ಅಗರ್ ಮಾಲ್ವಾ: ‘ಲೋಕಸಭಾ ಚುನಾವಣೆಗೆ ಮಧ್ಯಪ್ರದೇಶದ ರಾಜಗಢ ಕ್ಷೇತ್ರದಿಂದ 400 ಮಂದಿ ಅಭ್ಯರ್ಥಿಗಳು ಕಣಕ್ಕಿಳಿದರೆ, ಮತದಾನವು ಮತಪತ್ರಗಳ ಮೂಲಕ ನಡೆಯಲಿದೆ. ಇದಕ್ಕಾಗಿ ಶ್ರಮಿಸುತ್ತಿದ್ದೇನೆ’ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ ಸಿಂಗ್ ಭಾನುವಾರ ತಿಳಿಸಿದರು.

ಕಚ್ನಾರಿಯಾ ಗ್ರಾಮದಲ್ಲಿ ಸಭೆಯೊಂದರಲ್ಲಿ ಭಾಗವಹಿಸಿದ್ದ ಅವರು, ‘ನೀವು ಇವಿಎಂ ಮೂಲಕ ಮತದಾನ ಮಾಡಲು ಬಯಸುವಿರಾ ಅಥವಾ ಮತಪತ್ರದ ಮೂಲಕ ಮಾಡುವಿರಾ’ ಎಂದು ಸಭಿಕರನ್ನು ಪ್ರಶ್ನಿಸಿದರು. ಆಗ ಸಭಿಕರು ಮತಪತ್ರದ ಮೂಲಕ ಮತದಾನ ಮಾಡಲು ಬಯಸುವುದಾಗಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಂಗ್, ‘ಒಂದು ಕ್ಷೇತ್ರದಲ್ಲಿ ನೋಟಾ ಸೇರಿದಂತೆ ಅಭ್ಯರ್ಥಿಗಳ ಸಂಖ್ಯೆ 384 ದಾಟಿದರೆ ಇವಿಎಂ ಮೂಲಕ ಮತದಾನ ನಡೆಸಲು ಸಾಧ್ಯವಿಲ್ಲ. ಮತಪತ್ರದ ಮೂಲಕ ಮತದಾನ ನಡೆಸಬೇಕಾಗುತ್ತದೆ’ ಎಂದರು. ದಿಗ್ವಿಜಯ್ ಅವರು ಹಿಂದಿನಿಂದಲೂ ಇವಿಎಂಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.