ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮಂದಗತಿಯಲ್ಲಿ ಸಾಗಿದೆ. ಬೆಳಿಗ್ಗೆ 11 ಗಂಟೆವರೆಗೆ ಶೇ 19.99 ಮತದಾನವಾಗಿದೆ.

ಅದರಲ್ಲೂ ನಗರ ಪ್ರದೇಶದಲ್ಲಿ ಬೆಳಗ್ಗಿನಿಂದಲೇ ಮತದಾನ ಪ್ರಮಾಣ ತೀರಾ ನೀರಸವಾಗಿದೆ. ಬಿಸಿಲಧಗೆ ಹೆಚ್ಚಿದ್ದು ಮತದಾರರು ಮತಗಟ್ಟೆಗಳತ್ತ ಸುಳಿಯುತ್ತಿಲ್ಲ. ಕೆಲವೆಡೆ ಯುವಕರಿಗಿಂತ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಿದ್ದದ್ದು ಕಂಡುಬಂತು.

ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆ ವೇಳೆಯಲ್ಲಿ ಶೇ 7.79 ಮತದಾನವಾಗಿತ್ತು. 11 ಗಂಟೆ ವೇಳೆಗೆ ತುಸು ಚೇತರಿಸಿಕೊಂಡು ಶೇ 19.99 ಮತದಾನವಾಗಿದೆ. ಕ್ಷೇತ್ರ ವ್ಯಾಪ್ತಿಯ ಮಡಿಕೇರಿ (ಶೇ 27.79), ವಿರಾಜಪೇಟೆ (ಶೇ 30.65), ಪಿರಿಯಾಪಟ್ಟಣ (ಶೇ 19.78), ಹುಣಸೂರು (ಶೇ 21.61), ಚಾಮುಂಡೇಶ್ವರಿ (ಶೇ 17.93), ಕೃಷ್ಣರಾಜ (ಶೇ 15.96), ಚಾಮರಾಜ (ಶೇ 19.12), ನರಸಿಂಹರಾಜ (ಶೇ 10.17) ಮತದಾನವಾಗಿದೆ.

ಮೈಸೂರು ನಗರ ವ್ಯಾಪ್ತಿಯ ನರಸಿಂಹರಾಜ ಕ್ಷೇತ್ರದಲ್ಲಿ ಕೇವಲ ಶೇ 10.17 ಮತದಾನವಾಗಿದೆ. ಕೃಷ್ಣರಾಜ, ಚಾಮುಂಡೇಶ್ವರಿ, ಚಾಮರಾಜ ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ಮತದಾನವಾಗಿದೆ. ಬಹುತೇಕ ಕಡೆ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.

ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಕ್ಷೇತ್ರದಲ್ಲಿ 2,187 ಮತಗಟ್ಟೆಗಳಿದ್ದು, 18.95 ಲಕ್ಷ ಮತದಾರರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.