ಮಡಿಕೇರಿ: ‘ಆದಾಯ ತೆರಿಗೆ ಇಲಾಖೆಯು ಸ್ವಾಯತ್ತ ಸಂಸ್ಥೆಯಾಗಿದ್ದು ಅದಕ್ಕೆ ತನ್ನದೇ ಅಧಿಕಾರವಿದೆ. ಹೀಗಾಗಿ, ಚುನಾವಣೆ ಹೊತ್ತಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಬೇಕೊ? ನಡೆಸಬಾರದು ಎನ್ನುವ ಪ್ರಶ್ನೆ ಬರುವುದಿಲ್ಲ. ದಾಳಿಯನ್ನೇ ನಡೆಸಬಾರದು ಎನ್ನುವ ಹೇಳಿಕೆಯೇ ತಪ್ಪು' ಎಂದು ಕೊಡಗು–ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಗುರುವಾರ ಇಲ್ಲಿ ಐಟಿ ದಾಳಿಯನ್ನು ಸಮರ್ಥಿಸಿಕೊಂಡರು.

‘ಎರಡು ಬಾರಿ ಸಂಸದನಾಗಿ ಜವಾಬ್ದಾರಿ ನಿರ್ವಹಿಸಿದ್ದು, ಐಟಿ ದಾಳಿ ನಡೆಸಬಾರದೆಂದು ನಾನು ಹೇಳುವುದಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಹೇಳಿಕೆ ಪರಿಣಾಮದ ಬಗ್ಗೆ ಕೊನೆಯಲ್ಲಿ ಎಚ್ಚೆತ್ತುಕೊಂಡ ವಿಜಯಶಂಕರ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ಇದು ದುರುದ್ದೇಶದ ದಾಳಿ’ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಪ್ರಯತ್ನಿಸಿದರು.

‘ದಾಳಿಯ ಹಿಂದೆ ಸದುದ್ದೇಶವಿದೆಯೊ? ದುರುದ್ದೇಶವಿದೆಯೊ? ಎಂಬುದನ್ನು ರಾಜ್ಯದ ಜನರು ನಿರ್ಧರಿಸಲಿದ್ದಾರೆ. ಕೇಂದ್ರದ ಆದೇಶದಂತೆಯೇ ಒಂದು ಪಕ್ಷದ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಕೇಂದ್ರದ ಆದೇಶನ್ನು ಐಟಿ ಅಧಿಕಾರಿಗಳಿಗೆ ಧಿಕ್ಕರಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ಚುನಾವಣೆ ಕಾಲದಲ್ಲಿ ಈ ದಾಳಿ ಆಗಿರುವುದು ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ. ಈ ಹಿಂದಿನ ದಾಳಿಯಲ್ಲೂ ಇಂಥದ್ದೇ ಗೊಂದಲಕಾರಿ ಸನ್ನಿವೇಶ ಸೃಷ್ಟಿಯಾಗಿತ್ತು’ ಎಂದು ತಿಳಿಸಿದರು.

‘ಐಟಿ ದಾಳಿ ವಿಚಾರವಾಗಿ ಜನರ ಮನಸ್ಸಿನಲ್ಲಿ ಸಂಶಯ ಮೂಡಿದ್ದು ಅಧಿಕಾರದಲ್ಲಿರುವ ವ್ಯಕ್ತಿಗಳು ಅದಕ್ಕೆ ಸ್ಪಷ್ಟನೆ ನೀಡಬೇಕು.ಕೇಂದ್ರವು ತಾರತಮ್ಯ ಧೋರಣೆ ಅನುಸರಿಸುತ್ತಿದ್ದು, ಈ ಚುನಾವಣಾ ಫಲಿತಾಂಶದಲ್ಲಿ ತಿಳಿಯಲಿದೆ’ ಎಂದು ವಿಜಯಶಂಕರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.