ಲೀಲಾವತಿಯವರ ತವರು ದಕ್ಷಿಣ ಕನ್ನಡದ ಬೆಳ್ತಂಗಡಿ. ಮಹಾಲಿಂಗ ಭಾಗವತರ ಶ್ರೀ ಸತ್ಯ ಸಾಮ್ರಾಜ್ಯ ನಾಟಕದ ಕಂಪನಿಯನ್ನು ಅವರು ಚಿಕ್ಕ ವಯಸ್ಸಿನಲ್ಲೇ ಸೇರಿಕೊಂಡಿದ್ದರು. ಶಂಕರ್‌ಸಿಂಗ್ ನಿರ್ಮಾಣದ ‘ನಾಗಕನ್ನಿಕಾ’ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ 1949ರಲ್ಲಿ ನಟಿಸಿದ್ದ ಅವರು, 1958ರಲ್ಲಿ ಸುಬ್ಬಯ್ಯನಾಯ್ಡು ಅವರ ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ರಾಣಿ ಹೊನ್ನಮ್ಮ’ ಪೂರ್ಣಪ್ರಮಾಣದ ನಾಯಕಿಯಾಗಿ ಅವರು ಗಮನಸೆಳೆದ ಮೊದಲ ಚಿತ್ರ. ‘ರಣಧೀರ ಕಂಠೀರವ’ ಅವರಿಗೆ ಹೆಸರು ತಂದುಕೊಟ್ಟ ಚಿತ್ರ. ‘ಕಣ್ತೆರೆದು ನೋಡು’, ’ಗಾಳಿಗೋಪುರ’, ‘ಕನ್ಯಾರತ್ನ’ , ‘ಕುಲವಧು’ ಎಲ್ಲ ಸಿನಿಮಾಗಳಲ್ಲೂ ಅವರ ನಟನೆಯ ಕೌಶಲ ಕಣ್ಣಿಗೆ ಕಟ್ಟಿದೆ. ಲೀಲಾವತಿಯವರು ತಮ್ಮ 85ನೇ ವಯಸ್ಸಿನಲ್ಲಿ ಅಂದರೆ, 2023ರ ಡಿ.8ರಂದು ನಿಧನರಾದರು.

.Actress Leelavathi | ಮರೆಯಾದ ಕುಲವಧು.ನಟಿ ಲೀಲಾವತಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ.ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನ: ನಟಿ ಲೀಲಾವತಿ ಅಂತಿಮಯಾತ್ರೆ ವಿವರ.ನಟಿ ಲೀಲಾವತಿ ದಾವಣಗೆರೆ ನಂಟು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.