ಯಾನವನ

ಬಿ) ಮಾನಸ ವೈಲ್ಡ್ ಲೈಫ್ ಸೆಂಚುರಿ

ಸಿ) ಒಡಿಶಾ ರಾಷ್ಟ್ರೀಯ ಉದ್ಯಾನವನ

ಡಿ) ಬಂಡಿಪುರ ರಾಷ್ಟ್ರೀಯ ಉದ್ಯಾನವನ

ಉತ್ತರ: ಸಿ

8) ಇತ್ತೀಚಿಗೆ ಭೂಮಿಯ ಮೇಲೆ ಕೃತಕ ಸೂರ್ಯ ಹಾಗೂ ಕೃತಕ ಚಂದ್ರನನ್ನು ಸೃಷ್ಟಿ ಮಾಡಿದ ದೇಶ ಯಾವುದು?

ಎ) ಅಮೆರಿಕ

ಬಿ) ಉತ್ತರ ಕೊರಿಯಾ

ಸಿ) ಇಸ್ರೇಲ್

ಡಿ) ಚೀನಾ

ಉತ್ತರ: ಡಿ

9) ಈ ಕೆಳಗೆ ಉಲ್ಲೇಖಸಿರುವವರಲ್ಲಿ ಯಾರನ್ನು ಭಾರತದ ಮೊದಲ ಮುಸ್ಲಿಂ ಶಿಕ್ಷಕಿ, ಶಿಕ್ಷಣ ತಜ್ಞೆ ಎಂದು ಗೌರವಿಸಲಾಗಿದೆ?

ಎ) ಸೈಯದಾ ಮಲ್ಲಿಕ್

ಬಿ) ಆಯೇಷಾ ಫಾತಿಮಾ

ಸಿ) ಫಾತಿಮಾ ಶೇಖ್

ಡಿ) ಮೇಲಿನ ಯಾರೂ ಅಲ್ಲ

ಉತ್ತರ: ಸಿ

10) ಜಲಾಂತರ್ಗಾಮಿ ನೌಕೆಗಳು, ಹಡಗುಗಳು, ವಿಮಾನಗಳು ಅಥವಾ ಭೂಮಿಯ ಮೇಲಿನಿಂದ ಉಡಾಯಿಸಬಲ್ಲ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಯಿತು. ಹಾಗಾದರೆ ಈ ಕ್ಷಿಪಣಿಯನ್ನು ಭಾರತ ಯಾವ ದೇಶದ ಸಹಯೋಗದಲ್ಲಿ ಉತ್ಪಾದಿಸುತ್ತದೆ?

ಎ) ಅಮೆರಿಕ

ಬಿ) ಜರ್ಮನಿ

ಸಿ) ಫ್ರಾನ್ಸ್

ಡಿ) ರಷ್ಯಾ

ಉತ್ತರ: ಡಿ

11) ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆ : ‘ಅಭಾ’ (Arogya Bharat Health Accounts - ABHA) ಕುರಿತಾದ ಹೇಳಿಕೆಗಳನ್ನು ಗಮನಿಸಿ.

1) ಡಿಜಿಟಲ್ ಹೆಲ್ತ್ ಮಿಷನ್‌ಗೆ ಹೊಸ ನಾಮಕರಣ: ಅಭಾ ಎಂದು ಹೆಸರಿಡಲಾಗಿದೆ.

2) ‘ಅಭಾ’ದಲ್ಲಿ ಭಾರತೀಯರು ತಮ್ಮ ಆರೋಗ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿ, ಸಂಗ್ರಹಿಸಲು ಅವಕಾಶ ಸಿಗಲಿದೆ.

3) ಪ್ರಧಾನಿ ನರೇಂದ್ರ ಮೋದಿ ಅವರು ಆ. 15, 2020ರಂದು ಡಿಜಿಟಲ್ ಆರೋಗ್ಯ ಯೋಜನೆಯನ್ನು ಘೋಷಿಸಿದ್ದರು. ಸೆ. 27ರಿಂದ ಜಾರಿಗೊಳಿಸಲಾಯಿತು. ಯೋಜನೆ ಅರಂಭವಾದಾಗಿನಿಂದ ಈವರೆಗೆ ಸುಮಾರು 15 ಕೋಟಿ ಹೆಲ್ತ್ ಐಡಿಗಳನ್ನು ರೂಪಿಸಲಾಗಿದೆ. 15,000 ವೈದ್ಯಕೀಯ ಸಂಸ್ಥೆಗಳು ಹಾಗೂ 7,400 ವೈದ್ಯರು ಈ ಸೌಲಭ್ಯ ಬಳಸುತ್ತಿದ್ದಾರೆ.

4) ಅಭಾ ಯೋಜನೆಯನ್ವಯ ಎಲ್ಲ ಭಾರತೀಯರು 14 ಅಂಕಿಗಳ ವಿಶಿಷ್ಟ ಆರೋಗ್ಯ ಗುರುತಿನ ಸಂಖ್ಯೆಯನ್ನು (Health Identification Number) ಪಡೆಯಲಿದ್ದಾರೆ.

ಎ) ಹೇಳಿಕೆ 1, 2 ಮತ್ತು 4 ಮಾತ್ರ ಸರಿಯಾಗಿದೆ.

ಬಿ) ಹೇಳಿಕೆ 1ರಿಂದ 4ರ ತನಕ ಎಲ್ಲವೂ ಸರಿಯಾಗಿದೆ ಸಿ) ಹೇಳಿಕೆ 1ರಿಂದ 4ರ ತನಕ ಯಾವುದೂ ಸರಿಯಾಗಿಲ್ಲ ಡಿ) ಯಾವುದೂ ಅಲ್ಲ.

ಉತ್ತರ:ಬಿ

12) ಸಾವಿನ ಅಂಚಿನಲ್ಲಿರುವ ವ್ಯಕ್ತಿಯೋರ್ವನಿಗೆ ‘ಹಂದಿ ಹೃದಯ’ವನ್ನು ಕಸಿ ಮಾಡುವ ಮೂಲಕ ಯಾವ ದೇಶದ ವೈದ್ಯರು ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ?

ಎ) ಸ್ವೀಡನ್

ಬಿ) ಅಮೆರಿಕ

ಸಿ) ಜರ್ಮನಿ

ಡಿ) ಚೀನಾ

ಉತ್ತರ: ಬಿ

ನಿಮಗಿದು ಗೊತ್ತೇ?

ಮೋಟಾರ್ ರೇಸ್

1894ರ ಜುಲೈ 22ರಲ್ಲಿ ಮೊದಲ ಮೋಟಾರ್ ರೇಸ್(ಕಾರ್ ರೇಸ್, ಆಟೊ ರೇಸ್ ಹೆಸರಿನಿಂದಲೂ ಕರೆಯುತ್ತಾರೆ) ಆರಂಭವಾಯಿತು. ಅಂದು ಬೆಳಿಗ್ಗೆ 8 ಗಂಟೆಗೆ ಆರಂಭವಾದ ಈ ರೇಸ್‌ನಲ್ಲಿ 21 ಕಾರುಗಳು ಭಾಗವಹಿಸಿದ್ದವು. ಆದರೆ ಇದು ಹೆಸರಿಗೆ ಮಾತ್ರ ರೇಸ್ ಆಗಿತ್ತು.

1895ರ ಜೂನ್ 11ರಂದು ಮೋಟರ್ ರೇಸ್ ಪ್ಯಾರಿಸ್‌ನಿಂದ ಬೋರ್ಡಿಯೌಕ್ಸ್(Bordeaux) ವರೆಗೆ ನಡೆಯಿತು. ಈ ಎರಡು ಸ್ಥಳಗಳ ನಡುವಣ ದೂರ 1178 ಕಿಮೀ. ಆನಂತರದ ದಿನಗಳಲ್ಲಿ ಹೆಚ್ಚಿನ ರೇಸ್ ಕಾರ್‌ಗಳು ವೃತ್ತಾಕಾರದಲ್ಲಿ ನಡೆಯುತ್ತಿದ್ದವು.

ವಿಶ್ವದ ಅತ್ಯಂತ ಹಳೆಯ ಕಾರುಗಳ ಮೊಟ್ಟಮೊದಲ ರೇಸ್ 1905ರ ಸೆಪ್ಟಂಬರ್ 14ರಂದು ಆರಂಭವಾಯಿತು. ಇಂತಹ ಕಾರ್‌ಗಳ ರೇಸ್ ಈಗಲೂ ಕೂಡಾ ನಡೆಯುತ್ತಿದೆ. ಆರ್.ಎ.ಸಿ. ಟೂರಿಸ್ಟ್ ಟ್ರೋಫಿಗಾಗಿ ಪ್ರತಿವರ್ಷ ಈ ಪಂದ್ಯ ನಡೆಯುತ್ತದೆ.

ಉತ್ತರ ಕೆರೊಲಿನಾದ ರಿಚರ್ಡ್ ಪೆರಿ(Richard Peri) ಗಂಟೆಗೆ 275 ಕಿ.ಮೀ ವೇಗದಲ್ಲಿ 80 ಕಿ.ಮೀ ದೂರವನ್ನು 17 ನಿಮಿಷ 27 ಸೆಕೆಂಡ್‌ಗಳಲ್ಲಿ ಪೂರೈಸಿದರು.

ಫ್ರಾನ್ಸ್‌ನ ಫ್ರಾಂಕೊಯಿಸ್ ಲ್ಯಾಕೆಟ್(Francois Laceket) ಕಾರ್ ಪಂದ್ಯದಲ್ಲಿ ಒಂದು ವಿಕ್ರಮವನ್ನು ಸ್ಥಾಪಿಸಿದರು. ಆತ 1935ರ ಜುಲೈ 22 ರಿಂದ 1936ರ ಜುಲೈ 26ರವರೆಗೆ, 370 ದಿನಗಳ ಪೈಕಿ 363 ದಿನಗಳ ಕಾಲ, ಸತತವಾಗಿ ಕಾರ್ ಓಡಿಸಿ 4 ಲಕ್ಷ ಕಿ.ಮೀ ದೂರ ಪ್ರಯಾಣ ಮಾಡಿದರು.

ಫ್ರಾನ್ಸ್‌ನ ಎಂಟು ಜನರು 1933ರ ಮಾರ್ಚ್‌ನಿಂದ ಜುಲೈವರೆಗೆ, ಗಂಟೆಗೆ 93 ಕಿ.ಮೀ ವೇಗದಲ್ಲಿ 133 ದಿನ 17 ಗಂಟೆ 37 ನಿಮಿಷಗಳ ಕಾಲ ಸತತವಾಗಿ ಕಾರ್ ಓಡಿಸಿದರು.

1911ರ ಜೂನ್ 24ರಂದು ಅರ್ಜೆಂಟೀನಾದ ಜೂನ್ ಮಾನ್ಯುಯಲ್ ಫೆಂಗಿಯೊ (Juan manual ) ವಿಶ್ವದ ಅತಿ ಶ್ರೇಷ್ಠ ಮೋಟಾರ್ ಚಾಲಕನೆಂಬ ಖ್ಯಾತಿ ಪಡೆದಿದ್ದರು. ಇತ್ತೀಚೆಗೆ ಫಾರ್ಮುಲಾ ಒನ್ ಕಾರ್ ರೇಸ್ ಹೆಚ್ಚು ಪ್ರಸಿದ್ದಿ ಪಡೆದಿದೆ.

ಕಾರ್ ರೇಸ್‌ನಲ್ಲಿ ಜಯಗಳಿಸಿದ ವ್ಯಕ್ತಿಗಳು ಹಲವು ಕ್ಷೇತ್ರಗಳಲ್ಲಿ ಖ್ಯಾತಿಪಡೆಯುತ್ತಾರೆ. ಬಹುಮಾನದ ರೂಪದಲ್ಲಿ ಅವರಿಗೆ ಸಾಕಷ್ಟು ಹಣವೂ ಬರುತ್ತದೆ. ಗೆದ್ದ ಸ್ಪರ್ಧಿಯು ಓಡಿಸಿದ ಕಾರಿನ ತಯಾರಿಕಾ ಕಂಪನಿಯೂ ಖ್ಯಾತಿ ಪಡೆಯುತ್ತದೆ. ಹೀಗೆ ಆ ಕಂಪನಿಗೆ ಪ್ರಚಾರವೂ ಸಿಗುತ್ತದೆ.

ಮಾಹಿತಿ: Spardha Bharati UPSC ಯೂಟ್ಯೂಬ್ ಚಾನಲ್

ಮಾಹಿತಿ: Spardha Bharati UPSCಯೂಟ್ಯೂಬ್ ಚಾನಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.