ಶಿವಮೊಗ್ಗ: ದ್ವಿತೀಯ ಪಿಯುಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ಶಿಕಾರಿಪುರದ ಕುಮದ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಎಂ.ಎಸ್.ಪವನ್ ರಾಜ್ಯಮಟ್ಟದಲ್ಲಿ ಎರಡನೇ ರ‍್ಯಾಂಕ್ ಪಡೆದಿದ್ದಾರೆ.

ಪವನ್ ಕುಮದ್ವತಿ ಬಿ.ಇಡಿ ಕಾಲೇಜಿನ ಪ್ರಾಧ್ಯಾಪಕ ಎಸ್.ಎಂ.ಮಂಜುನಾಥ್ ಹಾಗೂ ಅನಿತಾ ದಂಪತಿ ಪುತ್ರ.

ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಬೇಕು ಎಂಬ ಕನಸು ಹೊಂದಿರುವ ಪುತ್ರ 10ನೇ ತರಗತಿಯಲ್ಲಿ ಶೇ 97 ಅಂಕಗಳಿಸಿದ್ದರೂ ವಾಣಿಜ್ಯ ವಿಭಾಗದಲ್ಲಿ ಪ್ರವೇಶ ಪಡೆದಿದ್ದನು. ಈಗ ರ‍್ಯಾಂಕ್ ಗಳಿಸಿರುವುದು ಸಂತಸ ತಂದಿದೆ ಎಂದು ಪವನ್ ಅಮ್ಮ ಅನಿತಾ ಹೇಳಿದರು.

ದಿನಕ್ಕೆ ನಾಲ್ಕರಿಂದ ಐದು ತಾಸು ಮಾತ್ರ ಪವನ್ ನಿದ್ರೆ ಮಾಡುತ್ತಿದ್ದ. ಅವನ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ ಎಂದು ಸಂತಸ ಹಂಚಿಕೊಂಡರು.
.Karnataka 2nd PUC Results 2024: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ.Karnataka 2nd PUC Result 2024: ರಾಜ್ಯದ ಶೇ 81.15 ವಿದ್ಯಾರ್ಥಿಗಳು ಉತ್ತೀರ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.