ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂಥಾ ಮಾತು | ಪ್ರಮೋದ್‌ ಸಾವಂತ್‌ ಹಾಗೂ ಫಾರೂಕ್ ಅಬ್ದುಲ್ಲಾ ಹೇಳಿಕೆ

Published : 9 ಮೇ 2024, 0:10 IST
Last Updated : 9 ಮೇ 2024, 0:10 IST
ಫಾಲೋ ಮಾಡಿ
Comments
ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ ಕೂಡಲೇ ‘ಇಂಡಿಯಾ’ ಒಕ್ಕೂಟವು ನಾಶವಾಗಲಿದೆ. ಗೋವಾದಲ್ಲಿ ಇಂಡಿಯಾ ಒಕ್ಕೂಟದ ಜೊತೆಗಿರುವ ಕೆಲವು ಪ್ರಾದೇಶಿಕ ಪಕ್ಷಗಳು ಫಲಿತಾಂಶ ಬಂದ ಬಳಿಕ ಕಾಂಗ್ರೆಸ್‌ ಜೊತೆಗೆ ವಿಲೀನವಾಗಬಹುದು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಜೈಲಿನಲ್ಲಿರುವುದರಿಂದ ಎಎಪಿಗೆ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗದು
-ಪ್ರಮೋದ್‌ ಸಾವಂತ್‌, ಗೋವಾ ಮುಖ್ಯಮಂತ್ರಿ
ADVERTISEMENT
ಪ್ರಧಾನಿ ನರೇಂದ್ರ ಮೋದಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದ್ವೇಷ ಹರಡುತ್ತಿದ್ದಾರೆ. ಇದು ಭಾರತದ ಪ್ರಧಾನಿಗೆ ಯೋಗ್ಯವಾದ ಕೆಲಸವಲ್ಲ. ದೇಶದಿಂದ ಹೊರಗೆ ಹೋದಾಗ ಅವರು ಹಿಂದೂಗಳು, ಸಿಖ್ಖರು, ಮುಸ್ಲಿಮರು, ಬೌದ್ಧರು ಎಲ್ಲರ ಪ್ರಧಾನ ಮಂತ್ರಿ. ಆದರೆ, ಇಲ್ಲಿ ಮತ ಯಾಚನೆ ಮಾಡುವಾಗ ಅವರು ನಮ್ಮನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ. ಇದು ಗಾಂಧಿಯವರ ಅಥವಾ ನೆಹರೂ ಅವರ ಭಾರತವಲ್ಲ. ಇದು ಮೋದಿಯ ಭಾರತ. ಇಲ್ಲಿ ಮುಸ್ಲಿಮರು, ಹಿಂದೂಗಳು, ಸಿಖ್ಖರನ್ನು ಪ್ರತ್ಯೇಕ ಎಂದು ಪರಿಗಣಿಸಲಾಗುತ್ತದೆ. ನಾವು ಇದನ್ನು ಒಪ್ಪಿಕೊಳ್ಳುವುದಿಲ್ಲ
-ಫಾರೂಕ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT