ಬೆಂಗಳೂರು: ತೋಟಗಾರಿಕಾ ಸಚಿವ ಮುನಿರತ್ನ ಆಸ್ತಿ ಎರಡೂವರೆ ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಸದ್ಯ ಅವರ ಕುಟುಂಬದ ಆಸ್ತಿ ಮೌಲ್ಯ ₹293.60 ಕೋಟಿ ಇದೆ.

60 ಕಡೆ ಕೃಷಿ ಜಮೀನು, 25 ಕಡೆ ಕೃಷಿಯೇತರ ಜಾಗ, ಎರಡು ವಾಣಿಜ್ಯ ಕಟ್ಟಡ, ಆರು ವಸತಿ ಕಟ್ಟಡಗಳಿವೆ. ಐಷಾರಾಮಿ ಕಾರು, ಟಿಪ್ಪರ್‌ಗಳು ಸೇರಿ 30 ವಾಹನಗಳಿವೆ ಎಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ಸಲ್ಲಿಸಿರುವ ನಾಮಪತ್ರದ ಜತೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ವಿವರ ನೀಡಿದ್ದಾರೆ.

ಸ್ವತಃ ಮುನಿರತ್ನ ಅವರ ಹೆಸರಿನಲ್ಲಿ ₹31.34 ಕೋಟಿ ಮೌಲ್ಯದ ಚರಾಸ್ತಿ, ₹239.29 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ₹93.48 ಕೋಟಿ ಸಾಲ ಇದೆ.

ಪತ್ನಿ ಹೆಸರಿನಲ್ಲಿ ₹1.66 ಕೋಟಿ ಮೌಲ್ಯದ ಚರಾಸ್ತಿ, ₹21.29 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ₹8.73 ಕೋಟಿ ಸಾಲ ಇದೆ. 2020ರ ಅಕ್ಟೋಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಅವರ ಒಟ್ಟು ಆಸ್ತಿ ಮೌಲ್ಯ ₹89.13 ಕೋಟಿ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.