ಬಳ್ಳಾರಿ: ಹೊಸಪೇಟೆ ಬಿಜೆಪಿ ಶಾಸಕ ಆನಂದ್ ಸಿಂಗ್ ಅವರು ಶಾಸಕ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ. ಸಿಂಗ್ ಅವರು ಇಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿಗೆ ತೆರಳಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.

ಈ ಮೊದಲೇ ಹೇಳಿದ್ದರು:
ಜನವರಿ 26, ಗುರುವಾರ ಆಯೋಜಿಸಿದ್ದ ನಾನಾ ಸಮಾಜಗಳ ಮುಖಂಡರ ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಸಿಂಗ್, 'ಯಾವ ಪಕ್ಷದಿಂದ ಸ್ಪರ್ಧಿಸುವೆ ಎಂಬುದನ್ನು ಕೆಲವೇ ದಿನಗಳಲ್ಲಿ ತಿಳಿಸುವೆ. ಕ್ಷೇತ್ರದಲ್ಲಿ ಸ್ಪರ್ಧಿಸುವುದು ಖಚಿತ. ಹ್ಯಾಟ್ರಿಕ್ ಗೆಲುವು ದಾಖಲಿಸುವೆ. ಮಾನವ ಧರ್ಮವೇ ನನಗೆ ದೊಡ್ಡ ತತ್ತ್ವವಾಗಿದೆ. ರಾಜಕೀಯ ನಿರ್ಧಾರದಿಂದ ಬಲಿಪಶುವಾಗುವೆ ಎಂಬುದು ನನಗೆ ತಿಳಿದಿದೆ. ಆದರೆ, ಬಲಿಪಶುವಾಗುವುದಕ್ಕಿಂತ ಜಾತ್ಯತೀತವಾದಿಯಾಗಿ ಉಳಿಯುವೆ. ಎಲ್ಲ ಸಮಾಜದವರನ್ನು ಜತೆಗೆ ಕರೆದುಕೊಂಡು ಹೋಗುವೆ. ಜಾತ್ಯತೀತ ತತ್ತ್ವದಲ್ಲಿ ನನಗೆ ನಂಬಿಕೆ ಇದೆ'' ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.