ಬೆಂಗಳೂರು: 2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದೆ. ರಾಜ್ಯದಲ್ಲಿ ಒಟ್ಟು ಶೇ 81.15 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

6,81,079 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 5,52,690 ಮಂದಿ ತೇರ್ಗಡೆಯಾಗಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ 97.37 ಸಾಧನೆ ಮಾಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ.

ದ್ವಿತೀಯ ಪಿಯುಸಿ ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

https://karresults.nic.in

ಜಿಲ್ಲೆಗಳ ಶೇಕಡಾವಾರು ಫಲಿತಾಂಶ (ಹೊಸಬರು ಮಾತ್ರ)

ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ

ದ್ಚಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಕಾಯ್ದುಕೊಂಡಿದೆ. ಜಿಲ್ಲೆಯಲ್ಲಿ ಈ ಬಾರಿ ಶೇ 97.37 ಫಲಿತಾಂಶ ದಾಖಲಾಗಿದೆ. 21-22ನೇ ಸಾಲಿನಿಂದ ಸತತವಾಗಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. 2022-23 ನೆ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ 95.33 ಫಲಿತಾಂಶ, 2021-22 ನೇ ಸಾಲಿನಲ್ಲಿ ಶೇ 88.02 ಫಲಿತಾಂಶ ದಾಖಲಾಗಿತ್ತು. ಕೋವಿಡ್ 19 ಸಾಂಕ್ರಾಮಿಕದ ಕಾರಣಕ್ಕೆ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಂಡಿತ್ತು.

ಫಲಿತಾಂಶದ ಅಂಕಿಅಂಶಗಳು:

*ದ್ವಿತೀಯ ಪಿಯುಸಿ ಪರೀಕ್ಷೆ-1ನ್ನು ದಿನಾಂಕ: 01-03-2024 ರಿಂದ 22-03-2024 ರವರೆಗೆ ಒಟ್ಟು 1124 ಪರೀಕ್ಷಾ ಕೇಂದ್ರಗಳಲ್ಲಿ ರಾಜ್ಯಾದಂತ ನಡೆಸಲಾಯಿತು.

*ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಒಟ್ಟು 70 ಮೌಲ್ಯಮಾಪನ ಕೇಂದ್ರಗಳಲ್ಲಿ ದಿನಾಂಕ 25/03/2024 ರಿಂದ 03/04/2024 ರವರೆಗೆ 27,650 ಮೌಲ್ಯಮಾಪಕರಿಂದ ನಡೆಸಲಾಯಿತು.

*ಪರೀಕ್ಷೆಗೆ ಅರ್ಹರಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ: 6,98378

*ಎಲ್ಲಾ ವಿಷಯಗಳಿಗೆ ಗೈರುಹಾಜರಾದ ವಿದ್ಯಾರ್ಥಿಗಳ ಸಂಖ್ಯೆ: 17,299

*ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ: 6,81,079

*ತೇರ್ಗಡೆಯಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ: 5,52,690

* 2024ರಲ್ಲಿ ಶೇಕಡವಾರು ಉತ್ತೀರ್ಣತಾ ಪ್ರಮಾಣ 81.15% ಇದ್ದು, ಇದು 2023ರ ವರ್ಷದ ಉತ್ತೀರ್ಣತಾ ಪ್ರಮಾಣ 74.67% ಗಿಂತ 6.48%ರಷ್ಟು ಹೆಚ್ಚಿದೆ.

*ಫಲಿತಾಂಶವನ್ನು ಕಾಲೇಜುಗಳಲ್ಲಿ ಪ್ರಕಟಿಸುವ ದಿನಾಂಕ: 10-04-2024 ಮಧ್ಯಾಹ್ನ 3ಗಂಟೆಗೆ
.Karnataka 2nd PUC Results 2024: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ.ದ್ವಿತೀಯ ಪಿಯು ಕಲಾ ವಿಭಾಗ: ಮೂವರು ಟಾಪರ್ಗಳಲ್ಲಿ ಕೊಟ್ಟೂರಿನ ವಿದ್ಯಾರ್ಥಿನಿ.Karnataka 2nd PUC Results: ಬೀದರ್ ಜಿಲ್ಲೆ ಫಲಿತಾಂಶ ಹೆಚ್ಚಳ.ದ್ವಿತೀಯ ಪಿಯುಸಿ ಕಲಾ ವಿಭಾಗ: ಶಿವಮೊಗ್ಗದ ಕೆ.ಸಿ.ಚುಕ್ಕಿ 4ನೇ ರ್ಯಾಂಕ್.ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ: ಶಿಕಾರಿಪುರದ ಎಂ.ಎಸ್.ಪವನ್ಗೆ 2ನೇ ರ್ಯಾಂಕ್.Karnataka 2nd PUC Results 2024: ಈ ವರ್ಷವೂ ಉಡುಪಿಗೆ ದ್ವಿತೀಯ ಸ್ಥಾನ.ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ: ಜ್ಞಾನವಿ ರಾಜ್ಯಕ್ಕೆ ಪ್ರಥಮ.ಪಿಯು ಫಲಿತಾಂಶ: ಮೈಸೂರಿಗೆ 17ನೇ ಸ್ಥಾನ .ವಾಣಿಜ್ಯ ವಿಭಾಗ: ಮಂಗಳೂರು ವಿದ್ಯಾರ್ಥಿನಿ ತುಳಸಿ ಪೈ ರಾಜ್ಯಕ್ಕೆ ದ್ವಿತೀಯ.ದ್ವಿತೀಯ ಪಿಯು ಫಲಿತಾಂಶ: ವಿಜ್ಞಾನ –ವಿದ್ಯಾಲಕ್ಷ್ಮಿ ಪ್ರಥಮ.ಪಿಯು ವಿಜ್ಞಾನ: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಹುಬ್ಬಳ್ಳಿಯ ವಿದ್ಯಾಲಕ್ಷ್ಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.