ಬೆಂಗಳೂರು: ಖ್ಯಾತ ನಟ,ನಿರ್ಮಾಪಕ ದ್ವಾರಕೀಶ್ ಅವರು ಎಚ್.ಎಸ್.ಆರ್ ಲೇಔಟ್ನಲ್ಲಿರುವ ತಮ್ಮ ಮನೆಯನ್ನು ಮಾರಾಟ ಮಾಡಿದ್ದು, ಇದನ್ನು ನಿರ್ದೇಶಕ ರಿಷಬ್ ಶೆಟ್ಟಿ ಅವರು ಖರೀದಿಸಿದ್ದಾರೆ ಎನ್ನಲಾಗಿದೆ.

ಮನೆಯನ್ನು ₹10.5 ಕೋಟಿಗೆ ಮಾರಾಟ ಮಾಡಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ‘ದ್ವಾರಕೀಶ್ ಚಿತ್ರ’ದ ನಿರ್ಮಾಣದಲ್ಲಿ ಬಂದಿದ್ದ ‘ಆಯುಷ್ಮಾನ್ ಭವ’ ಚಿತ್ರವು ಯಶಸ್ಸು ಕಂಡಿರಲಿಲ್ಲ. ನಂತರದಲ್ಲಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ವಿತರಕ ಜಯಣ್ಣ ಅವರೊಂದಿಗೆ ವಾಗ್ವಾದವೂ ನಡೆದಿತ್ತು. ಈ ಸಂದರ್ಭದಲ್ಲಿ ‘ಸಿನಿಮಾ ಹಂಚಿಕೆದಾರ ಜಯಣ್ಣ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದಾರೆ’ ಎಂದು ಆರೋಪಿಸಿ ದ್ವಾರಕೀಶ್ ಎಚ್ಎಸ್ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

‘ದ್ವಾರಕೀಶ್ ಅವರ ಪುತ್ರ ಯೋಗಿ ಅವರಿಗೆ ಚಿತ್ರದ ನಿರ್ಮಾಣದ ವೇಳೆ ಹಣಕಾಸು ಸಮಸ್ಯೆ ಎದುರಾದಾಗ ಸ್ನೇಹಿತರಿಂದ ₹ 2 ಕೋಟಿ ಸಾಲ ಕೊಡಿಸಿದ್ದೇನೆ. ಯೋಗಿ ಅವರು ನನ್ನ ಸ್ನೇಹಿತರಿಗೆ ಇಂದಿಗೂ ಅಸಲು ಮತ್ತು ಬಡ್ಡಿ ನೀಡಿಲ್ಲ. ಸಾಲ ತೀರಿಸಲು ಮನೆ ಮಾರುತ್ತೇನೆ ಎಂದು ಯೋಗಿ ಹೇಳಿದರು. ಬೇರೆಡೆ ಹಣ ಹೊಂದಿಸಿ ಸಾಲ ತೀರಿಸುವಂತೆ ಸಲಹೆ ನೀಡಿದ್ದೆ. ಹಣಕಾಸು ವಿವಾದಕ್ಕೆ ಸಂಬಂಧಿಸಿದಂತೆ ನನ್ನ ಹೆಸರನ್ನು ಅನಗತ್ಯವಾಗಿ ಸೇರಿಸುವುದು ಸರಿಯಲ್ಲ’ ಎಂದು ನಿರ್ಮಾಪಕಕೆ. ಮಂಜು ಕೂಡಾ ಈ ಹಿಂದೆ ಹೇಳಿದ್ದರು.

ಎದುರಾಗಿರುವ ಆರ್ಥಿಕ ಸಂಕಷ್ಟದಿಂದ ಹೊರಬರಲೆಂದೇ ದ್ವಾರಕೀಶ್ ಮನೆ ಮಾರಿದ್ದಾರೆ ಎನ್ನಲಾಗಿದೆ. ಆದರೆ, ಈ ಕುರಿತು ಪ್ರತಿಕ್ರಿಯೆ ನೀಡಲು ದ್ವಾರಕೀಶ್ ನಿರಾಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.