ನಾಗೇಶ ಜಿ. ವೈದ್ಯ

ಅಭ್ಯರ್ಥಿಗಳು ತಮ್ಮನ್ನು ತಾವು ಅರಿಯುವುದಕ್ಕೆ ’ಸ್ವಾಟ್ ವಿಶ್ಲೇಷಣೆ’ ತುಂಬಾ ನೆರವಾಗುತ್ತದೆ. ಸಂದರ್ಶನಕ್ಕೆ ಹೋಗುವ ಮುನ್ನ ಈ ವಿಶ್ಲೇಷಣೆಯನ್ನು ಮಾಡಿಕೊಂಡರೆ, ಸಂದರ್ಶಕರ ಎದುರು ನಿಮ್ಮ ಶಕ್ತಿ ಸಾಮರ್ಥ್ಯವನ್ನು ಉತ್ತಮವಾಗಿ ಪ್ರಸ್ತುತಪಡಿಸಬಹುದು.

ಈ ಹಿಂದೆ ಸಂಸ್ಥೆಗಳ ಪ್ರಸ್ತುತದ ಚಿತ್ರಣವನ್ನು ಕಾಣಲು ಸ್ವಾಟ್ ವಿಶ್ಲೇಷಣೆ (SWOT) ಬಳಕೆಯಾಗುತ್ತಿತ್ತು. ಅದರ ಸಾಮರ್ಥ್ಯ (Strength), ದೌರ್ಬಲ್ಯಗಳು (Weakness), ವ್ಯವಹಾರದ ಅವಕಾಶ (Oppurtunity) ಮತ್ತು ಅಂಜಿಕೆ/ ಬೆದರಿಕೆಗಳನ್ನು(Threaten) ವಿಶ್ಲೇಷಿಸಿ, ಭವಿಷ್ಯದ ಯೋಜನೆಗಳನ್ನು ರೂಪಿಸಲಾಗುತ್ತಿತ್ತು. ಕಾಲಕ್ರಮೇಣ ಇದು ಅಭ್ಯರ್ಥಿಗಳ ವ್ಯಕ್ತಿತ್ವವನ್ನು ಅಳೆಯಲು ಬಳಸಲಾಗುವ ಜನಪ್ರಿಯ ’ಪರಿಕರ’ವಾಗಿ ಹೊರಹೊಮ್ಮಿತು.

ಸಂದರ್ಶನದ ಆರಂಭದಲ್ಲಿ ಅಭ್ಯರ್ಥಿಗಳನ್ನು ಪರಿಚಯಿಸಿಕೊಳ್ಳುವಂತೆ ಕೇಳಲಾಗುತ್ತದೆ. ಇದು ಅಭ್ಯರ್ಥಿಯು ತನ್ನನ್ನು ಪರಿಣಾಮಕಾರಿಯಾಗಿ ಪ್ರಸ್ತುತಗೊಳಿಸಲು ಒದಗುವ ಸುವರ್ಣಾವಕಾಶ. ಈ ಸಂದರ್ಭದಲ್ಲಿ ಸಹಾಯಕ್ಕೆ ಬರುವುದೇ ’ಸ್ವಾಟ್ ವಿಶ್ಲೇಷಣೆ’.

ಸಂದರ್ಶನಕ್ಕೆ ಪೂರ್ವಭಾವಿಯಾಗಿ ಅಭ್ಯರ್ಥಿಯು ‘ಸ್ವಾಟ್‘ ವಿಶ್ಲೇಷಣೆ ಮೂಲಕ, ತನ್ನಲ್ಲಿರುವ ಸಾಮರ್ಥ್ಯ, ದೌರ್ಬಲ್ಯ, ಅವಕಾಶ, ಅಂಜಿಕೆ/ಬೆದರಿಕೆಗಳನ್ನು ತಿಳಿದುಕೊಳ್ಳಬೇಕು. ಇದು ಸಿದ್ಧತೆಯನ್ನು ಬಲಪಡಿಸುವುದರ ಜೊತೆಗೆ, ತನ್ನನ್ನು ತಾನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಮುಖ್ಯವಾಗಿ, ಈ ವಿಶ್ಲೇಷಣೆಯು ಅಭ್ಯರ್ಥಿಯ ಸಾಕಾರಾತ್ಮಕ ಸಾಮರ್ಥ್ಯ, ಅವಕಾಶಗಳ ಜೊತೆಗೆ ನಕಾರಾತ್ಮಕ ದೌರ್ಬಲ್ಯ ಹಾಗೂ ಅಂಜಿಕೆಗಳನ್ನು ನಿಭಾಯಿಸಲು ಪ್ರೇರೇಪಿಸುವ ಮಾರ್ಗದರ್ಶಿಯಾಗುತ್ತದೆ.

ತನ್ನಲ್ಲಿರುವ ಸಾಮರ್ಥ್ಯವನ್ನು ಹೇಳುತ್ತ, ನಕಾರಾತ್ಮಕ ದೌರ್ಬಲ್ಯ, ಅಂಜಿಕೆಗಳನ್ನೂ ಮೆಟ್ಟಿ ನಿಲ್ಲುವ ಸಕಾರಾತ್ಮಕ ಅಂಶಗಳೊಂದಿಗೆ ಅಭ್ಯರ್ಥಿಯು ತನ್ನ ವ್ಯಕ್ತಿತ್ವವನ್ನು ಆತ್ಮವಿಶ್ವಾಸದಿಂದ ಪ್ರತಿಬಿಂಬಿಸುವ ಮೂಲಕ ಸಂದರ್ಶನದಲ್ಲಿ ಗೆಲುವಿನತ್ತ ಹೆಜ್ಜೆಯಿಡಬಹುದು.

ಸಾಮರ್ಥ್ಯ: ನಿಮಗೆ ನೀವೇ ನಾಲ್ಕು ಪ್ರಶ್ನೆಗಳನ್ನು ಹಾಕಿಕೊಳ್ಳುವುದರ ಮೂಲಕ, ನಿಮ್ಮ ಸಾಮರ್ಥ್ಯವನ್ನು ನೀವೇ ಕಂಡುಕೊಳ್ಳಬಹುದು. ನನ್ನ ವಿಶೇಷ ಪ್ರತಿಭೆ ಏನು? ನಾನು ಇತರರಿಗಿಂತ ಭಿನ್ನ ಹೇಗೆ? ಯಾವ ಕ್ಷೇತ್ರ ನನಗೆ ಇಷ್ಟ? ನಾನು ಯಾವ ಗುಣಗಳಿಂದಾಗಿ, ಮೇಲುಗೈ ಸಾಧಿಸಬಲ್ಲೆ? ಇವುಗಳಿಗೆ ಉತ್ತರ ಹುಡುಕಿಕೊಂಡು ಮನನ ಮಾಡಿಕೊಳ್ಳಿ.

ಇದು ನಿಮ್ಮ ಮೊದಲ ಸಂದರ್ಶನವಾಗಿದ್ದರೆ, ನಿಮ್ಮ ಸಾಮರ್ಥ್ಯಗಳಲ್ಲಿ ನಿಮ್ಮ ಅಧ್ಯಯನ, ಶೈಕ್ಷಣಿಕ ಸಾಧನೆ, ಸಕಾರಾತ್ಮಕ ಚಿಂತನೆಗಳು, ಅರಿತಿರುವ ಭಾಷೆಗಳು, ಸೃಜನಾತ್ಮಕತೆ, ಉತ್ಸಾಹಿ ಮನೋಭಾವ, ನಾಯಕತ್ವದ ಗುಣಗಳು, ವಿಶೇಷ ಕೌಶಲ್ಯಗಳನ್ನು ಒಳಗೊಂಡಿರಲಿ. ಈಗಾಗಲೇ ನೀವು ಬೇರೆಲ್ಲೋ ಕೆಲಸ ಮಾಡಿದ್ದರೆ, ಹಿಂದಿನ ಅನುಭವ, ಸಾಧನೆಗಳು, ಪ್ರದರ್ಶಿಸಿದ ನಾಯಕತ್ವ, ಸ್ವಾವಲಂಬನೆ, ಹೊಂದಿಕೊಳ್ಳುವ ಗುಣ, ಕಿರಿಯರನ್ನು ಪ್ರೋತ್ಸಾಹಿಸಿದ್ದು, ಕಂಪನಿಗೆ ನೀವು ನೀಡಿದ ಗಮನಾರ್ಹ ಕೊಡುಗೆಗಳು, ಸವಾಲುಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಬಗ್ಗೆ ವಿವರಿಸಿ.

ಇವುಗಳ ಜೊತೆಗೆ ನಿಮ್ಮ ನೇಮಕಾತಿಯಿಂದ ಕಂಪನಿಗೆ ಆಗಲಿರುವ ಲಾಭದ ಬಗ್ಗೆಯೂ ಸಂದರ್ಶಕರಿಗೆ ಮನದಟ್ಟು ಮಾಡಿಕೊಡಿ.

ದೌರ್ಬಲ್ಯಗಳು: ದೌರ್ಬಲ್ಯವನ್ನು ಇತರರೆದುರು ಹೇಳಿಕೊಳ್ಳುವುದು ಕಷ್ಟಕರವೇ. ನನ್ನಲ್ಲಿ ಯಾವುದೇ ದೌರ್ಬಲ್ಯಗಳಿಲ್ಲ ಎನ್ನುವುದು ಅಸಹಜವೆನಿಸುತ್ತದೆ. ಬದಲಿಗೆ, ನಿಮ್ಮ ದೌರ್ಬಲ್ಯಗಳನ್ನು ವಿವರಿಸುವ ಮೂಲಕ ಅವುಗಳ ಬಗ್ಗೆ ನಿಮಗೆ ಅರಿವಿದೆ ಎಂಬುದನ್ನು ಪ್ರದರ್ಶಿಸಿ. ಹಾಗೆಯೇ ಅವುಗಳನ್ನು ಹೇಗೆ ಜಯಿಸಲಿದ್ದೀರಿ ಎಂಬುದನ್ನೂ ಪ್ರಾಮಾಣಿಕವಾಗಿ ವಿವರಿಸಿ. ನಿಮಗೆ ತೊಡಕಾಗುತ್ತಿರುವ ನಿಮ್ಮ ಭಯ, ಇತಿಮಿತಿಗಳನ್ನು ಪಟ್ಟಿ ಮಾಡಿಕೊಳ್ಳಿ. ಅವನ್ನು ನಿವಾರಿಸಿಕೊಳ್ಳಲು ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳಿ.

ಉದಾಹರಣೆಗೆ ನೀವೊಬ್ಬ ಅಂತರ್ಮುಖಿ ಎಂದುಕೊಳ್ಳೋಣ. ಅಪರಿಚಿತರೊಂದಿಗೆ ಸಂವಹನ ನಡೆಸುವುದು ನಿಮಗೆ ಕಷ್ಟ. ಅದನ್ನೇ ಸಂದರ್ಶಕರಿಗೆ ಹೇಳಿ. ಈ ದೌರ್ಬಲ್ಯವನ್ನು ಅರಿತಾಗಿನಿಂದ ನಾನು ಅಪರಿಚಿತರೊಂದಿಗೆ ಹೆಚ್ಚು ಬೇರೆಯುತ್ತಿದ್ದೇನೆ. ಧೈರ್ಯದಿಂದ ಮಾತನಾಡುತ್ತಿದ್ದೇನೆ. ತುಂಬ ಪ್ರಗತಿ ಸಾಧಿಸಿದ್ದೇನೆ ಎಂದು ವಿಶ್ವಾಸ ದಿಂದ ಹೇಳಿ. ಹೀಗೆ ಯಾವುದೇ ದೌರ್ಬಲ್ಯವನ್ನು ಜಯಿಸಲು ನೀವು ತೆಗೆದುಕೊಂಡಿರುವ ಸಕಾರಾತ್ಮಕ ನಡೆಯನ್ನು ತಿಳಿಸುವ ಮೂಲಕ ಸಂದರ್ಶಕರ ಮನಗೆಲ್ಲಬಹುದು.

ಅವಕಾಶಗಳು: ಉದ್ಯೋಗದಿಂದ ನೀವು ಪಡೆದುಕೊಳ್ಳಬಹುದಾದ ಪ್ರಯೋಜನವನ್ನು ಅವಕಾಶಗಳೆನ್ನಬಹುದು. ಸಾಮಾನ್ಯವಾಗಿ ಸಂದರ್ಶಕರು, ‘ನೀವು ಈ ಉದ್ಯೋಗವನ್ನು ಏಕೆ ಬಯಸುತ್ತೀರಿ? ನಿಮ್ಮ ಅರ್ಹತೆಗೆ ಇದಕ್ಕಿಂತ ಉತ್ತಮ ಅವಕಾಶಗಳು ಸಿಗಬಹುದಲ್ಲ’ ಎಂದು ಪ್ರಶ್ನಿಸಿ, ನಿಮ್ಮನ್ನು ಒರೆಗೆ ಹಚ್ಚಬಹುದು.

ಇದಕ್ಕಾಗಿ, ಈ ಉದ್ಯೋಗದಲ್ಲಿ ನಿಮಗೆ ಏನೆಲ್ಲಾ ಅವಕಾಶಗಳು ಇವೆ ಎಂಬುದನ್ನು ಪೂರ್ವಭಾವಿಯಾಗಿ ವಿಶ್ಲೇಷಿಸಿ. ಉದಾಹರಣೆಗೆ ಕಂಪನಿಯ ಕಿರಿಯ ಸಹಾಯಕ ಹುದ್ದೆಗಾಗಿ ನೀವು ಸಂದರ್ಶನಕ್ಕೆ ಹಾಜರಾಗಿದ್ದಲ್ಲಿ, ’ಈ ಕಂಪನಿಯಲ್ಲಿ ಹಿರಿಯ ಸ್ಥಾನಕ್ಕೇರಲು ತುಂಬಾ ಅವಕಾಶಗಳಿವೆ. ಹಾಗಾಗಿ, ನಾನು ಈ ಹುದ್ದೆಯಿಂದ ನನ್ನ ವೃತ್ತಿ ಜೀವನ ಆರಂಭಿಸಲು ನಿರ್ಧರಿಸಿದ್ದೇನೆ’ ಎನ್ನಬಹುದು. ಇದಕ್ಕೆ ನಿಮ್ಮ ಆಸಕ್ತಿ ಮತ್ತು ವಿದ್ಯಾರ್ಹತೆ ಕೂಡ ಪೂರಕವಾಗಿದೆ ಎಂಬುದನ್ನು ಮನದಟ್ಟು ಮಾಡಿಸಿ. ಜೊತೆಗೆ ದೇಶದ ಆರ್ಥಿಕ ಬೆಳವಣಿಗೆ, ಸರ್ಕಾರದ ನೀತಿಗಳು ಆ ಕ್ಷೇತ್ರಕ್ಕೆ ಪ್ರೋತ್ಸಾಹದಾಯಕವಾಗಿದ್ದರೆ, ಅದನ್ನೂ ತಪ್ಪದೇ ಹೇಳಿ. ಅದ್ಭುತ ಬೆಳವಣಿಗೆಯ ಈ ಕ್ಷೇತ್ರದಲ್ಲಿ ರುವ ಕಂಪನಿಯೊಂದಿಗೆ ನಾನೂ ಬೆಳೆಯಲು ಇಚ್ಚಿಸುತ್ತೇನೆ ಎಂದು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ.

ಈಗಾಗಲೇ ಉದ್ಯೋಗಿಯಾಗಿದ್ದರೆ, ಪ್ರಸಕ್ತ ಕಂಪನಿಯಲ್ಲಿನ ಬೆಳವಣಿಗೆಯಿಂದ ಆಕರ್ಷಿತನಾಗಿದ್ದೇನೆ. ವೃತ್ತಿಯಲ್ಲಿ ಉನ್ನತಿ ಪಡೆಯುವ ಆಸಕ್ತಿಯಿಂದಾಗಿ ಈ ಕಂಪನಿಯನ್ನು ಸೇರಲು ಬಯಸುತ್ತೆನೆಂದು ಹೇಳಬಹುದು.

ಬೆದರಿಕೆಗಳು: ಇವು ಮಾರುಕಟ್ಟೆಯಲ್ಲಿನ ಬದಲಾವಣೆ, ಕಾನೂನಿನ ಮಾರ್ಪಾಟು, ತಂತ್ರಜ್ಞಾನ, ರಾಜಕೀಯ, ಅಂತಾರಾಷ್ಟ್ರೀಯ ಸ್ಪರ್ಧೆ ಮುಂತಾದವುಗಳಿಂದ ಉಂಟಾಗುವಂತಹವು. ಹಾಗಾಗಿ ನಮ್ಮ ನಿಯಂತ್ರಣದಲ್ಲಿಲ್ಲ.

ಉದಾಹರಣೆಗೆ ನೀವು ಪ್ರೋಗ್ರಾಮರ್ ಹುದ್ದೆಗೆ ಸೇರಲು ಸಂದರ್ಶನ ಎದುರಿಸುತ್ತಿದ್ದೀರಿ ಎಂದು ಕೊಳ್ಳೋಣ. ಅಲ್ಲಿ ನೀವು ಎದುರಿಸುತ್ತಿರುವ ಅಂಜಿಕೆ ಬಗ್ಗೆ ಕೇಳಿದಾಗ, ’ಕೃತಕ ಬುದ್ಧಿಮತ್ತೆ, ಚಾಟ್ ಜಿಪಿಟಿಯನ್ನು ಉಪಯೋಗಿಸಿ ಈಗ ಕೋಡ್‌ಗಳನ್ನು ಕೂಡ ಬರೆಯಬಹುದು. ಇದು ಭವಿಷ್ಯದಲ್ಲಿ ಪ್ರೋಗ್ರಾಮರ್‌ಗಳ ಉದ್ಯೋಗಕ್ಕೆ ಧಕ್ಕೆ ತರಬಹುದು. ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿಗೆ ಕಾರಣವಾಗಬಹುದು. ಹಾಗಿರುವಾಗ, ಸಮಯದೊಂದಿಗೆ ನನ್ನ ಕೌಶಲವನ್ನೂ ವಿಸ್ತರಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಈಗಾಗಲೇ ನಾನು ಆ ನಿಟ್ಟಿನಲ್ಲಿ ಸಾಗುತ್ತಿದ್ದೇನೆ’ ಎನ್ನಬಹುದು. ನೀವು ಅಂಜಿಕೆಯನ್ನು ಕಡಿಮೆಗೊಳಿಸಲು ಅಥವಾ ಸಂಪೂರ್ಣವಾಗಿ ತೊಡೆದುಹಾಕಲು ಪೂರ್ವಭಾವಿಯಾಗಿ ಯೋಚಿಸುತ್ತಿರುವುದು ಸಂದರ್ಶಕರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಸ್ವಾಟ್ ವಿಶ್ಲೇಷಣೆಯನ್ನು ಕಾಲಕಾಲಕ್ಕೆ ಮಾಡುತ್ತಿರಬೇಕು. ಭವಿಷ್ಯದಲ್ಲಿ, ನಿಮ್ಮ ಕ್ರಮಗಳಿಂದಾಗಿ ಹಲವಾರು ದೌರ್ಬಲ್ಯಗಳು ಕಡಿಮೆಯಾಗಬಹುದು; ಅಂಜಿಕೆಗಳು ಬದಲಾಗಬಹುದು. ಅವುಗಳನ್ನು ನಿಭಾಯಿಸಲು ಹೊಸ ತಂತ್ರಗಾರಿಕೆ ಬೇಕಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.