ಮುಂಬೈ: ಬಾಲಿವುಡ್‌ನ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್‌ನ (ಐಎಸ್‌ಪಿಎಲ್) ಮುಂಬೈ ತಂಡದ ಮಾಲೀಕರಾಗಿದ್ದಾರೆ. ಈ ಬಗ್ಗೆ ಅವರು ತಮ್ಮ ವೈಯಕ್ತಿಕ ಬ್ಲಾಗ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಐಎಸ್‌ಪಿಎಲ್ ಭಾರತದ ಮೊದಲ ಟೆನಿಸ್ ಬಾಲ್ ಟಿ10 ಕ್ರಿಕೆಟ್ ಪಂದ್ಯಾವಳಿಯಾಗಿದ್ದು, ಉದ್ಘಾಟನಾ ಆವೃತ್ತಿಯು ಮಾರ್ಚ್ 2ರಿಂದ ಮಾರ್ಚ್ 9ರವರೆಗೆ ಮುಂಬೈನಲ್ಲಿ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಪಂದ್ಯಾವಳಿಯಲ್ಲಿ 19 ಪಂದ್ಯಗಳಿರಲಿದ್ದು, ಹೈದರಾಬಾದ್, ಮುಂಬೈ, ಬೆಂಗಳೂರು, ಚೆನ್ನೈ, ಕೋಲ್ಕತ್ತ ಮತ್ತು ಶ್ರೀನಗರ ಸೇರಿ ಆರು ತಂಡಗಳು ಭಾಗವಹಿಸಲಿವೆ.

ಪಂದ್ಯಾವಳಿಯ ಭಾಗವಾಗಿರುವುದು ನನಗೆ ಇದು ಹೊಸ ಆರಂಭ ಎಂದು ಬಚ್ಚನ್ ಹೇಳಿದ್ದಾರೆ.

ಹೊಸ ದಿನ .. ಮತ್ತು ಹೊಸ ಉದ್ಯಮ .. ಇದೊಂದು ದೊಡ್ಡ ಗೌರವ. ಮುಂಬೈ ತಂಡದ ಮಾಲೀಕರಾಗಿರುವುದು ಅದೃಷ್ಟ ಎಂದು 81 ವರ್ಷದ ನಟ ತಮ್ಮ ವೈಯಕ್ತಿಕ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ಗಲ್ಲಿಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ ಪ್ರತಿಭೆಗಳಿಗೆ ವೇದಿಕೆ ಸಿಕ್ಕಂತಾಗಿದೆ. ಐಎಸ್‌ಪಿಎಲ್ ಒಂದು ಉದಾತ್ತ ಪರಿಕಲ್ಪನೆ ಎಂದು ಬಣ್ಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.