ವಿಜಯವಾಡ (ಆಂಧ್ರಪ್ರದೇಶ): ಫಲವತ್ತಾದ ಮಣ್ಣು, ಹೇರಳ ನೀರು, ಫಸಲಿನ ಸಮೃದ್ಧಿ ಇದ್ದರೂ ಕೃಷ್ಣಾ ಜಿಲ್ಲೆಯ ಜನರ ಮನದಲ್ಲಿ ಕೊರಗಿದೆ. ರಾಜ್ಯ ವಿಭಜನೆ ಕಾರಣಕ್ಕಾಗಿ ಉಂಟಾಗಿರುವ ಈ ಕೊರಗು ಸಿಟ್ಟಾಗಿ ಪರಿವರ್ತನೆ ಆಗಿದೆ. ಆ ಸಿಟ್ಟು ರಾಷ್ಟ್ರೀಯ ಪಕ್ಷಗಳ ವಿರುದ್ಧ ತಿರುಗಿದೆ.

ಚುನಾವಣೆ ವಿಷಯ ಪ್ರಸ್ತಾಪಿಸುತ್ತಲೇ ‘ನೇರಾನೇರ ಸ್ಪರ್ಧೆ’ ಎನ್ನುತ್ತಾರೆ. ಯಾರ ನಡುವೆ ಎಂದು ಕೇಳುವ ಮೊದಲೇ ‘ತೆಲುಗುದೇಶಂ ಮತ್ತು ವೈಎಸ್ಆರ್ ಕಾಂಗ್ರೆಸ್ ಮಧ್ಯೆ’ ಎಂದು ಅವರೇ ಪ್ರತಿಕ್ರಿಯಿಸುತ್ತಾರೆ. ಅಪ್ಪಿತಪ್ಪಿಯೂ ಕಾಂಗ್ರೆಸ್ ಹೆಸರು ಪ್ರಸ್ತಾಪಿಸುವುದಿಲ್ಲ. ಇದು ಉದ್ದೇಶಪೂರ್ವಕವೂ ಆಗಿರಬಹುದು. ಇಲ್ಲವೇ ಬೇಸರದಿಂದಲೂ ಇರಬಹುದು. ನಾವಾಗಿಯೇ ಕೆದಕಿದರೂ ಉಪೇಕ್ಷೆಯ ಮುಖಭಾವ ತೋರುತ್ತಾರೆ.

‘ಖಾಲಿ ಕುಂಡಿಚ್ಚಿ ಚೇತುಲೆತ್ತಿಂದ ಕಾಂಗ್ರೆಸ್’ (ಖಾಲಿ ಕೊಡ ಕೊಟ್ಟು ಕೈಬಿಟ್ಟಿದೆ ಕಾಂಗ್ರೆಸ್) ಎಂದು ವಿಜಯವಾಡ ನಿವಾಸಿ ವಾಸು ಆಕ್ರೋಶ ವ್ಯಕ್ತಪಡಿಸಿದರು. ‘ಮದ್ರಾಸ್ನಿಂದ ಕರ್ನೂಲು, ಕರ್ನೂಲ್ನಿಂದ ಹೈದರಾಬಾದ್, ಹೈದರಾಬಾದ್ನಿಂದ ಎಲ್ಲಿಗೆ? ಸೀಮಾಂಧ್ರ ಜನರ ರಾಜಧಾನಿ ಕತೆ ಊರೂರು ತಿರುಗುವ ಸಂಚಾರಿ ಟೆಂಟ್ಗಿಂತ ಕಡೆಯಾಗಿದೆ’ ಎಂದು ಗುಡಿವಾಡ ಪಟ್ಟಣದ ಜೋಗಯ್ಯ ಶಾಸ್ತ್ರಿ ವ್ಯಥೆಪಟ್ಟರು.

ಕಾಂಗ್ರೆಸ್ಗೆ ‘ಶಾಪ’: ವಿಭಜನೆ ಬಗ್ಗೆ ಅನೇಕರಿಗೆ ತಕರಾರಿಲ್ಲ. ‘ಈ ರಾದ್ಧಾಂತ ಹೇಗೋ ಇತ್ಯರ್ಥವಾಗಿದೆ. ಇನ್ನಾದರೂ ನೆಮ್ಮದಿಯಿಂದ ಇರಬಹುದು’ ಎಂದು ಕೆಲವರು ಪ್ರತಿಕ್ರಿಯಿಸುತ್ತಾರೆ. ಆದರೆ, ವಿಭಜಿಸಿದ ರೀತಿ ಕುರಿತು ತೀವ್ರ ಅಸಮಾಧಾನ ಇದೆ. ಸೀಮಾಂಧ್ರಕ್ಕೆ ರಾಜಧಾನಿ ಸ್ಥಳವನ್ನೂ ಗುರುತಿಸದೆ ತರಾತುರಿಯಲ್ಲಿ ತೀರ್ಮಾನ ಕೈಗೊಳ್ಳುವ ಅಗತ್ಯ ಇತ್ತೇ ಎಂದು ಪ್ರಶ್ನಿಸುತ್ತಾರೆ. ಈ ಅಸಮಾಧಾನ ಈಗಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ‘ಶಾಪ’ವಾಗಿ ಪರಿಣಮಿಸುವ ಸ್ಪಷ್ಟ ಸೂಚನೆಗಳು ಗೋಚರಿಸುತ್ತವೆ.

1953ರವರೆಗೂ ಈಗಿನ ಸೀಮಾಂಧ್ರ ಪ್ರಾಂತ್ಯ ಅಖಂಡ ಮದ್ರಾಸ್ ರಾಜ್ಯದ ಭಾಗವಾಗಿತ್ತು. ಅದರ ರಾಜಧಾನಿಯೂ ಮದ್ರಾಸ್ ಆಗಿತ್ತು. 1953ರಲ್ಲಿ ಸೀಮಾಂಧ್ರ ಅಲ್ಲಿಂದ ಪ್ರತ್ಯೇಕಗೊಂಡಾಗ ರಾಯಲಸೀಮದ ಕರ್ನೂಲು ರಾಜಧಾನಿಯಾಯಿತು. 1956ರಲ್ಲಿ ಸೀಮಾಂಧ್ರದೊಂದಿಗೆ ತೆಲಂಗಾಣ ಸೇರಿಕೊಂಡ ಕಾರಣ ರಾಜಧಾನಿ ಹೈದರಾಬಾದ್ಗೆ ಸ್ಥಳಾಂತರಗೊಂಡಿತು. ವಿಭಜನೆಯಿಂದಾಗಿ ಹೈದರಾಬಾದ್ ತೆಲಂಗಾಣಕ್ಕೆ ಸೇರಲಿದೆ. ಸೀಮಾಂಧ್ರ ರಾಜಧಾನಿಗೆ ಸ್ಥಳ ಗುರುತಿಸಲು ಹುಡುಕಾಟ ನಡೆದಿದೆ.

ಕೃಷ್ಣನ್ ಸಮಿತಿ ರಚನೆ: ಸ್ಥಳ ಗುರುತಿಸಲು ನಿವೃತ್ತ ಐ.ಎ.ಎಸ್. ಅಧಿಕಾರಿ ಶಿವರಾಮ ಕೃಷ್ಣನ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ಆ ಸಮಿತಿ ಈಚೆಗೆ ವಿಜಯವಾಡಕ್ಕೂ ಬಂದು ಪರಿಶೀಲಿಸಿದೆ. ವಿಜಯವಾಡ–ಗುಂಟೂರು ಮಧ್ಯೆ ರಾಜಧಾನಿ ನಿರ್ಮಿಸುವುದು ಸೂಕ್ತ ಎಂಬ ಮಾತು ಕೇಳಿಬಂದಿರುವ ಕಾರಣ ಈ ಭಾಗದ ಜನರಲ್ಲೂ ಆಸಕ್ತಿ ಕೆರಳಿದೆ. ಈ ನಿರೀಕ್ಷೆಯಿಂದಲೇ ಈ ಭಾಗದಲ್ಲಿ ಭೂಮಿ ಖರೀದಿ ವ್ಯವಹಾರ ಜೋರು ಪಡೆದಿದೆಯಂತೆ.

ಹೊಸ ರಾಜಧಾನಿ: ರಾಜಧಾನಿಯಾಗಲು ಅರ್ಹತೆ ಹೊಂದಿದ ನಗರಗಳಲ್ಲಿ ಕೃಷ್ಣಾ ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿ ವಿಜಯವಾಡ ಕೂಡ ಒಂದು. ದೇಶದ ಎರಡನೇ ಅತಿದೊಡ್ಡ ರೈಲ್ವೆ ಜಂಕ್ಷನ್ ಇಲ್ಲಿದ್ದು, ದೇಶದ ನಾಲ್ಕೂ ದಿಕ್ಕುಗಳಿಗೆ ರೈಲು ಸಂಪರ್ಕ ಕಲ್ಪಿಸಿದೆ. ಪ್ರತಿದಿನ 375ಕ್ಕೂ ಹೆಚ್ಚು ರೈಲುಗಳು ಬಂದುಹೋಗುತ್ತವೆ. ಬೃಹತ್ ಬಸ್ ನಿಲ್ದಾಣ ಇದೆ. ನಗರದಿಂದ 16 ಕಿ.ಮೀ. ದೂರದ ಗನ್ನವರಂ ಬಳಿ ವಿಮಾನ ನಿಲ್ದಾಣ ಇದೆ. ನೀರಿನ ದಾಹ ತೀರಿಸಲು ಕೃಷ್ಣಾ ನದಿ ಬೆನ್ನಿಗಿದೆ. ಇದಕ್ಕೆ ತಾಕಿಕೊಂಡೇ ಗುಂಟೂರು ಜಿಲ್ಲೆ ಇದೆ. ಗುಂಟೂರಿನಿಂದ 17 ಕಿ.ಮೀ. ಹಾಗೂ ವಿಜಯವಾಡದಿಂದ 20 ಕಿ.ಮೀ. ಅಂತರದಲ್ಲಿ ನಾಗಾರ್ಜುನ ವಿಶ್ವವಿದ್ಯಾಲಯದ ಕ್ಯಾಂಪಸ್ ಇದೆ. ಹೊಸ ರಾಜಧಾನಿಗೆ ಈ ಜಾಗ ಪರಿಗಣಿಸುವ ಸಾಧ್ಯತೆಗಳಿವೆ ಅಂತ ಗುಲ್ಲು ಹಬ್ಬಿದೆ.

ಕೃಷ್ಣಾ ಜಿಲ್ಲೆಯ ಪರಿಧಿಯಲ್ಲಿ ಎರಡು ಲೋಕಸಭಾ ಕ್ಷೇತ್ರ ಹಾಗೂ 16 ವಿಧಾನಸಭಾ ಕ್ಷೇತ್ರಗಳಿವೆ. ವಿಜಯವಾಡ ನಗರದಲ್ಲಿನ ಮೂರು ಕ್ಷೇತ್ರಗಳಲ್ಲಿ ಟಿಡಿಪಿಯು ಒಂದನ್ನು ಬಿಜೆಪಿಗೆ ಬಿಟ್ಟುಕೊಟ್ಟಿದೆ. ತೆಲಂಗಾಣ ಜಿಲ್ಲೆಗಳಲ್ಲಿ ಬಹುಮುಖ ಸ್ಪರ್ಧೆಯಿಂದ ಮತದಾರರಲ್ಲಿ ಗೊಂದಲ ಮೂಡಿತ್ತು. ಅಂತಹ ಗೊಂದಲ ಇಲ್ಲಿ ಇಲ್ಲ. ಎರಡು ಪ್ರಾದೇಶಿಕ ಪಕ್ಷಗಳ ನಡುವೆ ಆಯ್ಕೆ ಎಂದು ಜನರು ತೀರ್ಮಾನಿಸಿಬಿಟ್ಟಂತಿದೆ. ಒಂದೆರಡು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇರುವುದು ಬಿಟ್ಟರೆ ಉಳಿದ ಕಡೆ ಟಿಡಿಪಿ, ವೈಎಸ್ಆರ್ ಕಾಂಗ್ರೆಸ್ ನಡುವೆ ನೇರ ಮತ್ತು ಸಮಬಲದ ಸ್ಪರ್ಧೆ ಇದೆ.

‘ಪೆಪ್ಪರ್ ಸ್ಪ್ರೇ’ ಲಗಡಪಾಟಿ ಕಣದಿಂದ ಹಿಂದೆ: ವಿಜಯವಾಡ ಲೋಕಸಭಾ ಕ್ಷೇತ್ರವನ್ನು ಸತತ ಎರಡು ಬಾರಿ ಪ್ರತಿನಿಧಿಸಿದ ಲಗಡಪಾಟಿ ರಾಜಗೋಪಾಲ್ ಈ ಸಲ ಕಣದಿಂದ ಹಿಂದೆ ಸರಿದಿದ್ದಾರೆ. ವಿಭಜನೆ ವಿರೋಧಿಸಿ ಲೋಕಸಭೆಯಲ್ಲಿ ನಡೆದ ಗದ್ದಲದಲ್ಲಿ ‘ಪೆಪ್ಪರ್ ಸ್ಪ್ರೇ’ ಬಳಸಿ ಛೀಮಾರಿ ಹಾಕಿಸಿಕೊಂಡ ಇವರನ್ನು ಸ್ಥಳೀಯರು ಆ ಕಾರಣಕ್ಕೂ ಸ್ಮರಿಸುತ್ತಿಲ್ಲ. ಅಭಿವೃದ್ಧಿ ಕಾರ್ಯಗಳ ನೆಲೆಯಲ್ಲೂ ನೆನೆಯುತ್ತಿಲ್ಲ. ವಿಜಯವಾಡದಿಂದ ಈ ಬಾರಿ ಟಿಡಿಪಿಯಿಂದ ಕೇಶಿನೇನಿ ನಾನಿ, ವೈಎಸ್ಆರ್ ಕಾಂಗ್ರೆಸ್ನಿಂದ ಕೋನೇರು ಪ್ರಸಾದ್, ಕಾಂಗ್ರೆಸ್ನಿಂದ ದೇವಿನೇನಿ ಅವಿನಾಶ್ ಸ್ಪರ್ಧಿಸಿದ್ದಾರೆ.

ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಏಳು ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಅದರಲ್ಲಿ ಮೂರು ವಿಜಯವಾಡ ನಗರ ಪರಿಧಿಯಲ್ಲಿವೆ. ಸುಮಾರು ಶೇ 60ರಷ್ಟು ಮತಗಳು ನಗರದಲ್ಲೇ ಇರುವುದರಿಂದ ಎಲ್ಲ ಪಕ್ಷಗಳೂ ನಗರದ ಕಡೆಗೇ ಹೆಚ್ಚು ದೃಷ್ಟಿ ಹರಿಸಿವೆ.
ಉದ್ಯಮ, ವ್ಯಾಪಾರ ರಂಗದಲ್ಲಿ ವಿಜಯ ಪತಾಕೆ ಹಾರಿಸಿದ ದೊಡ್ಡ ಕುಳಗಳಿಗೇ ಪ್ರಮುಖ ಪಕ್ಷಗಳು ಟಿಕೆಟ್ ನೀಡಿವೆ. ಕೋನೇರು ಪ್ರಸಾದ್ ಉದ್ಯಮಿ. ಕೇಶಿನೇನಿ ನಾನಿ ಅವರು ಟ್ರಾವೆಲ್ಸ್್ ಕಂಪೆನಿ ಹೊಂದಿದ್ದಾರೆ. ಪ್ರಚಾರ ಜೋರು ಪಡೆದಿದೆ. ಕೃಷ್ಣಾ, ಗುಂಟೂರು, ಪ್ರಕಾಶಂ ಜಿಲ್ಲೆಗಳಲ್ಲಿ ಕಣದಲ್ಲಿ ಇರುವ ಕೆಲವು ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿ, ಅನಿವಾಸಿ ಭಾರತೀಯರೂ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರಂತೆ.

ಕೃಷ್ಣಾ ಜಿಲ್ಲೆಯ ಪ್ರಧಾನ ಕಚೇರಿಗಳು ಮಚಲಿಪಟ್ಟಣಂನಲ್ಲಿವೆ. ಈ ಭಾಗದಲ್ಲಿರುವ ಮತ್ಸ್ಯಕಾರರ ಮತಗಳಿಗೂ ಪಕ್ಷಗಳು ಬಲೆ ಬೀಸಿವೆ. ಜಿಲ್ಲೆಯಲ್ಲಿ ಆರು ಸಾವಿರಕ್ಕೂ ಹೆಚ್ಚು ಮತ್ಸ್ಯಕಾರ ಕುಟುಂಬಗಳಿವೆ ಎಂದು ಲೆಕ್ಕ ಇಟ್ಟಿವೆ ಪಕ್ಷಗಳು. ಪ್ರತಿವರ್ಷ ಏಪ್ರಿಲ್– ಮೇ ನಡುವಣ ಅವಧಿಯಲ್ಲಿ ಒಂದೂವರೆ ತಿಂಗಳು ಸಮುದ್ರದಲ್ಲಿ ಮೀನು ಬೇಟೆಯನ್ನು ನಿಷೇಧಿಸುವುದು ರೂಢಿ. ಈ ಸಂದರ್ಭದಲ್ಲಿ ಕೆಲಸ ಅರಸಿ ಮತ್ಸ್ಯಕಾರ ಕುಟುಂಬಗಳು ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗುತ್ತವೆ. ಇವರ ವೋಟಿನ ಮೇಲೆ ಕಣ್ಣಿಟ್ಟಿರುವ ಪಕ್ಷಗಳು ‘ಎಲ್ಲಿಗೂ ಹೋಗಬೇಡಿ. ನಿಮ್ಮ ಯೋಗಕ್ಷೇಮ ನೋಡಿಕೊಳ್ಳುತ್ತೇವೆ’ ಎಂದು ವಚನ ನೀಡಿ, ಅವರನ್ನು ಇಲ್ಲೇ ಇರಿಸಿಕೊಂಡಿವೆ.

ಸುಶಿಕ್ಷಿತರ ಒಲವು ಟಿಡಿಪಿ ಕಡೆಗೆ: ಸುಶಿಕ್ಷಿತ ಮತದಾರರಲ್ಲಿ ತುಸು ಹೆಚ್ಚಿನ ಮಂದಿ ಟಿಡಿಪಿ ಕಡೆ ಒಲವು ತೋರುತ್ತಾರೆ. ನಾರಾ ಚಂದ್ರಬಾಬು ನಾಯ್ಡು ಅವರ ‘ಅನುಭವ ಮತ್ತು ಆಡಳಿತ ದಕ್ಷತೆ’, ವಿಭಜನಾನಂತರದ ಸೀಮಾಂಧ್ರದ ಅಭಿವೃದ್ಧಿಗೆ ಅವಶ್ಯ ಎನ್ನುತ್ತಾರೆ. ಹೊಸ ರಾಜಧಾನಿ ನಿರ್ಮಿಸಲು, ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಅವರೇ ಸಮರ್ಥರು ಎಂದು ಪಕ್ಷದ ಕಟ್ಟಾ ಅಭಿಮಾನಿಗಳಂತೆ ಕೆಲವರು ವಾದಿಸುತ್ತಾರೆ.

ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರಿಗೆ ಒಂದು ಸಲ ಅವಕಾಶ ನೀಡಬೇಕು ಎಂದು ಒಂದು ವರ್ಗದ ಜನರು ಪ್ರತಿಪಾದಿಸುತ್ತಾರೆ. ಇವರ ತಂದೆ ವೈ.ಎಸ್.ರಾಜಶೇಖರ ರೆಡ್ಡಿ ಅವರ ಆಡಳಿತ ಅವಧಿಯಲ್ಲಿ ಜಾರಿಗೆ ಬಂದ ರಾಜೀವ್ ಆರೋಗ್ಯಶ್ರೀ ಅಂತಹ ಜನಪರ ಕಾರ್ಯಕ್ರಮಗಳನ್ನು ಇವರ ನಿಷ್ಠರು ಸಮರ್ಥನೆಗೆ ಬಳಸುತ್ತಾರೆ. ಜಗನ್ ವಿರುದ್ಧ ಇರುವ ಅಕ್ರಮ ಆಸ್ತಿ ಸಂಪಾದನೆ ಕುರಿತ ಆರೋಪಗಳ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚಿನ ಸ್ಪಂದನ ಇಲ್ಲ. ಆದರೆ ವಿದ್ಯಾವಂತರಲ್ಲಿ ಸ್ವಲ್ಪಮಟ್ಟಿಗೆ ಸಿಟ್ಟಿದೆ.

ಕೃಷ್ಣೆಯ ಕೃಪೆಯಿಂದ ಜಿಲ್ಲೆಯಲ್ಲಿ ಸಮೃದ್ಧಿ ಇದೆ. ಕೊಂಡಪಲ್ಲಿಯಲ್ಲಿ 1,760 ಮೆಗಾವಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಇದೆ. ಭತ್ತ, ಕಬ್ಬು ಪ್ರಮುಖ ಬೆಳೆಗಳು. ಸರಕು ಸಾಗಣೆ ಕ್ಷೇತ್ರದಲ್ಲಿ ವಿಜಯವಾಡ ಮುಂಚೂಣಿ ನಗರ. ಒಂದು ಕಾಲದಲ್ಲಿ ರೌಡಿ ಚಟುವಟಿಕೆಗಳಿಂದ ಕುಖ್ಯಾತಿಯನ್ನೂ ಪಡೆದಿತ್ತು. ತೆಲುಗು ಸಿನಿಮಾ ಕತೆಗಳಿಗೆ ಪ್ರೇರಣೆ ಕೂಡ ಆಗಿತ್ತು. ಆದರೆ ‘ಆ ಹಾವಳಿ ಈಗ ಇಲ್ಲ’ ಎಂದು ಆಗಿನ ‘ಸೆಟ್ಲ್ಮೆಂಟ್’ ದಂಧೆಯನ್ನು ಕಣ್ಣಾರೆ ಕಂಡಿರುವ ಟ್ಯಾಕ್ಸಿ ಚಾಲಕ ಅಬ್ದುಲ್ ರೆಹಮಾನ್ ನಿಟ್ಟುಸಿರು ಬಿಟ್ಟರು.

‘ಸರಕು ಸಾಗಣೆ ಲಾರಿಗಳು ನಗರದ ಹೊರಗೇ ಹೋಗಲು ಅನುವಾಗಿಸುವ ಬೈಪಾಸ್ ರಸ್ತೆ ವಿಜಯವಾಡಕ್ಕೆ ತುರ್ತು ಅಗತ್ಯ’ ಎಂದೂ ಅಭಿಪ್ರಾಯಪಟ್ಟರು. ಅಭಿವೃದ್ಧಿಯಲ್ಲಿ ಈ ಭಾಗದಲ್ಲಿಯೂ ಅಸಮತೋಲನ ಇದೆ. ಗುಡಿವಾಡ ಅಂತಹ ಪ್ರಮುಖ ತಾಲ್ಲೂಕು ಕೇಂದ್ರಗಳು ನೈರ್ಮಲ್ಯ, ಮೂಲ ಸೌಕರ್ಯದ ಕೊರತೆ ಎದುರಿಸುತ್ತಿವೆ. ಕೆಲವೆಡೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲೂ ಆಗಿಲ್ಲ. ಸಂಪತ್ತು ಕೆಲವರಲ್ಲೇ ಕೇಂದ್ರೀಕೃತವಾಗುತ್ತಿರುವಂತೆ ಅಭಿವೃದ್ಧಿ ಕಾರ್ಯಗಳೂ ಕೆಲವೇ ನಗರಗಳಿಗೆ ಸೀಮಿತವಾಗುತ್ತಿರುವುದು ವಿಪರ್ಯಾಸದ ಸಂಗತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.