ನವದೆಹಲಿ: ಕಚ್ಚತೀವು ದ್ವೀಪ ವಿಷಯ ಮುಗಿದು ಹೋದ ಅಧ್ಯಾಯ. ಚುನಾವಣೆ ಸಮೀಪಿಸುತ್ತಿರುವಾಗ ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಚಿದಂಬರಂ ಹೇಳಿದರು.

ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ಪ್ರಸ್ತಾಪಿಸಿ ಅವರು ಮಾತನಾಡಿದರು.

ಗಡಿಯಲ್ಲಿ ಭಾರತದ ಭೂಪ್ರದೇಶಗಳನ್ನು ಚೀನಾ ಆಕ್ರಮಿಸಿಕೊಳ್ಳುತ್ತಿದ್ದು ದೇಶದ ಜನರ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ ಕಚ್ಚತೀವು ದ್ವೀಪದ ವಿಷಯವನ್ನು ಚುನಾವಣೆ ಕಾರಣಗಳಿಗೆ ಎತ್ತುತ್ತಿದೆ ಎಂದು ಚಿದಂಬರಂ ಹೇಳಿದರು.
.ಕಚ್ಚತೀವು ವಿಚಾರದಿಂದ ಭಾರತ–ಶ್ರೀಲಂಕಾ ಬಾಂಧವ್ಯಕ್ಕೆ ಧಕ್ಕೆ: ಯಶವಂತ ಸಿನ್ಹಾ.ಕಚ್ಚತೀವು ಕುರಿತು ಮತ್ತೆ ಪ್ರಸ್ತಾಪ: ಕಾಂಗ್ರೆಸ್, DMK ವಿರುದ್ಧ ಮೋದಿ ವಾಗ್ದಾಳಿ.
ಈ ವಿಷಯ ಭಾರತ ಮತ್ತು ಶ್ರೀಲಂಕಾ ನಡುವಿನ ಬಾಂಧವ್ಯ ಹಾಗೂ ಅಲ್ಲಿನ ತಮಿಳು ಭಾಷಿಕರ ಮೇಲೂ ಗಂಭೀರ ಪರಿಣಾಮ ಬೀರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಚ್ಚತೀವು ದ್ವೀಪದ ವಿಷಯ ಮುಗಿದು ಹೋದ ಅಧ್ಯಾಯವಾಗಿದೆ. 50 ವರ್ಷಗಳ ಹಿಂದೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಧಾನಿ ಮೋದಿ 2014ರಿಂದ ಅಧಿಕಾರದಲ್ಲಿದ್ದಾರೆ. ಕಳೆದ 10 ವರ್ಷಗಳಲ್ಲಿ ಅವರು ಈ ವಿಷಯವನ್ನು ಏಕೆ ಎತ್ತಲಿಲ್ಲ? ಎಂದು ಪ್ರಶ್ನೆ ಮಾಡಿದರು.

ಲಂಕಾದಲ್ಲಿರುವ ತಮಿಳು ಭಾಷಿಕರ ಮೇಲೆ ಗಂಭೀರ ಪರಿಣಾಮಗಳಾಗಲಿವೆ ಎಂಬುದು ಮೋದಿ ಮತ್ತು ಮಂತ್ರಿಗಳಿಗೆ ಗೊತ್ತಿದ್ದರೂ ಅವರು ಈ ವಿಷಯವನ್ನು ಪ್ರಸ್ತಾಪ ಮಾಡಿದ್ದು ಖಂಡನೀಯ ಎಂದು ಚಿದಂಬರಂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.