ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ನಟ ಅಕ್ಷಯ್ ಕುಮಾರ್ ಅವರ ಹೊಸ ಸಿನಿಮಾಕ್ಕೆ ಶೀರ್ಷಿಕೆ ಸಿದ್ಧವಾಗಿದ್ದು ‘ಸರ್ಫಿರಾ’ (Sarfira) ಎನ್ನುವ ಹೊಸ ಚಿತ್ರ ಇದೇ ವರ್ಷ ಜುಲೈ 12 ರಂದು ತೆರೆಗೆ ಬರಲಿದೆ.

ತಮಿಳು ನಟ ಸೂರ್ಯ ನಟನೆಯ ರಾಷ್ಟ್ರಪ್ರಶಸ್ತಿ ಚಿತ್ರ ‘ಸೂರರೈ ಪೋಟ್ರು’ ಸಿನಿಮಾದ ರಿಮೇಕ್ ಇದಾಗಿದೆ.

ಸೂರರೈ ಪೋಟ್ರು ನಿರ್ದೇಶಿಸಿದ್ದ ಸುಧಾ ಕೊಂಗ್ರಾ ಅವರೇ ‘ಸರ್ಫಿರಾ’ಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಈ ಕುರಿತು ಟೈಟಲ್ ಟೀಸರ್ ಒಂದನ್ನು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಇಂದು ಹಂಚಿಕೊಂಡಿದ್ದಾರೆ.

ಸರ್ಫಿರಾ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ಪರೇಶ್ ರಾವಲ್, ರಾಧಿಕಾ ಮದನ್ ಹಾಗೂ ಸೀಮಾ ಬಿಸ್ವಾಸ್ ಪ್ರಮುಖ ತಾರಾಗಣದಲ್ಲಿರಲಿದ್ದಾರೆ.

ಸೂರರೈ ಪೋಟ್ರು ಚಿತ್ರಕ್ಕೆ 68 ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ನಲ್ಲಿ ಅತ್ಯುತ್ತಮ ಫೀಚರ್ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಟಿ ಹಾಗೂ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಬಂದಿತ್ತು.

ಈ ಸಿನಿಮಾ ಕನ್ನಡಿಗ ಹಾಗೂ ಏರ್ ಡೆಕ್ಕನ್ ಕಂಪನಿ ಸ್ಥಾಪಕ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರ ಜೀವನ ಕಥೆ ಆಧರಿಸಿದ ಚಿತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.