ಹೈದರಾಬಾದ್: ‘ಆರ್‌ಆರ್‌ಆರ್’ ಯಶಸ್ಸಿನ ಬಳಿಕ ಹೊಸ ಸಿನಿಮಾಗಳಲ್ಲಿ ನಟ ರಾಮ್ ಚರಣ್ ಬ್ಯುಸಿಯಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಹೊಸ ವಿಚಾರದಿಂದಾಗಿ ಸುದ್ದಿಯಲ್ಲಿದ್ದಾರೆ.

ಕ್ಯಾನ್ಸರ್‌ನಿಂದ ಬಳಲುತ್ತಿರುವ 9 ವರ್ಷದ ಬಾಲಕನನ್ನು ಭೇಟಿಯಾಗುವ ಮೂಲಕ ರಾಮ್ ಚರಣ್ ಗಮನ ಸೆಳೆದಿದ್ದಾರೆ. ಇದೀಗ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

9 ವರ್ಷದ ಬಾಲಕ ಮಣಿ ಕುಶಾಲ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾನೆ. ಆತನನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆತ ರಾಮ್ ಚರಣ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಕುಶಾಲ್‌ಗೆ ರಾಮ್ ಚರಣ್‌ರನ್ನು ಭೇಟಿ ಮಾಡಬೇಕು ಎನ್ನುವ ಆಸೆ ಇತ್ತು. ಈ ಆಸೆಯನ್ನು ಈಡೇರಿಸಿರುವ ರಾಮ್ ಚರಣ್, ಆಸ್ಪತ್ರೆಗೆ ತೆರಳಿ ಬಾಲಕನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ರಾಮ್ ಚರಣ್ ಅವರ ಹೃದಯ ವೈಶಾಲ್ಯತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಸ್.ಎಸ್. ರಾಜಮೌಳಿ ನಿರ್ದೇಶನದ ತೆಲುಗಿನ ‘ಆರ್‌ಆರ್‌ಆರ್’ ಚಿತ್ರ ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿದೆ. ಅತ್ಯುತ್ತಮ ಮೂಲ ಗೀತೆ (ಒರಿಜಿನಲ್) ವರ್ಗದಲ್ಲಿ ಈ ಚಿತ್ರದ ‘ನಾಟು.. ನಾಟು...’ ಗೀತೆಯು ಸ್ಪರ್ಧೆಯಲ್ಲಿದೆ.

‘ಆಸ್ಕರ್’ ಹೆಸರಲ್ಲಿ ನೀಡುವ 95ನೇ ಅಕಾಡೆಮಿ ಅವಾರ್ಡ್ಸ್‌ಗೆ ಸ್ಪರ್ಧೆಯಲ್ಲಿರುವ ಚಿತ್ರಗಳ ವಿವರಗಳನ್ನು ಇತ್ತೀಚೆಗೆ ಪ್ರಕಟಿಸಲಾಗಿದೆ. ‘ನಾವು ಇತಿಹಾಸ ಸೃಷ್ಟಿಸಿದೆವು..’ ಎಂದು ಆರ್‌ಆರ್‌ಆರ್ ಚಿತ್ರತಂಡ ತನ್ನ ವೆಬ್‌ಸೈಟ್‌ನಲ್ಲಿ ಸಂತಸ ಹಂಚಿಕೊಂಡಿದೆ.

ಎಂ.ಎಂ.ಕೀರವಾಣಿ ಅವರು ಸಂಗೀತ ನಿರ್ದೇಶಿಸಿ, ಕಾಲಭೈರವ ಅವರು ಹಾಡಿರುವ ‘ನಾಟು ನಾಟು..’ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದೆ.

ಈ ಚಿತ್ರಗೀತೆಗಾಗಿ ಎಂ.ಎಂ.ಕೀರವಾಣಿ ಅವರು ಈಚೆಗೆ ‘ಗೋಲ್ಡನ್ ಗ್ಲೋಬ್’ ಮತ್ತು ಕಳೆದ ತಿಂಗಳು ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿ ಪುರಸ್ಕೃತರಾಗಿದ್ದರು. ಅಲ್ಲದೆ, ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ವರ್ಗದಲ್ಲಿ ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿಗೆ ಆರ್‌ಆರ್‌ಆರ್ ಆಯ್ಕೆಯಾಗಿತ್ತು.

ಓದಿ... ನಟ ಸುದೀಪ್ ಟ್ವೀಟ್ ಬೆನ್ನಲ್ಲೇ ವಾಲ್ಮೀಕಿ ಜಾತ್ರೆಗೆ ಆಹ್ವಾನಿಸಿದ್ದ ಫೋಟೊ ಹರಿದಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.