ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Election Results: ಹೊಸ ಕ್ಷೇತ್ರದಲ್ಲೂ ಹಸನಾದ ಭವಿಷ್ಯ

Published 5 ಜೂನ್ 2024, 0:37 IST
Last Updated 5 ಜೂನ್ 2024, 0:37 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರ ಬದಲಿಸಿದ್ದ ಹಲವು ಅಭ್ಯರ್ಥಿಗಳು ಹೊಸ ಕ್ಷೇತ್ರದಲ್ಲೂ ತಮ್ಮ ರಾಜಕೀಯ ಭವಿಷ್ಯ ಹಸನಾಗಿಸಿಕೊಂಡಿದ್ದಾರೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರೋಧದ ಅಲೆಯ ಕಾರಣ ಉಡುಪಿ–ಚಿಕ್ಕಮಗಳೂರು ತೊರೆದು ಬೆಂಗಳೂರು ಉತ್ತರದಿಂದ ಸ್ಪರ್ಧಿಸಿ ಯಶಸ್ಸು ಕಂಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ವರುಣ ಹಾಗೂ ಚಾಮರಾಜ ನಗರದಿಂದ ಸ್ಪರ್ಧಿಸಿದ್ದ ವಿ. ಸೋಮಣ್ಣ ಎರಡೂ ಕ್ಷೇತ್ರಗಳಲ್ಲೂ ಸೋಲು ಕಂಡಿದ್ದರು. ಅವರಿಗೆ ತುಮಕೂರಿನಿಂದ ಬಿಜೆಪಿ ಟಿಕೆಟ್‌ ನೀಡಿತ್ತು. ಸೋಮಣ್ಣ ಗೆಲುವು ಕಂಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ನಿರಾಕರಿಸಿದ್ದನ್ನು ಖಂಡಿಸಿ ಪಕ್ಷ ತೊರೆದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮತ್ತೆ ಪಕ್ಷಕ್ಕೆ ಮರಳಿದ್ದರು. ಬೆಳಗಾವಿ ಲೋಕಸಭಾ ಟಿಕೆಟ್‌ ನೀಡಲಾಗಿತ್ತು. ಕ್ಷೇತ್ರ ಬದಲಿಸಿದರೂ ವಿಜಯಲಕ್ಷ್ಮಿ ಕೈಹಿಡಿದಿದ್ದಾಳೆ.

ಬಾಗಲಕೋಟೆಯವರಾದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಚಿತ್ರದುರ್ಗದಿಂದ ಕಣಕ್ಕೆ ಇಳಿದಿದ್ದರು. ಅವರು ಕಾಂಗ್ರೆಸ್‌ನ ಮಾಜಿ ಸಂಸದ ಚಂದ್ರಪ್ಪ ವಿರುದ್ಧ ಗೆಲುವು ಸಾಧಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್‌ ಸೋಲಿನ ಬಳಿಕ ಬೇಸರಗೊಂಡಿದ್ದ ಎಚ್‌.ಡಿ. ಕುಮಾರಸ್ವಾಮಿ ಈ ಬಾರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮಂಡ್ಯದಿಂದ ತಾವೇ ಸ್ಪರ್ಧೆಗೆ ಇಳಿದಿದ್ದರು. ಕಾಂಗ್ರೆಸ್‌ನ ವೆಂಕಟರಮಣೇಗೌಡ ವಿರುದ್ಧ  ಗೆಲುವು ದಾಖಲಿಸಿದ್ದಾರೆ. 

ಅಂಜಲಿ ನಿಂಬಾಳ್ಕರ್‌ಗೆ ಸೋಲು:

ಬೆಳಗಾವಿ ಜಿಲ್ಲೆಯ ಅಂಜಲಿ ನಿಂಬಾಳ್ಕರ್ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಅವರನ್ನು ಈ ಬಾರಿ ಉತ್ತರ ಕನ್ನಡದಿಂದ ಕಣಕ್ಕೆ ಇಳಿಸಲಾಗಿತ್ತು. ಅವರು ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಸೋಲು ಕಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT