ನವದೆಹಲಿ: ‘ಪ್ರಮಾಣ ವಚನ ಸಮಾರಂಭಕ್ಕೆ ಅವಕಾಶ ನೀಡಕೂಡದು’ ಎಂದು ಕೋರಿ ಕಾಂಗ್ರೆಸ್–ಜೆಡಿಎಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ನಡೆಸಿದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ, ನಾಳೆ(ಶನಿವಾರ) ಸಂಜೆ 4ಕ್ಕೆ ವಿಶ್ವಾಸಮತ ಸಾಬೀತುಪಡಿಸುವಂತೆ ಆದೇಶಿಸಿತು.

ಶುಕ್ರವಾರ ಅರ್ಜಿಯ ಮುಂದುವರಿದ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎಸ್.ಎ. ಬೋಬ್ಡೆ ಹಾಗೂ ಅಶೋಕ್ ಭೂಷಣ್ ಅವರಿದ್ದ ತ್ರಿಸದಸ್ಯ ಪೀಠ ಈ ಆದೇಶ ನೀಡಿತು.

ವಿಚಾರಣೆ ವೇಳೆ ಪೀಠ, ‘ನಾಳೆಯೇ (ಶನಿವಾರ) ವಿಶ್ವಾಸಮತ ಯಾಚನೆಗೆ ಸೂಚಿಸಬೇಕೆ? ಅಥವಾ ರಾಜ್ಯಪಾಲರ ನಿರ್ಧಾರವನ್ನು ವಿಚಾರಣೆಗೆ ಒಳಪಡಿಸಬೇಕೆ?’ ಎಂದು ಸುಪ್ರೀಂ ಕೋರ್ಟ್ ಕಾಂಗ್ರೆಸ್–ಜೆಡಿಎಸ್ ‘ಮೈತ್ರಿ’ ವಕೀಲರ ಮುಂದೆ ಆಯ್ಕೆಗಳನ್ನು ಇಟ್ಟಿತು.

‘ನಾಳೆಯೇ ವಿಶ್ವಾಸಮತ ಸಾಬೀತುಪಡಿಸಲು ಸಿದ್ಧ’ ಎಂದು ಜೆಡಿಎಸ್– ಕಾಂಗ್ರೆಸ್ ಪರ ವಕೀಲ ಸಿಂಘ್ವಿ ಪೀಠಕ್ಕೆ ತಿಳಿಸಿದರು. ಅದಕ್ಕೆ, ರೋಹಟಗಿ ವಿರೋಧ ವ್ಯಕ್ತಪಡಿಸಿದರು. ಶನಿವಾರವೇ ಬಹುಮತ ಸಾಬೀತುಪಡಿಸಲಿ ಎಂಬ ಕಾಂಗ್ರೆಸ್ ಕೋರಿಕೆಗೆ ಶನಿವಾರ, ಭಾನುವಾರ ಬೇಡ ಎಂದು ರೋಹಟಗಿ ತಿಳಿಸಿದರು. ಇದನ್ನು ಪೀಠ ತಿರಸ್ಕರಿಸಿತು.

ನಾಳೆ ಸಂಜೆ 4ಕ್ಕೆ ಬಹುಮತ ಸಾಬೀತಿಗೆ ಪೀಠ ಸಮಯ ನಿಗದಿ ಮಾಡಿದ್ದು, ಈಗ ನ್ಯಾಯಮೂರ್ತಿ ಎ.ಕೆ. ಸಕ್ರಿ ಅವರು ವಿವರವಾದ ಆದೇಶವನ್ನು ಬರೆಸುತ್ತಿದ್ದಾರೆ.

ವಿಚಾರಣೆ ಆರಂಭದಲ್ಲಿ, ಕರ್ನಾಟಕದ ರಾಜ್ಯಪಾಲರು ಯಾವ ಆಧಾರದ ಮೇಲೆ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಕೊಟ್ಟರು? ಎಂದು ಸುಪ್ರಿಂ ಕೋರ್ಟ್ ನ್ಯಾಯಾಧೀಶರು ಪ್ರಶ್ನಿಸಿದರು.

‘ಕಾಂಗ್ರೆಸ್ ಮತ್ತು ಜೆಡಿಎಸ್‌ನ ಶಾಸಕರು ಆ ಎರಡೂ ಪಕ್ಷಗಳಿಗೆ ಲಿಖಿತ ಬೆಂಬಲ ನೀಡಿಲ್ಲ ಎಂಬ ಮಾಹಿತಿ ನಮ್ಮಲ್ಲಿ ಇದೆ’ ಎಂದು ಬಿಜೆಪಿ ಪರ ವಕೀಲ ಮುಕುಲ್ ರೋಹಟಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

‘ಹೆಚ್ಚು ಸ್ಥಾನ ಪಡೆದವರನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಟ್ಟಿದೆ.

‘ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವುದು ಅತ್ಯುತ್ತಮ ಆಯ್ಕೆ ಅನಿಸುತ್ತೆ’ ಎಂದು ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ಅರ್ಜುನ್ ಕುಮಾರ್ ಸಿಕ್ರಿ ಹೇಳಿದರು.

ಸರ್ಕಾರ ರಚನೆಗೆ ಅವಕಾಶ ಕೋರಿ ರಾಜ್ಯಪಾಲರಿಗೆ ಯಡಿಯೂರಪ್ಪ ಬರೆದಿದ್ದ ಎರಡು ಪತ್ರಗಳನ್ನು ಬಿಜೆಪಿ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದರು.

‘ನಾಳೆಯೇ ವಿಶ್ವಾಸಮತ ಯಾಚನೆಗೆ ಸಿದ್ಧ’ ಎಂದು ಜೆಡಿಎಸ್– ಕಾಂಗ್ರೆಸ್ ಪರ ವಕೀಲರು ಸುಪ್ರಿಂ ಕೋರ್ಟ್‌ಗೆ ತಿಳಿಸಿದರು.

ಇದಾದ ಬಳಿಕ, ‘ವಿಶ್ವಾಸಮತ ಸಾಬೀತುಪಡಿಸಲು ನಾವೂ ಸಿದ್ಧ’ ಎಂದು ಬಿಜೆಪಿ ಪತ ವಕೀಲರು ತಿಳಿಸಿದರು.

ಎಲ್ಲ ಶಾಸಕರೂ ಸದನದಲ್ಲಿ ಹಾಜರಿರಬೇಕು. ಸೂಕ್ತ ಭದ್ರತೆಗೆ ವ್ಯವಸ್ಥೆ ಮಾಡಲು ಡಿಜಿಪಿಗೆ ಸೂಚನೆ ನೀಡಿ ಪೀಠ ಆದೇಶಿಸಿದೆ.

ನಾಳೆಯೇ ಬಹುಮತ ಸಾಬೀತು ಪಡಿಸುವಂತೆ ಸೂಚಿಸಲು ಸುಪ್ರೀಂ ಕೋರ್ಟ್ ಇಂಗಿತ ವ್ಯಕ್ತಪಡಿಸಿತು. ಆದರೆ, ಯಡಿಯೂರಪ್ಪ ಪರ ವಕೀಲ ರೋಹಟಗಿ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಬಹುಮತ ಸಾಬೀತು ವೇಳೆ ವಿಡಿಯೊ ಚಿತ್ರೀಕರಣಕ್ಕೆ ಮಾಧ್ಯಮಗಳಗೆ ಅವಕಾಶ ಬೇಡ ಎಂದು ಪೀಠ ಹೇಳಿತು. ಆಂಗ್ಲೋ ಇಂಡಿಯನ್ ಸದಸ್ಯೆ ನೇಮಕಬೇಡ ಎಂದು ಪೀಠ ಹೇಳಿತು.

ಬಹುಮತ ಸಾಬೀತಿಗೆ ನಮ್ಮ ಸದಸ್ಯರು ಸಿದ್ಧ ಎಂದು ಕಾಂಗ್ರೆಸ್ ವಕೀಲ ಸಿಂಘ್ವಿ ತಿಳಿಸಿದರು. ಅದಕ್ಕೆ, ರೋಹಟಗಿ ವಿರೋಧ ವ್ಯಕ್ತಪಡಿಸಿದರು. ಶನಿವಾರವೇ ಬಹುಮತ ಸಾಬೀತುಪಡಿಸಲಿ ಎಂಬ ಕಾಂಗ್ರೆಸ್ ಕೋರಿಕೆಗೆ ಶನಿವಾರ, ಭಾನುವಾರ ಬೇಡ ಎಂದು ರೋಹಟಗಿ ತಿಳಿಸಿದರು. ಇದನ್ನು ಪೀಠ ತಿರಸ್ಕರಿಸಿತು.

ನಾಳೆ ಸಂಜೆ 4ಕ್ಕೆ ಬಹುಮತ ಸಾಬೀತಿಗೆ ಪೀಠ ಸಮಯ ನಿಗದಿ ಮಾಡಿತು. ಈಗ ನ್ಯಾಯಮೂರ್ತಿ ಎ.ಕೆ. ಸಕ್ರಿ ಅವರು ವಿವರವಾದ ಆದೇಶವನ್ನು ಬರೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.