ಮುಂಬೈ: ನಟ ಅಮಿತಾಬ್ ಬಚ್ಚನ್ ಹಾಗೂ ನಟಿ ಅನುಷ್ಕಾ ಶರ್ಮಾ ಅವರು ಹೆಲ್ಮೆಟ್ ಧರಿಸದೇ ಬೈಕ್‌ನಲ್ಲಿ ಸಂಚಾರ ಮಾಡಿದ್ದು ಇತ್ತೀಚೆಗೆ ಹೆಚ್ಚು ಸುದ್ದಿ ಮಾಡಿತ್ತು. ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ನಟರನ್ನು ಕೂರಿಸಿಕೊಂಡಿದ್ದ ವಾಹನ ಸವಾರರಿಗೆ ಈಗ ಮುಂಬೈ ಪೊಲೀಸರು ದಂಡ ವಿಧಿಸಿದ್ದಾರೆ.

ಈ ಸಂಬಂಧ ಇಬ್ಬರೂ ನಟರ ಫೋಟೊ, ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ನಟರ ಈ ಕ್ರಮವನ್ನು ಟೀಕಿಸಿದ್ದ ನೆಟ್ಟಿಗರು, ಅವರ ಫೋಟೊ, ವಿಡಿಯೊಗಳನ್ನು ಮುಂಬೈ ಪೊಲೀಸರ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ಪೊಲೀಸರು ಕಾನೂನು ಪಾಲಿಸದಿದ್ದಕ್ಕೆ, ನಟರನ್ನು ಕೂರಿಸಿಕೊಂಡಿದ್ದ ಸವಾರರಿಗೆ ದಂಡ ವಿಧಿಸಿದ್ದಾರೆ. ದಂಡ ವಿಧಿಸಿದ ಚಲನ್ ಅನ್ನೂ ಪೊಲೀಸರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮೋಟಾರು ವಾಹನ ಕಾಯ್ದೆ ಅಡಿ ಸೆಕ್ಷನ್ 129/194 (ಡಿ), ಸೆಕ್ಷನ್ 5/180 ಹಾಗೂ ಸೆಕ್ಷನ್ 3(1)181 ಅಡಿಯಲ್ಲಿ ಅನುಷ್ಕಾ ಶರ್ಮಾ ಅವರನ್ನು ಕೂರಿಸಿಕೊಂಡಿದ್ದ ಸವಾರನಿಗೆ ₹10,500 ದಂಡವನ್ನು ವಿಧಿಸಲಾಗಿದೆ. ಸವಾರನು ಈ ದಂಡವನ್ನು ಪಾವತಿ ಮಾಡಿದ್ದು, ಈ ಕುರಿತೂ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

‘ಅಮಿತಾಬ್ ಬಚ್ಚನ್ ಅವರನ್ನು ಕೂರಿಸಿಕೊಂಡಿದ್ದ ಸವಾರನಿಗೆ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129/194 (ಡಿ) ಅಡಿಯಲ್ಲಿ ₹ 1,000 ದಂಡ ವಿಧಿಸಲಾಗಿತ್ತು. ಈ ಹಣವನ್ನು ಸವಾರ ಪಾವತಿಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.