ನವದೆಹಲಿ: ಎಎಪಿಯ ‘ಜೈಲ್ ಕಾ ಜವಾಬ್ ವೋಟ್ ಸೆ’ (ಜೈಲಿಗೆ ಹಾಕಿದ್ದಕ್ಕೆ ಮತದ ಮೂಲಕ ಉತ್ತರಿಸಿ) ಚುನಾವಣಾ ಪ್ರಚಾರ ಅಭಿಯಾನದ ಮುಂದಿನ ಹಂತವು ಮೇ 13ರಂದು ಆರಂಭವಾಗಲಿದೆ ಎಂದು ಪಕ್ಷದ ಮುಖಂಡ ಗೋಪಾಲ್ ರಾಯ್ ಬುಧವಾರ ತಿಳಿಸಿದರು.

ಅಭಿಯಾನದ ಅಂಗವಾಗಿ ದೆಹಲಿಯ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ‘ಮಹಿಳಾ ಸಂವಾದ’ ಮತ್ತು ‘ಟ್ರೇಡ್ ಟೌನ್ ಹಾಲ್’ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರ ರೋಡ್ ಶೋ ಸೇರಿದಂತೆ ವಿವಿಧ ಪ್ರಚಾರ ಕಾರ್ಯಕ್ರಮಗಳು ನಡೆಯಲಿವೆ ಎಂದಿದ್ದಾರೆ.

ದೆಹಲಿಯ ಲೋಕಸಭಾ ಕ್ಷೇತ್ರಗಳಿಗೆ ಮೇ 25ರಂದು ಮತದಾನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.