ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ICAR) ಅಂಗಸಂಸ್ಥೆಯಾದ ಮೀನು ತಳಿ ಆನುವಂಶಿಕ ಸಂಪನ್ಮೂಲಗಳ ಸಂಶೋಧನಾ ಸಂಸ್ಥೆ (NBFGR) ಅರುಣಾಚಲ ಪ್ರದೇಶ ರಾಜ್ಯದಲ್ಲಿ ಬ್ರಹ್ಮಪುತ್ರ ನದಿಯ ಉಪನದಿ ಟಿಸ್ಸಾ ನದಿಯ ಜಲಾನಯನ ಪ್ರದೇಶದಲ್ಲಿರುವ ‘ತುಂಗ್’ ಹೆಸರಿನ ಒಳನಾಡು ಪ್ರವಾಹದ ಝರಿಯಲ್ಲಿ ಹೊಸ ಪ್ರಜಾತಿಯ ಕ್ಯಾಟ್‌ಫಿಶ್‌ಗಳನ್ನು ಪತ್ತೆಮಾಡಿದೆ.

ICAR–NBFGR ಸ್ಥಾಪಕ ನಿರ್ದೇಶಕ ಡಾ.ಪುಣ್ಯಬರತ ದಾಸ್ ಅವರು ಜಲಚರಗಳ ಸಂರಕ್ಷಣೆ ಮತ್ತು ವರ್ಧನೆಯಲ್ಲಿ ನೀಡಿದ ಕೊಡುಗೆಯ ಗೌರವಾರ್ಥ ಹೊಸದಾಗಿ ಗುರುತಿಸಲಾದ ಈ ಕ್ಯಾಟ್‌ಫಿಶ್‌ಗೆ ‘ಗ್ಲಿಪ್ಟೋಥೊರಾಕ್ಸ್ ಪುಣ್ಯಬ್ರತೈ’ (Glyptothorax punyabratai) ಎಂದು ಹೆಸರಿಸಲಾಗಿದೆ ಎಂದು ICAR-NBFGR ನಿರ್ದೇಶಕ ಡಾ.ಉತ್ತಮಕುಮಾರ್ ಸರ್ಕಾರ ಮಾಹಿತಿ ನೀಡಿದ್ದಾರೆ.

ಈ ಸಂಶೋಧನೆಯ ಕುರಿತಾದ ವರದಿಯನ್ನು ‘ಇಥಿಯೋಲಾಜಿಕಲ್ ಎಕ್ಸ್‌ಪ್ಲೋರೇಷನ್ ಆಫ್ ಫ್ರೆಶ್‌ವಾಟರ್ಸ್’ ಹಾಗೂ ‘ಕೃಷಿ ಜಾಗರಣ’ ನಿಯತಕಾಲಿಕೆಗಳಲ್ಲಿ ಪ್ರಕಟಿಸಲಾಗಿದೆ. ಹೊಸದಾಗಿ ಪತ್ತೆಯಾದ ಕ್ಯಾಟ್‌ಫಿಶ್‌ನ ಹೋಲೋಟೈಪ್ (ಪತ್ತೆಯಾದ ಮೂಲ ಮಾದರಿ) ಮತ್ತು ಪ್ಯಾರಾಟೈಪ್ (ಸಮಾನ ಗುಣಲಕ್ಷಣಗಳನ್ನು ಹೊಂದಿರುವ ಹೆಚ್ಚುವರಿ ಮಾದರಿ) ಗಳನ್ನು ಲಕ್ನೋದಲ್ಲಿನ ನ್ಯಾಷನಲ್ ಫಿಶ್ ಮ್ಯೂಸಿಯಂ–ಕಮ್–ರೆಪೊಸಿಟರಿಯಲ್ಲಿ ಸಂರಕ್ಷಿಸಿ ಇರಿಸಲಾಗಿದೆ.

ಗ್ಲಿಪ್ಟೋಥೊರಾಕ್ಸ್ ಪುಣ್ಯಬ್ರತೈ’ ವೈಶಿಷ್ಟ್ಯಗಳು

l→‘ಗ್ಲಿಪ್ಟೋಥೊರಾಕ್ಸ್ ಪುಣ್ಯಬ್ರತೈ’ ಪ್ರಭೇದವು ‘ಗ್ಲಿಪ್ಟೊಥೊರಾಕ್ಸ್ ಕ್ಯಾಟ್‌ಫಿಶ್’ ಕುಲದ ಭಾಗವಾಗಿದೆ. ಇದು ವೇಗವಾಗಿ ಹರಿಯುವ ನೀರಿನಲ್ಲಿರುವ ಬಂಡೆಗಳ ಮೇಲೆ ಅಂಟಿಕೊಳ್ಳಲು ಸಾಧ್ಯವಾಗುವಂಥ ಜೆಲ್ (ಲೋಳೆ) ಲೇಪಿತ ದೇಹರಚನೆ, ವಿಶಿಷ್ಟವಾದ ದೇಹಾಕಾರ, ಬೃಹತ್ ಗಾತ್ರ ಮತ್ತು ಕಠಿಣವಾದ ರಕ್ಷಾಕವಚದಂಥ ದಪ್ಪ ಚರ್ಮದ ಗುಣಲಕ್ಷಣಗಳನ್ನು ಹೊಂದಿದೆ.

l→ಈ ಮೀನು ಸಾಮಾನ್ಯವಾಗಿ 63
ಸೆಂ.ಮೀ. ಉದ್ದದವರೆಗೆ ಬೆಳೆಯುತ್ತದೆ. ಇವುಗಳಿಂದಾಗಿ ‘ಗ್ಲಿಪ್ಟೊಥೊರಾಕ್ಸ್ ಪುಣ್ಯಬ್ರತೈ’ ಅನ್ನು ಇತರ ಕ್ಯಾಟ್‌ಫಿಶ್‌ಗಳಿಂದ ಪ್ರತ್ಯೇಕಿಸಿ ಗುರುತಿಸಬಹುದಾಗಿದೆ.

l→ಗ್ಲಿಪ್ಟೊಥೊರಾಕ್ಸ್ ಪುಣ್ಯಬ್ರತೈ ಸಿಹಿನೀರಿನ ಮೂಲದಲ್ಲಿ ವಾಸಿಸುವ ಮೀನು ಪ್ರಭೇದವಾಗಿದೆ. ತಾನು ವಾಸವಾಗಿರುವ ಜೈವಿಕ ಪರಿಸರದ ಸಮತೋಲನ ಮತ್ತು ಕಾರ್ಯನಿರ್ವಹಣೆಯನ್ನು ಕಾಪಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

l ಈ ತಳಿಯ ಉಪಸ್ಥಿತಿ ಆಯಾ ಜೀವಪರಿಸರ ವ್ಯವಸ್ಥೆಯಲ್ಲಿನ ಆಹಾರ ಸರಪಳಿಯಲ್ಲಿ ಪೋಷಕಾಂಶಗಳ ಪೂರೈಕೆ ಮತ್ತು ನಿಯಂತ್ರಣಕ್ಕೆ ಕೊಡುಗೆ ನೀಡುತ್ತದೆ.

l ಈ ತಳಿಯ ಮೂಲವನ್ನು 2004ರಲ್ಲಿಯೇ ವಿಶ್ವನಾಥ ಮತ್ತು ಲಾನ್ಸಿರಾಂ ಎಂಬ ಜೀವ ವಿಜ್ಞಾನಿಗಳು ಬೇರೊಂದು ಅಧ್ಯಯನ ನಡೆಸುವ ಸಂದರ್ಭದಲ್ಲಿ ಪತ್ತೆ ಮಾಡಿದ್ದರಾದರೂ ಅದಕ್ಕಿನ್ನೂ ನಿರ್ದಿಷ್ಟ ಹೆಸರು ನೀಡಿರಲಿಲ್ಲ ಹಾಗೂ ಅದನ್ನು ಒಂದು ಪ್ರತ್ಯೇಕ ತಳಿಯನ್ನಾಗಿ ಗುರುತಿಸಲೂ ಆಗ ಸಾಧ್ಯವಾಗಿರಲಿಲ್ಲ. ಆದರೆ, ‘ಭವಿಷ್ಯದಲ್ಲಿ ಪ್ರತ್ಯೇಕ ಅಧ್ಯಯನಕ್ಕೆ ಒಳಪಡಿಸಬಹುದಾದ ತಳಿ’ ಎಂದಷ್ಟೇ ಗುರುತಿಸಲಾಗಿತ್ತು.

l ಈ ಮೀನು ನದಿಪಾತ್ರದಲ್ಲಿ ಲಭ್ಯವಿರುವ ಜಲಸಸ್ಯಗಳನ್ನು, ಚಿಕ್ಕಪುಟ್ಟ ಮೀನುಗಳು ಹಾಗೂ ಜಲಚರಗಳನ್ನು ಸೇವಿಸುತ್ತದೆ.

l ಸಾಮಾನ್ಯವಾಗಿ ಮಾನಸೂನ್ ಮಳೆ ಸಂದರ್ಭದಲ್ಲಿ ಈ ಮೀನುಗಳು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗುತ್ತವೆ. ಈ ಮೀನುಗಳು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ಈ ಮೊಟ್ಟೆಗಳು ಕೂಡ ವೇಗವಾಗಿ ಹರಿಯುವ ನೀರಿನ ತಳಭಾಗದಲ್ಲಿರುವ ಕಲ್ಲಿನ ಮೇಲೆ ಗಟ್ಟಿಯಾಗಿ ಅಂಟಿಕೊಳ್ಳುವ ಲೋಳೆ ಗುಣವನ್ನು ಹೊಂದಿರುತ್ತವೆ.

l ಈ ಮೀನನ್ನು ಸ್ಥಳೀಯ ಮೀನುಗಾರರು ಆಹಾರವಾಗಿ ಬಳಸುವುದಿಲ್ಲ. ಈ ಮೀನು ಸಾಮಾನ್ಯವಾಗಿ ನೀರಿನ ತಳಭಾಗದಲ್ಲಿ ವಾಸಿಸುವುದರಿಂದ ಬಲೆಗೂ ಬೀಳುವುದಿಲ್ಲ. ಆಕಸ್ಮಿಕವಾಗಿ ಈ ಮೀನು ಬಲೆಗೆ ಬಿದ್ದರೂ ಮೀನುಗಾರರು ಈ ಮೀನನ್ನು ಮರಳಿ ನೀರಿಗೆ ಬಿಡುತ್ತಾರೆ.

l→ಇದನ್ನು ಸ್ಥಳೀಯರು ‘ಮತ್ಸ್ಯದೇವತೆ’ ಎಂದು ಪರಿಗಣಿಸುತ್ತಾರೆ. ಈ ಮೀನು ತನ್ನದೇ ಆದ ಜಾನಪದ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಹೊಂದಿದೆ. ಈ ಹೊಸ ಪ್ರಭೇದ ಈಶಾನ್ಯ ಭಾರತದ ಜೀವವೈವಿಧ್ಯದ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ.

l →ಕೃಷಿ ಹಾಗೂ ಕೈಗಾರಿಕಾ ತ್ಯಾಜ್ಯವನ್ನು ನದಿಗೆ ಹರಿಸುವುದರಿಂದ ಹಾಗೂ ಅಣೆಕಟ್ಟು ನಿರ್ಮಾಣದಿಂದ ಈ ಪ್ರಭೇದದ ಮೀನುಗಳ ಅಸ್ತಿತ್ವಕ್ಕೆ ಅಪಾಯ ತಂದೊಡ್ಡಿದ್ದು, ಈ ತಳಿ ಅಳಿವಿನಂಚಿನಲ್ಲಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

l→ಈ ತಳಿಯನ್ನು IUCN (International Union for Conservation of Nature) ಕೆಂಪುಪಟ್ಟಿಯಲ್ಲಿ ಸೇರಿಸಲು ಕ್ರಮವಹಿಸಬೇಕು ಎಂದು ICAR-NBFGR ಸಂಶೋಧಕರು ಸೂಚಿಸಿದ್ದಾರೆ.

ಕ್ಯಾಟ್‌ಫಿಶ್‌ಗಳ ವೈಶಿಷ್ಟ್ಯ

l→ಇಲ್ಲಿಯವರೆಗೆ ಕ್ಯಾಟ್‌ಫಿಶ್‌ಗಳಲ್ಲಿ 2000ಕ್ಕೂ ಹೆಚ್ಚು ಪ್ರಜಾತಿಗಳನ್ನು ಗುರುತಿಸಲಾಗಿದೆ. ಹೆಚ್ಚಿನ ಕ್ಯಾಟ್‌ಫಿಶ್ ಪ್ರಭೇದಗಳು ಸಿಹಿನೀರಿನಲ್ಲಿ ಕಂಡುಬರುತ್ತವೆ. ಕ್ಯಾಟ್‌ಫಿಶ್‌ಗಳ ಕೆಲವೇ ಕೆಲ ಪ್ರಜಾತಿಗಳು ಸಮುದ್ರದಲ್ಲಿ ವಾಸಿಸುತ್ತವೆ. ಕ್ಯಾಟ್‌ಫಿಶ್‌ಗಳು ಸಾಮಾನ್ಯವಾಗಿ ರಾತ್ರಿ ವೇಳೆ ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತವೆ. ಇವು ಸಾಮಾನ್ಯವಾಗಿ ಬೆಂಥಿಕ್ (ನೀರಿನ ಕೆಳಭಾಗದಲ್ಲಿ ವಾಸಿಸುವ ಜಲಚರಗಳು) ಆಗಿರುತ್ತವೆ. ಹೆಚ್ಚಿನ ಕ್ಯಾಟ್‌ಫಿಶ್‌ಗಳು ಸಿಲಿಂಡರಾಕಾರದ ದೇಹವನ್ನು ಹೊಂದಿದ್ದು, ಕೆಲ ಫಿಶ್ ಕ್ಯಾಟ್‌ಗಳು ಚಪ್ಪಟೆಯಾದ ಬಾಯಿ ಹೊಂದಿರುತ್ತವೆ. ಎಲ್ಲ ಕ್ಯಾಟ್‌ಫಿಶ್‌ಗಳ ಬಾಯಿಯ ಸುತ್ತಲೂ ಬೆಕ್ಕಿನ ಮೀಸೆಯನ್ನು ಹೋಲುವ ಉದ್ದನೆಯ ಮೀಸೆಗಳು (ಬಾರ್ಬೆಲ್‌ಗಳು ಅಥವಾ ಫೀಲರ್‌ಗಳು) ಇರುವುದರಿಂದಲೇ ಇವುಗಳಿಗೆ ಬೆಕ್ಕುಮೀನುಗಳು ಅಥವಾ ಕ್ಯಾಟ್‌ಫಿಶ್ ಎಂದು ಹೆಸರಿಸಲಾಗಿದೆ. ಕ್ಯಾಟ್‌ಫಿಶ್‌ಗಳು ತಮ್ಮ ರೆಕ್ಕೆಗಳಲ್ಲಿ ವಿಶಿಷ್ಟ ತಿರುವುಗಳನ್ನು ಹೊಂದಿರುತ್ತವೆ.

ICAR–NBFGR ಬಗ್ಗೆ

ICAR–NBFGR (ICAR: Indian Council of Agricultural Research, NBFGR: National Bureau of Fish Genetic Resources) ಸಂಸ್ಥೆಯನ್ನು 1983ರಲ್ಲಿ ಅಲಹಾಬಾದ್‌ನಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಆಶ್ರಯದಲ್ಲಿ ಸ್ಥಾಪಿಸಲಾಗಿದೆ. ಇದರ ಶಾಖಾ ಕಚೇರಿಗಳು ಲಖನೌ, ಕೆನಾಲ್ ರಿಂಗ್ ರೋಡ್ ಹಾಗೂ ಟೆಲಿಬಾಗ್‌ದಲ್ಲಿವೆ. ಭಾರತದಲ್ಲಿನ ಮೀನು ತಳಿಗಳ ಆನುವಂಶಿಕ ಸಂಪನ್ಮೂಲಗಳ ಮೌಲ್ಯಮಾಪನ, ಸಂರಕ್ಷಣೆ, ನಿರ್ವಹಣೆ ಮತ್ತು ಅವುಗಳ ಜೀವವೈವಿಧ್ಯದ ಅಧ್ಯಯನ ನಡೆಸುವುದು ಈ ಸಂಸ್ಥೆಯ ಜವಾಬ್ದಾರಿ ಆಗಿದೆ. ಮೀನುಗಳ ಸಂತಾನೋತ್ಪತ್ತಿ ಹೆಚ್ಚಿಸುವುದು, ವಿವಿಧ ಒಳನಾಡು ಜಲಚರಗಳನ್ನು ಅಭಿವೃದ್ಧಿಪಡಿಸುವುದು, ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಗುರುತಿಸಿ ಸಂರಕ್ಷಿಸುವುದು, ಜಲಚರಗಳ ವಾಸಸ್ಥಳ ಮತ್ತು ಆಹಾರದ ಅಗತ್ಯಗಳನ್ನು ಪೂರೈಸುವುದು ಮತ್ತು ಜಲಕೃಷಿ ವಲಯದಲ್ಲಿ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವುದು, ಮೀನು ಉತ್ಪಾದನೆ ವರ್ಧನೆಗೆ ತಾಂತ್ರಿಕ ಬೆಂಬಲ ನೀಡುವ ಕೆಲಸವನ್ನು ICAR–NBFGR ಮಾಡುತ್ತದೆ. ಈಗ ‘ಗ್ಲಿಪ್ಟೋಥೊರಾಕ್ಸ್ ಪುಣ್ಯಬ್ರತೈ’ ಕ್ಯಾಟ್‌ಫಿಶ್ ತಳಿಯನ್ನು ಪತ್ತೆ ಮಾಡಿರುವುದು ನೈಸರ್ಗಿಕ ಪರಂಪರೆಯನ್ನು ಕಾಪಾಡುವಲ್ಲಿ ನಿರಂತರ ಪರಿಶೋಧನೆ ಮತ್ತು ಸಂರಕ್ಷಣಾ ಪ್ರಯತ್ನದಲ್ಲಿ ICAR–NBFGRನ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.