ಬೆಂಗಳೂರು: ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಸಾಮ್ರಾಟ್ ಪೃಥ್ವಿರಾಜ್ ಚಿತ್ರಕ್ಕೆ ಕುವೈತ್ ಮತ್ತು ಒಮಾನ್ನಲ್ಲಿ ನಿಷೇಧ ಹೇರಲಾಗಿದೆ. ಅದರ ಬೆನ್ನಲ್ಲೇ, ಕತಾರ್ನಲ್ಲೂ ಅಕ್ಷಯ್ ಸಿನಿಮಾ ಬಿಡುಗಡೆಯನ್ನು ತಡೆಯಲಾಗಿದೆ.

ರಾಜ ಪೃಥ್ವಿರಾಜ್ ಚೌಹಾಣ್ ಅವರ ಜೀವನ, ಹೋರಾಟದ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ.

ಭಾರತದ ಮೇಲೆ ಸಾಮ್ರಾಜ್ಯಶಾಹಿ ಮುಸ್ಲಿಮರ ಆಕ್ರಮಣವನ್ನು ಎದುರಿಸುವ ರಾಜನ ಕಥೆಯನ್ನು ಚಿತ್ರ ಹೊಂದಿದೆ. ಆದರೆ ಕುವೈತ್, ಒಮಾನ್ ಮತ್ತು ಕತಾರ್ ದೇಶಗಳು ಚಿತ್ರ ಬಿಡುಗಡೆಗೆ ನಿರ್ಬಂಧ ಹೇರಿವೆ ಎಂದು ಮೂಲಗಳು ಹೇಳಿವೆ.

ಡಾ. ಚಂದ್ರಪ್ರಕಾಶ್ ದ್ವಿವೇದಿ ಅವರು ಸಾಮ್ರಾಟ್ ಪೃಥ್ವಿರಾಜ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಾಜ ಪೃಥ್ವಿರಾಜನ ರಾಣಿಯಾಗಿ ‘ಸಂಯೋಗಿತಾ‘ ಪಾತ್ರದಲ್ಲಿ ಮಾನುಷಿ ಚಿಲ್ಲರ್ ನಟಿಸಿದ್ದಾರೆ.

‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ

ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಶುಕ್ರವಾರ ತೆರೆಕಂಡಿದೆ.

ಸಾಯಿ ಪಲ್ಲವಿ ಅಭಿನಯದ‘ವಿರಾಟ ಪರ್ವಂ’ ಸಿನಿಮಾ ಜುಲೈ 1ಕ್ಕೆ ತೆರೆಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.